ಕನ್ನಡಿಗರ ಅಭಿಮಾನಕ್ಕೆ ಸನ್ನಿ ಫಿದಾ
Team Udayavani, May 17, 2021, 12:11 PM IST
ಒಂದು ಕಾಲದಲ್ಲಿ ನೀಲಿಚಿತ್ರಗಳ ತಾರೆಯಾಗಿ ಮಿಂಚಿ, ಆ ನಂತರ ಬಾಲಿವುಡ್ ಪ್ರವೇಶಿಸಿ ಅಲ್ಲಿಂದ ಬೇರೆ ಬೇರೆ ಚಿತ್ರರಂಗಗಳಲ್ಲಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್ ಈಗ ಬೇರೆ ಬೇರೆ ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ.
ಸಿನಿಮಾ ಗಳ ಜೊತೆ ಜೊತೆಗೆ ಸಾಮಾ ಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಸನ್ನಿ, ಅನಾಥ ಮಕ್ಕಳನ್ನು ದತ್ತು ಪಡೆದು ಕೊ ಳ್ಳುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಹಾಗಾಗಿ, ಸನ್ನಿ ಮೈಮಾಟಕ್ಕಷ್ಟೇ ಮರುಳಾಗುತ್ತಿದ್ದವರು ಈಗ ಆಕೆಯ ಮಾನವೀಯ ಕಾರ್ಯಕ್ಕೂ ಜೈ ಅಂದಿದ್ದಾರೆ.
ಅದು ಇತ್ತೀಚೆಗೆ ಸನ್ನಿ ಲಿಯೋನ್ ಅವರ ಹುಟ್ಟು ಹಬ್ಬ ಸಂದರ್ಭದಲ್ಲಿ ವ್ಯಕ್ತವಾಗಿದೆ. ಕರ್ನಾಟಕದ ಹಳ್ಳಿ ಯೊಂದರಲ್ಲಿ ಸನ್ನಿ ಲಿಯೋನ್ ಕಟೌಟ್ ಹಾಕಿ, “ಅನಾಥ ಮಕ್ಕಳ ತಾಯಿ ಅಭಿಮಾನಿಗಳ ದೇವತೆ’ ಎಂದು ಬರೆಯಲಾಗಿದೆ. ಈ ಕಟೌಟ್ಗೆ ಈಗ ಸನ್ನಿಲಿಯೋನ್ ಮೆಚ್ಚುಗೆ ಸೂಚಿಸಿದ್ದಾರೆ. ಆ ಫೋಟೋ ವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ.