ತಮಿಳು, ತೆಲುಗಿನತ್ತ ಹೊರಟ “ಕಾಲೇಜ್‌ ಕುಮಾರ್‌’

Team Udayavani, Feb 29, 2020, 7:01 AM IST

ತೆಲುಗು ಮತ್ತು ತಮಿಳಿನ ಸೂಪರ್‌ ಹಿಟ್‌ ಚಿತ್ರಗಳು ಕನ್ನಡಕ್ಕೆ ರಿಮೇಕ್‌ ಆಗುತ್ತವೆ. ಆದರೆ ಕನ್ನಡ ಚಿತ್ರಗಳು ತಮಿಳು ಅಥವಾ ತೆಲುಗಿಗೆ ರಿಮೇಕ್‌ ಆಗೋದು ಅಪರೂಪ ಅನ್ನೋದು ಗಾಂಧಿನಗರದಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತು. ಇಂಥ ಮಾತುಗಳ ನಡುವೆಯೇ ಈಗ ಕನ್ನಡದ ಚಿತ್ರವೊಂದು ತಮಿಳು ಮತ್ತು ತೆಲುಗು ಭಾಷೆಗೆ ರಿಮೇಕ್‌ ಆಗಿದ್ದು, ಇದೇ ಮಾರ್ಚ್‌ 6ಕ್ಕೆ ಎರಡೂ ಭಾಷೆಗಳಲ್ಲೂ ತೆರೆಗೆ ಬರುತ್ತಿದೆ.

ಅಂದಹಾಗೆ, ಆ ಚಿತ್ರದ ಹೆಸರು “ಕಾಲೇಜ್‌ ಕುಮಾರ್‌’. ಎರಡು ವರ್ಷಗಳ ಹಿಂದೆ ಕನ್ನಡದಲ್ಲಿ ತೆರೆಗೆ ಬಂದಿದ್ದ “ಕಾಲೇಜ್‌ ಕುಮಾರ್‌’ ಚಿತ್ರ ನಿಮಗೆ ನೆನಪಿರಬಹುದು. ಈಗ ಈ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಿಗೂ ರಿಮೇಕ್‌ ಆಗಿದ್ದು, ಇದೇ ಮಾರ್ಚ್‌ ಮೊದಲ ವಾರ ತೆರೆ ಕಾಣುತ್ತಿದೆ.

ಎಲ್‌. ಪದ್ಮನಾಭ ನಿರ್ದೇಶನದ ಈ ಚಿತ್ರಕ್ಕೆ ಹರಿ ಸಂತೋಷ್‌ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ಒಟ್ಟಾರೆ ಕನ್ನಡದಲ್ಲಿ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ “ಕಾಲೇಜ್‌ ಕುಮಾರ್‌’ ತಮಿಳು ಮತ್ತು ತೆಲುಗಿನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದ್ದಾನೆ ಅನ್ನೋದು ಇನ್ನೊಂದು ವಾರದಲ್ಲಿ ಗೊತ್ತಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ