ಇಂದು ಚಿರಂಜೀವಿ ಸರ್ಜಾ ಜನ್ಮದಿನ: ”ಜೂನಿಯರ್ ಚಿರು ಕಮಿಂಗ್ ಸೂನ್” ಎಂದ ಧ್ರುವ
Team Udayavani, Oct 17, 2020, 8:33 AM IST
ಇಂದು ನಟ ದಿ.ಚಿರಂಜೀವಿ ಸರ್ಜಾ ಅವರ ಜನ್ಮದಿನ. ಪ್ರತಿ ವರ್ಷ ಚಿರಂಜೀವಿ ಜನ್ಮದಿನವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ, ಚಿರಂಜೀವಿ ಅಗಲಿರುವುದರಿಂದ ಅವರ ಅಭಿಮಾನಿಗಳು ಚಿರಂಜೀವಿಯವರ ಸಿನಿಮಾಗಳ ಮೂಲಕ ಆಚರಿಸಲು ನಿರ್ಧರಿಸಿದ್ದಾರೆ.
ಈಗಾಗಲೇ ಚಿರು ನಟನೆಯ “ಶಿವಾರ್ಜುನ’ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ಇಂದು ಚಿರು ನಟನೆಯ “ಕ್ಷತ್ರಿಯ’ ಚಿತ್ರದ ಟೀಸರ್ ಹಾಗೂ “ರಾಜ ಮಾರ್ತಾಂಡ’ ಚಿತ್ರದ ಹಾಡುಗಳು ಬಿಡುಗಡೆಯಾಗಲಿವೆ.
ಸಹೋದರನ ಹುಟ್ಟುಹಬ್ಬಕ್ಕೆ ಇನ್ಸ್ ಸ್ಟಾಗ್ರಾಮ್ನಲ್ಲಿ ಶುಭಕೋರಿರುವ ಧ್ರುವ ಸರ್ಜಾ, “ಹ್ಯಾಪಿ ಬರ್ತ್ಡೇ ಚಿರು. ಮೈ ಲವ್ ಫಾರೆವರ್… ಜೂನಿಯರ್ ಚಿರು ಕಮಿಂಗ್ ಸೂನ್’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿರು ಪತ್ನಿ ಮೇಘನಾ ರಾಜ್ ಅವರ ಸೀಮಂತ ಸಮಾರಂಭದ ವಿಡಿಯೋವೊಂದನ್ನುಕೂಡಾ ಹಂಚಿಕೊಂಡಿದ್ದಾರೆ.
ಇನ್ನು, ಮಾರ್ಚ್ನಲ್ಲಿ “ಶಿವಾರ್ಜುನ’ ಚಿತ್ರ ತೆರೆಕಂಡಾಗ ಸಂತೋಷ್ ಚಿತ್ರ ಮಂದಿರದಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾವನ್ನುಕಣ್ತುಂಬಿಕೊಂಡಿದ್ದರು. ಈಗ ರೀ ರಿಲೀಸ್ ಆದ ನಂತರ ಮತ್ತೂಮ್ಮೆ ಚಿತ್ರಮಂದಿರಕ್ಕೆ ಬರಲು ನಿರ್ಧರಿಸಿದ್ದಾರೆ. ಇಂದು ಚಿರು ಜನ್ಮದಿನ. “ಶಿವಾರ್ಜುನ’ ಚಿತ್ರದ ಮಧ್ಯಾಹ್ನದ ಶೋ ನೋಡಲು ಧ್ರುವ ಸರ್ಜಾ ಹಾಗೂ ಸಿನಿಮಾ ತಂಡ ಆಗಮಿಸಲಿದೆ. ಈ ಮೂಲಕ ಸಹೋದರನ ರೀ ರಿಲೀಸ್ ಚಿತ್ರಕ್ಕೆ ಧ್ರುವ ಪ್ರೋತ್ಸಾಹ ನೀಡುತ್ತಿದ್ದಾರೆ.