ಡಿಸೆಂಬರ್ 10ರಂದು ತೆರೆಗೆ;ಗಾಂಧಿನಗರದ ಗಮನ ಸೆಳೆಯಲಿದೆ ‘ಕ್ಯಾನ್ಸೀಲಿಯಂ’ ಚಿತ್ರ…

ಸೈನ್ಸ್ ಫಿಕ್ಷನ್ ಕಥೆಯನ್ನ ಹೊಸ ಫೀಲ್ ಕೊಡುವಂತೆ ಸಿನಿಮಾ‌ ಮಾಡಿ ಮುಗಿಸಿದ್ದಾರೆ.

Team Udayavani, Dec 6, 2021, 2:53 PM IST

ಡಿಸೆಂಬರ್ 10ರಂದು ತೆರೆಗೆ;ಗಾಂಧಿನಗರದ ಗಮನ ಸೆಳೆಯಲಿದೆ ‘ಕ್ಯಾನ್ಸೀಲಿಯಂ’ ಚಿತ್ರ…

ಸಿನಿಮಾ ಅನ್ನೋದು ಕಲರ್ ಫುಲ್ ದುನಿಯಾ.. ದೂರದಿಂದ ನೋಡಿದವರಿಗೆ ಈ ಲೋಕದಲ್ಲೊಮ್ಮೆ ಮಿಂದೇಳಲೇಬೇಕು ಅಂತ ಅನ್ನಿಸದೇ ಇರದು. ಇನ್ನೊಂದಷ್ಟು ಮಂದಿ ಈ ಲೋಕದಲ್ಲೇ ನೆಲೆ ನಿಲ್ಲಬೇಕು ಎಂಬ ಬಯಕೆ ಇಟ್ಟುಕೊಂಡವರು ಸಿಕ್ತಾರೆ. ಆದ್ರೆ ಈ ಕಲರ್ ಫುಲ್ ಲೋಕಕ್ಕೆ ಎಂಟ್ರಿ ಕೊಡಬೇಕು ಅಂದ್ರೆ ಆಸಕ್ತಿ ಜೊತೆಗೆ ಒಂದಷ್ಟು ಕಲೆಯೂ ಕರಗತವಾಗಿರಬೇಕು. ಶ್ರಮವೂ ಜೊತೆಗಿರಬೇಕು. ಈ ಎಲ್ಲವನ್ನು ಒಟ್ಟುಗೂಡಿಸಿಕೊಂಡು ಹೊಸ ತಂಡವೊಂದು ರೆಡಿಯಾಗಿದೆ. ಅದೇ ಕ್ಯಾನ್ಸೀಲಿಯಂ ಸಿನಿಮಾ ತಂಡ.

ಹೊಸ ಕನಸುಗಳನ್ನ ಹೊತ್ತು ಚಿತ್ರರಂಗಕ್ಕೆ ಬಂದಿರುವ ಸಮರ್ಥ್ ಅಂಡ್ ಟೀಂ ಪ್ರೇಕ್ಷಕ ಪ್ರಭುಗಳ ನಾಡಿ ಮಿಡಿತ ಅರಿತಿದ್ದಾರೆ. ಹೊಸ ಕಥೆಯೊಂದನ್ನ ಸಿದ್ಧಪಡಿಸಿ, ಸಿನಿಪ್ರೇಮಿಗಳಿಗೆ ಉಣ ಬಡಿಸಲು ರೆಡಿಯಾಗಿದ್ದಾರೆ. ಕ್ಯಾನ್ಸೀಲಿಯಂ ಅನ್ನೋ ಡಿಫ್ರೆಂಟ್ ಟೈಟಲ್ ಇಟ್ಟು ಎಲ್ಲರ ಗಮನವನ್ನ ಈಗಾಗ್ಲೇ ಸೆಳೆದಿದ್ದಾರೆ. ಹಿಂದೆಂದು ಕೇಳದ ಈ ಪದವನ್ನ ಜನ ಗೂಗಲ್ ಮಾಡಿ ಹುಡುಕುವಂತೆ ಮಾಡಿದ್ದಾರೆ. ಹೀಗೆ ಹುಡುಕಿದವರಿಗೆ ಒಂದರ್ಥ ಕೂಡ ಸಿಕ್ಕಿದೆ. ಇದೊಂದು ಲ್ಯಾಟಿನ್ ಭಾಷೆಯ ಪದವಂತೆ. ಫ್ಲ್ಯಾನ್, ಸಲಹೆ ಹೀಗೆ ಹಲವು ಅರ್ಥಗಳು ಇದಕ್ಕಿದೆ..ಟೈಟಲ್ ಡಿಫ್ರೆಂಟ್ ಆಗಿರುವಷ್ಟೇ ಕಥೆ ಕೂಡ ಅದ್ಭುತವಾಗಿದೆ. ಸೈನ್ಸ್ ಫಿಕ್ಷನ್ ಕಥೆಯೊಂದನ್ನ ಜನರಿಗೆ ಮನಮುಟ್ಟುವಂತೆ ಹೆಣೆದಿದ್ದಾರೆ. ಹೀಗಾಗಿ ಟೈಟಲ್ ನ ಅರ್ಥ ಸಿನಿಮಾದ ಎಂಡ್ ನಲ್ಲಿ ಪಕ್ಕಾ ಅರ್ಥ ಆಗುತ್ತೆ ಅನ್ನೋದು ಸಮರ್ಥ್ ಅಂಡ್ ಟೀಂನ ಅಭಿಪ್ರಾಯ.

ಸಾವಿರಾರು ಕನಸು ಹೊತ್ತು ಗಾಂಧಿನಗರದ ಕದ ತಟ್ಟಿರುವ ಸಮರ್ಥ್ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಜೊತೆ ಜೊತೆಗೆ ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸೈನ್ಸ್ ಫಿಕ್ಷನ್ ಕಥೆಯನ್ನ ಹೊಸ ಫೀಲ್ ಕೊಡುವಂತೆ ಸಿನಿಮಾ‌ ಮಾಡಿ ಮುಗಿಸಿದ್ದಾರೆ. ಇನ್ನೇನಿದ್ರು ಪ್ರೇಕ್ಷಕನ ಮುಂದೆ ದರ್ಶನ ಮಾಡಿಸೋದಷ್ಟೇ ಬಾಕಿ ಉಳಿದಿದೆ. ಅದು ಕೂಡ ಡಿಸೆಂಬರ್ 10ಕ್ಕೆ ಆಗಲಿದೆ.

ಸಾಕಷ್ಟು ವರ್ಷಗಳ ಪ್ರಯತ್ನ ಇಂದು ಫಲ ಸಿಗುವಂತೆ ಮಾಡಿದೆ. ಸಮರ್ಥ್ ಸಿನಿಮಾದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಕಥೆ ಬರೆದು‌ ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರ ಸಹೋದರ ಪ್ರೀತಂ ಕೂಡ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.

ಸೀತಾರಾಮ ಶಾಸ್ತ್ರಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ರೇಷ್ಮಾ ರಾವ್ ಈ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸುದರ್ಶನ್ ಜಿ.ಕೆ ಛಾಯಾಗ್ರಹಣ, ದ್ವೈಪಾಯಣ್ ಸಿಂಘ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಮರ್ಥ್, ಪ್ರೀತಂ, ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ, ಖುಷಿ ಆಚಾರ್, ಜಗದೀಶ್ ಮಲ್ನಾಡ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಡಿಸೆಂಬರ್ 10ರಂದು ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ.

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.