ಸಂಭ್ರಮಗಳಿಗೆ ಕೋವಿಡ್ 19 ಕೊಕ್ಕೆ

Team Udayavani, Apr 10, 2020, 12:31 PM IST

ಸಂಭ್ರಮಗಳಿಗೆ ಕೋವಿಡ್ 19  ಕೊಕ್ಕೆ

ನಾವು ಏನೇನೋ ಕನಸು ಕಂಡಿರುತ್ತೇವೆ, ಆದರೆ ಆ ಕನಸುಗಳೆಲ್ಲವೂ ಈಡೇರಬೇಕೆಂಬ ಯಾವ ನಿಯಮವೂ ಇಲ್ಲ. ಏನೋ ಒಂದು ಕಾರಣದಿಂದ ನಮ್ಮ ಕನಸಿಗೆ ಕಲ್ಲು ಬೀಳಬಹುದು. ಆದರೆ ಈ ಬಾರಿ ಬಹುತೇಕರ ಕನಸಿಗೆ ಬಿದ್ದಿರೋದು ಒಂದೇ ಕಲ್ಲು, ಅದು ಕೋವಿಡ್ 19.

ಕೋವಿಡ್ 19ಎಂಬ ಮಹಾಮಾರಿ ಬಹುತೇಕರ ಕನಸುಗಳನ್ನು ತಿಂದು ಹಾಕಿವೆ. ಹೌದು, ಸಿನಿಮಾ ಮಂದಿಯ ಸಾಕಷ್ಟು ಕನಸುಗಳು, ಸಂಭ್ರಮಗಳು ಕೊರೊನಾಗೆ ಬಲಿಯಾಗಿವೆ. ಅದರಲ್ಲೂ ವೈಯಕ್ತಿಕ ಸಂಭ್ರಮಗಳಿಗೆ

ಕೋವಿಡ್ 19 ದೊಡ್ಡ ಮಟ್ಟದಲ್ಲಿ ಅಡ್ಡಿಯಾಗಿದ್ದು ಸುಳ್ಳಲ್ಲ. ಮದುವೆ, ಬರ್ತ್ ಡೇ, ಟೂರ್‌, ವಿದೇಶ ಪ್ರಯಾಣ, ಹನಿಮೂನ್‌ … ಹೀಗೆ ಸಾಕಷ್ಟು ಕಾರ್ಯಕ್ರಮಳು ಕೋವಿಡ್ 19 ದಿಂದಾಗಿ ನಿಂತಿವೆ. ಅದ್ಧೂರಿಯಾಗಿ ಮದುವೆಯಾಗಬೇಕೆಂದು ಕನಸು ಕಂಡವರು ಸರಳ ವಿವಾಹದತ್ತ ಮುಖ ಮಾಡುವಂತಾಗಿದೆ. ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪ್ಲ್ಯಾನ್‌ ಮಾಡಿಕೊಂಡಿದ್ದವರು ಸಿಂಪಲ್‌ ಆಗಿ ಅಚರಿಸುವಂತಾಗಿದೆ. ಇದಕ್ಕೆಲ್ಲ ಕಾರಣ ಕೋವಿಡ್ 19 ಎಂಬ ಮಹಾಮಾರಿ ಎಂದು ಹೊಸದಾಗಿ ಹೇಳಬೇಕಿಲ್ಲ.

ಮುಖ್ಯವಾಗಿ ನಿಖೀಲ್‌ ಕುಮಾರ್‌ ಅವರ ವಿವಾಹ ಏಪ್ರಿಲ್‌ನಲ್ಲಿ ಅದ್ಧೂರಿಯಾಗಿ ನಡೆಸಲು ತಯಾರಿ ನಡೆಸಿದ್ದರು. ಚನ್ನಪಟ್ಟಣ-ರಾಮನಗರ ನಡುವೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡು ಉದ್ದೇಶವೂ ಅವರದ್ದಾಗಿತ್ತು. ಆದರೆ, ಕೋವಿಡ್ 19ದಿಂದಾಗಿ ಅದ್ಧೂರಿ ಮದುವೆಯನ್ನು ಕೈ ಬಿಟ್ಟಿದ್ದಾರೆ. ಸರಳ ವಿವಾಹವಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನು, ನಟ, ನಿರ್ದೇಶಕ ರಿಷಭ್‌ ಶೆಟ್ಟಿ ತಮ್ಮ ಪುತ್ರ ರಣ್ವಿತ್‌ ಶೆಟ್ಟಿಯ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಮಾಡುವ ಕನಸು ಕಂಡಿದ್ದರು. ಆದರೆ ಕೋವಿಡ್ 19ದಿಂದ ಅದು ಸಾಧ್ಯವಾಗದೇ, ಹುಟ್ಟೂರಿನ ತೋಟದಲ್ಲಿ ಸರಳವಾಗಿ ಮಗನ ಹುಟ್ಟಹಬ್ಬ ಆಚರಿಸಿದ್ದಾರೆ. ಈ ವೇಳೆ ಮಗನಿಗೆ ವಿಡಿಯೋವೊಂದನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಮಗನ ಒಂದು ವರ್ಷದ ಚಟುವಟಿಕೆ, ಸುಂದರ ಕ್ಷಣಗಳನ್ನು ಸೆರೆಹಿಡಿದು ಅದಕ್ಕೆ ತಮ್ಮ ಕಥಾ ಸಂಗಮ ಚಿತ್ರದ ಹಾಡೊಂದನ್ನು ಹಾಕಿ ಮಗನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಮನೆಯಲ್ಲಿ ತಯಾರಿಸಿದ ಕೇಕ್‌ ಮೂಲಕ ಸಿಂಪಲ್‌ ಆಗಿ ಮನೆ ಮಂದಿಯೆಲ್ಲಾ ಮಗನ ಮೊದಲ ವರ್ಷದ ಹುಟ್ಟುಹಬ್ಬದಲ್ಲಿ ಸಂಭ್ರಮಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ ಪಡ್ಡೆಹುಲಿ ಸಿನಿಮಾ ಮೂಲಕ ಲಾಂಚ್‌ ಆಗಿರೋದು ನಿಮಗೆ ಗೊತ್ತೇ ಇದೆ. ಈಗ ಶ್ರೇಯಸ್‌ ಎರಡನೇ ವಿಷ್ಣು ಪ್ರಿಯ ಮಾಡಿದ್ದು, ಚಿತ್ರೀಕರಣ ಕೂಡಾ ಮುಗಿದಿದೆ. ಇತ್ತೀಚೆಗೆ ನಟ ಶ್ರೇಯಸ್‌ ಅವರ ಹುಟ್ಟುಹಬ್ಬ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅದ್ಧೂರಿ ಕಾರ್ಯಕ್ರಮ ಮಾಡಿ, ಆ ಮೂಲಕ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕಿತ್ತು. ಆದರೆ, ಕೋವಿಡ್ 19ಎಫೆಕ್ಟ್ ನಿಂದಾಗಿ ಕನ್ನಡ ಚಿತ್ರರಂಗ ಸ್ತಬ್ಧವಾಗಿದೆ.

ಹಾಗಾಗಿ, ಚಿತ್ರತಂಡ ಸರಳವಾಗಿ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದೆ. ಹುಟ್ಟುಹಬ್ಬದ ಖರ್ಚನ್ನು ಹಸಿದವರ ಸಹಾಯಕ್ಕೆ ನೀಡಲು ವಿಷ್ಣು ಪ್ರಿಯ ಚಿತ್ರ ಪಕ್ಕಾ ಸ್ವಮೇಕ್‌ ಸಿನಿಮಾವಾಗಿದ್ದು, ನೈಜ ಘಟನೆಯನ್ನು ಆದರಿಸಿದೆ. ಚಿತ್ರದ ಬಹುಭಾಗ ಕಾಡಿನಲ್ಲಿ ಚಿತ್ರೀಕರಣವಾಗಿದೆ. ವಿ.ಕೆ.ಪ್ರಕಾಶ್‌ ಈ ಚಿತ್ರದ ನಿರ್ದೇಶಕರು. ಚಿತ್ರದ ಬಗ್ಗೆ ಮಾತನಾಡುವ ಶ್ರೇಯಸ್‌, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ಮಾಡಿರುವ ಸಿನಿಮಾ. ಇವತ್ತು ಆ ತರಹದ ಸಿನಿಮಾಗಳನ್ನೇ ಜನ ಹೆಚ್ಚು ಇಷ್ಟಪಡತ್ತಿದ್ದಾರೆ. ವಿಷ್ಣು ಪ್ರಿಯಾ ಕೂಡಾ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ. ಹುಟ್ಟುಹಬ್ಬ ಆಚರಣೆ ಬದಲು ಆ ಹಣವನ್ನ ಬಡವರಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಇದು ಕೆಲವು ಉದಾಹರಣೆ ಗಳಷ್ಟೇ, ಹೀಗೆ ಸಾಕಷ್ಟು ಕಾರ್ಯ ಕ್ರಮ ಗಳು ಮುಂದೆ ಹೋಗಿವೆ. ಇನ್ನು ಕೆಲವರು ಕನಸಿನ ಮೂಟೆಯನ್ನು ಬದಿಗಿಟ್ಟಿದ್ದಾರೆ. ಕೋವಿಡ್ 19 ಹಾವಳಿ ಮುಗಿದ ಬಳಿಕ ಕನಸಿಗೆ ಬಣ್ಣ ಹಚ್ಚುವ ನಿರ್ಧಾರ ಅವರದು. ಸಾಮಾನ್ಯವಾಗಿ ಸಿನಿಮಾ ರಂಗದ ಕಾರ್ಯ ಕ್ರಮಗಳಾದರೂ ಅದು ಸಖತ್‌ ಕಲರ್‌ಫುಲ್‌ ಆಗಿರುತ್ತವೆ. ಆದರೆ ಕೋವಿಡ್ 19 ಎಲ್ಲಾ ಸಂಭ್ರಮವನ್ನು ನುಂಗಿ ನೀರು ಕುಡಿದಿದೆ. ಮೊದಲು ಜೀವ, ಆನಂತರ ಜೀವನ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.­

ಟಾಪ್ ನ್ಯೂಸ್

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

sanju weds geetha 2 song shooting

Sanju Weds Geetha 2; ಕಲರ್’ಫುಟ್ ಸೆಟ್ ನಲ್ಲಿ ಸಂಜು ಹಾಡು

arjun kapikad kaljiga movie

Arjun Kapikad; ತುಳುನಾಡಿನ ಕಲ್ಜಿಗದ ಕಥೆ: ಕರಾವಳಿ ಮಂದಿಯ ಮತ್ತೊಂದು ಸಾಹಸ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.