ದಾಖಲೆಗೆ ಫೌಂಡೇಶನ್ ಹಾಕಿದ್ದೇ ನಾನು! ; ಕೆಜಿಎಫ್-2 ಬಗ್ಗೆ ಕ್ರೇಜಿ ಸ್ಟಾರ್ ಮಾತು
Team Udayavani, May 4, 2022, 11:57 AM IST
ಯಶ್ ನಟನೆಯ “ಕೆಜಿಎಫ್-2′ ಚಿತ್ರ ಕಲೆಕ್ಷನ್ ವಿಷಯದಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇಡೀ ವಿಶ್ವವೇ ಈ ಸಿನಿಮಾ ಬಗ್ಗೆ ಮಾತನಾಡು ತ್ತಿದೆ. ಈಗ ನಟ ರವಿಚಂದ್ರನ್ ಕೂಡಾ “ಕೆಜಿಎಫ್-2′ ಬಗ್ಗೆ ಮಾತನಾಡಿದ್ದಾರೆ.
“ಇವತ್ತು ನಾವೆಲ್ಲ “ಕೆಜಿಎಫ್-2′ ದಾಖಲೆ ಬಗ್ಗೆ ಮಾತನಾಡುತ್ತೇವೆ. ದಾಖಲೆ ಆಗಿರಬಹುದು. ಆದರೆ, ದಾಖಲೆಗೆ ಫೌಂಡೇಶನ್ ಹಾಕಿದ್ದು ಯಾರು? ನಾನೇ ಫೌಂಡೇಶನ್ ಹಾಕಿದ್ದು. ಅಂದು “ಶಾಂತಿ ಕ್ರಾಂತಿ’ ಫೌಂಡೇಶನ್ ಆಯ್ತು. ಈಗ “ಕೆಜಿಎಫ್-2 ದಾಖಲೆ ಮುರಿಯೋದೇ ನಮ್ಮೆಲ್ಲರ ಗುರಿಯಾಗಿರಬೇಕು. ಇಡೀ ಚಿತ್ರರಂಗ ಕೂತು ಚರ್ಚೆ ಮಾಡಬೇಕು’ ಎನ್ನುವುದು ರವಿಚಂದ್ರನ್ ಮಾತು.
ಇದೇ ವೇಳೆ ಸಿನಿಮಾಗಳ ಟಿಕೆಟ್ ರೇಟ್ ಬಗ್ಗೆ ಮಾತನಾಡಿದ ರವಿಚಂದ್ರನ್, “ಈ ಹಿಂದೆ 88ರಲ್ಲಿ ಫಿಲಂ ಛೇಂಬರ್ನಲ್ಲಿ ಒಂದು ಗಲಾಟೆ ನಡೆಯುತ್ತೆ. ಹೆಚ್ಚು ಖರ್ಚು ಮಾಡಿದ ಚಿತ್ರಕ್ಕೂ, ಬೇರೆ ಚಿತ್ರಕ್ಕೂ ಒಂದೇ ರೀತಿಯ ರೇಟ್ ಆಫ್ ಅಡ್ಮಿಷನ್ ಇದೆ. ನನ್ನ ಚಿತ್ರಕ್ಕೆ ಜಾಸ್ತಿ ಮಾಡಿ ಎಂದು ನಾನು ಛೇಂಬರ್ ಅನ್ನು ಕೇಳಿದೆ. ಆದರೆ, ಅವರು ಒಪ್ಪಲಿಲ್ಲ. ಹಾಗಾಗಿ, ಅಂದು ಅದು ಸಾಧ್ಯವಾಗಲಿಲ್ಲ. ಆದರೆ, ಈಗ “ಕೆಜಿಎಫ್’ ಅದನ್ನು ಸಾಧ್ಯ ಮಾಡಿದೆ. ಒಂದು ಟಿಕೆಟ್ ಎರಡು ಸಾವಿರ ರೂಪಾಯಿಗೂ ಮಾರಾಟವಾಗುತ್ತಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ