Udayavni Special

ಕೋವಿಡ್ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಸಿನಿ ಟ್ರಾಫಿಕ್ – ಸಹಕಾರ ತತ್ವದಡಿ ಬಿಡುಗಡೆ ಅಗತ್ಯ

ಸಾಮಾನ್ಯವಾಗಿ ಪ್ರತಿ ವಾರ ಚಿತ್ರರಂಗದಲ್ಲಿ ಐದಾರು ಸಿನಿಮಾಗಳು ಬಿಡುಗಡೆಯಾಗುತ್ತಲೇ ಬಂದಿವೆ.

Team Udayavani, Apr 3, 2020, 3:24 PM IST

ಕೋವಿಡ್ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಸಿನಿ ಟ್ರಾಫಿಕ್ – ಸಹಕಾರ ತತ್ವದಡಿ ಬಿಡುಗಡೆ ಅಗತ್ಯ

ಬೆಂಗಳೂರು: ಸದ್ಯ ಕೋವಿಡ್ ವೈರಸ್ ಇಡೀ ದೇಶವನ್ನು ಕಾಡುತ್ತಿದೆ. ಹಲವಾರು ಉದ್ಯಮಗಳು ವೈರಸ್ ಹೊಡೆತಕ್ಕೆ ಸಿಕ್ಕಿ ಮಕಾಡೆ ಮಲಗಿವೆ. ಇನ್ನೊಂದಿಷ್ಟು ಕ್ಷೇತ್ರಗಳು ಚೇತರಿಸಿಕೊಳ್ಳಲು ವರ್ಷಗಳೇ ಬೇಕು. ಇದರಿಂದ ಚಿತ್ರರಂಗ ಕೂಡಾ ಹೊರತಾಗಿಲ್ಲ. ಮುಖ್ಯವಾಗಿ ಚಿತ್ರರಂಗದಲ್ಲಿ ಕೂಡಲೇ ತಲೆದೋರಲಿರುವ ಸಮಸ್ಯೆ ಎಂದರೆ ರಿಲೀಸ್. ಹೌದು, ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಸಿನಿಮಾ ಬಿಡುಗಡೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅದಕ್ಕೆ ಕಾರಣ ಮತ್ತದೇ ವೈರಸ್ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಸಾಮಾನ್ಯವಾಗಿ ಪ್ರತಿ ವಾರ ಚಿತ್ರರಂಗದಲ್ಲಿ ಐದಾರು ಸಿನಿಮಾಗಳು ಬಿಡುಗಡೆಯಾಗುತ್ತಲೇ ಬಂದಿವೆ. ಆದರೆ ವೈರಸ್ ನಿಂದಾಗಿ ನಾಲ್ಕೈದು ವಾರದಿಂದ ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಿನಿಟ್ರಾಫಿಕ್ ಜೋರಾಗಲಿದೆ. ಈಗಾಗಲೇ ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದವು. ಆದರೆ ಈ ಕೋವಿಡ್ ನಿಂದಾಗಿ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಸಬರ, ಸ್ಟಾರ್ ಗಳ … ಹೀಗೆ ಸಾಕಷ್ಟು ಸಿನಿಮಾಗಳು ಸರತಿಯಲ್ಲಿವೆ. ಹಾಗಾದರೆ ಈ ಎಲ್ಲಾ ಚಿತ್ರಗಳ ಬಿಡುಗಡೆ ಯಾವಾಗ ಎಂದರೆ ಅದಕ್ಕೆ ಉತ್ತರವಿಲ್ಲ.

ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆಗೆ ಒಂದು ನಿರ್ದಿಷ್ಟವಾದ ನಿಯಮವಿಲ್ಲ. ವಾರದಲ್ಲಿ ಇಂತಿಷ್ಟೇ ಸಿನಿಮಾ ಬಿಡುಗಡೆಯಾಬೇಕೆಂದು ತಡೆಯುವವರು ಯಾರೂ ಇಲ್ಲ. ಹಾಗಾಗಿಯೇ ವಾರವೊಂದಕ್ಕೆ 11-12 ಸಿನಿಮಾಗಳು ಕೂಡಾ ಬಿಡುಗಡೆಯಾಗಿವೆ. ಈಗ ಕೋವಿಡ್ ನಿಂದ ಮುಂದಕ್ಕೆ ಹೋಗಿರುವ ಸಿನಿಮಾಗಳು ಒಮ್ಮೆಲೇ ಬಿಡುಗಡೆಗೆ ಬಂದರೆ ಮತ್ತೆ ಚಿತ್ರರಂಗದಲ್ಲಿ ಬಿಡುಗಡೆ ಸಮಸ್ಯೆ ತಲೆದೋರಲಿದೆ. ಚಿತ್ರಮಂದಿರದ ಗೊಂದಲ, ಪ್ರೇಕ್ಷಕ ಬರಲ್ಲ ಎಂಬ ಗೋಳು ಮತ್ತೆ ಕೇಳಿಬರಲಿದೆ. ಹಾಗಾಗಿ ಈ ಬಗ್ಗೆ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಒಂದು ನಿಯಮ ರೂಪಿಸುವ ಅನಿವಾರ್ಯತೆ ಇದೆ.

ಈಗಾಗಲೇ ಬಿಡುಗಡೆಯಾಗಿ ವೈರಸ್ ನಿಂದ ತೊಂದರೆ ಅನುಭವಿಸಿದ ಐದಾರು ಸಿನಿಮಾಗಳ ಜೊತೆಗೆ ಬಿಡುಗಡೆಯ ಹಾದಿಯಲ್ಲಿ ಹತ್ತಾರು ಸಿನಿಮಾಗಳಿವೆ. ಸ್ಟಾರ್ ಗಳ ಸಿನಿಮಾ ಬಗ್ಗೆ ಹೇಳುವುದಾದರೆ ರಾಬರ್ಟ್, ಯುವರತ್ನ, ಪೊಗರು, ಕೋಟಿಗೊಬ್ಬ, ಇನ್ಸ್ ಪೆಕ್ಟರ್ ವಿಕ್ರಮ್, ಅರ್ಜುನ್ ಗೌಡ, 100, ಪ್ರೇಮಂ ಪೂಜ್ಯಂ, ಅವತಾರ್ ಪುರುಷ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.

ಇವೆಲ್ಲಾ ಸಿನಿಮಾಗಳ ಮಧ್ಯೆ ಸಂಪೂರ್ಣ ಹೊಸಬರ ಸಿನಿಮಾಗಳು ಕೂಡಾ ಸರತಿಯಲ್ಲಿವೆ. ಹೀಗೆ ಸ್ಟಾರ್ಗಳ ಹಾಗೂ ಹೊಸಬರ ಸಿನಿಮಾ ಮಧ್ಯೆ ತಿಕ್ಕಾಟ ಶುರುವಾಗಲಿದೆ. ಈ ನಿಟ್ಟಿನಲ್ಲಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಸಿನಿಮಾ ಬಿಡುಗಡೆ ಮಾಡೋದು ಉತ್ತಮ. ಇಲ್ಲವಾದರೆ ಕೊರೊನಾದ ಅಫ್ಟರ್ ಎಫೆಕ್ಟ್ ಚಿತ್ರರಂಗಕ್ಕೆ ಹೆಚ್ಚಾಗಿಂಯೇ ತಟ್ಟಲಿದೆ.

ಸದ್ಯ ಬಿಡುಗಡೆಗೆ ತುಂಬಾ ಸಿನಿಮಾಗಳು ರೆಡಿಯಾಗಿವೆ. ಆದ್ರೆ ಕೊರೊನಾ ಲಾಕ್ ಡೌನ್ ನಿಂದ ಸದ್ಯಕ್ಕೆ ಎಲ್ಲ ಕೆಲಸಗಳೂ 2-3 ತಿಂಗಳು ಮುಂದಕ್ಕೆ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಚಿತ್ರರಂಗ ಮತ್ತೆ ಮೊದಲಿನ ಸ್ಥಿತಿಗೆ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೊ ಗೊತ್ತಿಲ್ಲ. ಚಿತ್ರಮಂದಿರಗಳಲ್ಲಿ ಮತ್ತೆ ಪ್ರದರ್ಶನ ಶುರುವಾದ ನಂತರ ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾಗಳಿಗೆ ಮೊದಲು ಅವಕಾಶ ಕೊಡಬೇಕು, ಕೆಲ ದಿನಗಳ ಮಟ್ಟಿಗೆ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಅಂತ ಪ್ರದರ್ಶಕರು, ಮತ್ತು ವಾಣಿಜ್ಯ ಮಂಡಳಿಗೆ ಮನವಿ ಮಾಡಿಕೊಂಡಿದ್ದೇವೆ.

ಅದಾದ ನಂತರ ಬಿಡುಗಡೆಗೆ ಸಿದ್ದವಿರುವ ಸಿನಿಮಾಗಳನ್ನು ಪರಸ್ಪರ ಸಹಕಾರದ ಮೇರೆಗೆ ಕೆಲವೇ ಸಂಖ್ಯೆಗಳಲ್ಲಿ ಬಿಡುಗಡೆಗೊಳಿಸುವಂತೆ ನಿರ್ಮಾಪಕರು, ಪ್ರದರ್ಶಕರ ಜೊತೆಗೆ ಒಮ್ಮೆ ಮಾತನಾಡುತ್ತೇವೆ. ಒಟ್ಟಿನಲ್ಲಿ ಒಂದೇ ಸಲ ಹತ್ತಾರು ಸಿನಿಮಾಗಳು ಬಿಡುಗಡೆಯಾದರೆ, ಎಲ್ಲರಿಗೂ ತೊಂದರೆ ಅನ್ನೊದನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇವೆ.
– ಪ್ರವೀಣ್ ಕುಮಾರ್, ನಿರ್ಮಾಪಕರ ಸಂಘದ ಅಧ್ಯಕ್ಷ

ಒಂದೇ ಸಲಕ್ಕೆ ಒಂದರ ಹಿಂದೊಂದು ಸಿನಿಮಾಗಳು ಬಿಡುಗಡೆಯಾದರೆ, ಯಾವ ಸಿನಿಮಾಗಳೂ ಗೆಲ್ಲೊದು ಕಷ್ಟ. ಆದಷ್ಟು ಸಿನಿಮಾ ಬಿಡುಗಡೆಗೆ ತಯಾರಾಗಿರುವ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಬಾರಿ ಯೋಚಿಸಿ, ಸರಿಯಾದ ಸಿದ್ಧತೆ ಮಾಡಿಕೊಂಡು ಬಿಡುಗಡೆ ಮಾಡುವುದು ಒಳ್ಳೆಯದು. ಇದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ಯಾವಾಗಲೂ ಸಲಹೆ, ಸಹಕಾರ ಕೊಡಲು ಸಿದ್ಧವಿದೆ.

ಸದ್ಯ ವೈರಸ್ ಎಫೆಕ್ಟ್ ಯಾವಾಗ ಕಡಿಮೆಯಾಗುತ್ತದೆ, ಜನ ಥಿಯೇಟರ್ ಗೆ ಯಾವಾಗ ಬರುತ್ತಾರೆ ಅನ್ನೋದು ಮೊದಲು ಗೊತ್ತಾಗಬೇಕು. ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿದ್ದಂತೆ, ಸಿನಿಮಾಗಳ ಬಿಡುಗಡೆಗೆ ಸಂಬಂಧಿಸಿದಂತೆ ಒಂದಷ್ಟು ಮಾರ್ಗದರ್ಶಕ ಸೂತ್ರಗಳನ್ನು ಮಾಡುವ ಪ್ರಯತ್ನ ಮಾಡುತ್ತೇವೆ.
-ಜೈರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

ಟಾಪ್ ನ್ಯೂಸ್

Untitled-1

ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

fcgrdtr

ಅವಮಾನಿಸಿದ ಪಕ್ಷದಲ್ಲಿ ಇರಬೇಡಿ,ಬಿಜೆಪಿಗೆ ಬನ್ನಿ : ಅಮರೀಂದರ್ ಗೆ ಅಠಾವಳೆ ಆಹ್ವಾನ

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fgdtgr

ಯಜಮಾನ ಚಿತ್ರಕ್ಕೆ ‘ಸೈಮಾ’ ಪ್ರಶಸ್ತಿಗಳ ಗೊಂಚಲು |ಈ ಯಶಸ್ಸಿಗೆ ಅಭಿಮಾನಿಗಳೇ ಕಾರಣ ಎಂದ ದರ್ಶನ್

fgrt

ಪುನೀತ್ ಫ್ಯಾನ್ಸ್ ಗೆ ಸಿಹಿ ಸುದ್ದಿ|ಹ್ಯಾಟ್ರಿಕ್ ಬಾರಿಸಲು ಸಿದ್ಧರಾದ ಅಪ್ಪು-ಆನಂದರಾಮ್

ಅನಿತಾ ಭಟ್‌ ಸಿನಿಮಾದ ಟೈಟಲ್‌ ಲಾಂಚ್‌ ಮಾಡಿದ್ದಾರೆ ಶ್ರೀಮುರುಳಿ!

ಅನಿತಾ ಭಟ್‌ ಸಿನಿಮಾದ ಟೈಟಲ್‌ ಲಾಂಚ್‌ ಮಾಡಿದ್ದಾರೆ ಶ್ರೀಮುರುಳಿ!

anirudha sastry

ಅನಿರುದ್ಧ ಶಾಸ್ತ್ರಿ ಕಂಠಸಿರಿಯಲ್ಲಿ ‘ಆಪರೇಶನ್‌ ಡಿ’ ಹಾಡುಗಳು

upendra

ಇಂದು ಉಪೇಂದ್ರ ಬರ್ತ್‌ಡೇ  - ಹೊಸ ಸಿನಿಮಾ ಅನೌನ್ಸ್‌

MUST WATCH

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

udayavani youtube

ನದಿಗೆ ಹಾರಿ ಎರಡು ದಿನ ಕಳೆದರೂ ಪತ್ತೆಯಾಗದ ದೇಹ : ಶೋಧ ಕಾರ್ಯ ಮುಂದುವರಿಕೆ

udayavani youtube

ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ನೂತನ ಮುಖ್ಯಮಂತ್ರಿ|UDAYAVANI NEWS BULLETIN|19/9/2021

udayavani youtube

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಹೊಸ ಸೇರ್ಪಡೆ

Untitled-1

ಜಿಲ್ಲೆಯ ಬಹುತೇಕ ಪಶು ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ

Untitled-1

ಜಿಲ್ಲೆಯಲ್ಲೇ ಅತೀ ಹೆಚ್ಚು ಮಕ್ಕಳು: ಶಿಕ್ಷಕರ ಕೊರತೆ 

Untitled-1

ಪ್ರವೇಶಾತಿ ಏರಿಕೆ; ಮೂಲಸೌಕರ್ಯ ಕೊರತೆ

ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸ್ವಾವಲಂಬನೆಯತ್ತ ದ.ಕ. ಜಿಲ್ಲೆ ದಿಟ್ಟ ಹೆಜ್ಜೆ

ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸ್ವಾವಲಂಬನೆಯತ್ತ ದ.ಕ. ಜಿಲ್ಲೆ ದಿಟ್ಟ ಹೆಜ್ಜೆ

Untitled-1

ಚೆನ್ನಾವರ ಸರಕಾರಿ ಕಿ.ಪ್ರಾ.ಶಾಲೆ: ತರಗತಿ ಕೊಠಡಿ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.