“ಡಿ 55′ ಯಾರಿಗೆ?

Team Udayavani, Feb 17, 2019, 5:28 AM IST

ದರ್ಶನ್‌ ಅವರ 55ನೇ ಸಿನಿಮಾವನ್ನು ತಾವು ನಿರ್ಮಿಸುವುದಾಗಿ “ಮೆಜೆಸ್ಟಿಕ್‌’ ಚಿತ್ರದ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಹೇಳಿದ್ದರು. ಜೊತೆಗೆ ಹುಟ್ಟುಹಬ್ಬ ಪ್ರಯಕ್ತ “ಡಿ 55’ಜಾಹೀರಾತು ನೀಡಿ, ದರ್ಶನ್‌ಗೆ ಶುಭಕೋರಿದ್ದರು. ಇತ್ತ ಕಡೆ ಜೈ ಮಾತಾಸಿನಿಕ್ರಿಯೇಶನ್ಸ್‌ ಹಾಗೂ ಜೈಮಾತಾ ಕಂಬೈನ್ಸ್‌ನಡಿ ದುಷ್ಯಂತ್‌ ಹಾಗೂ ಪ್ರಕಾಶ್‌ ಜಯರಾಮ್‌ ಕೂಡಾ “ಡಿ 55′ ಎಂದು ಅನೌನ್ಸ್‌ ಮಾಡಿದ್ದಾರೆ.

ಈ ಮೂಲಕ ದರ್ಶನ್‌ ಅವರ 55ನೇ ಸಿನಿಮಾವನ್ನು ಯಾರು ಮಾಡುತ್ತಾರೆಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಈ ಕುರಿತು ಮಾತನಾಡುವ ನಿರ್ಮಾಪಕ ಎಂ.ಜಿ.ರಾಮಮೂರ್ತಿ, “ನಮಗೆ ದರ್ಶನ್‌ 55ನೇ ಸಿನಿಮಾ ಮಾಡಿ ಎಂದು ಹೇಳಿದ ನಂತರವೇ ನಾನು ಅನೌನ್ಸ್‌ ಮಾಡಿದ್ದು. ಆ ಕಡೆಯಿಂದ ಅವರು ಕೂಡಾ 55ನೇ ಸಿನಿಮಾ ಎಂದು ಅನೌನ್ಸ್‌ ಮಾಡಿದ್ದಾರೆ. ನೋಡುವ ಮುಂದೆ ಏನಾಗುತ್ತದೆ ಎಂದು’ ಎಂದಷ್ಟೇ ಹೇಳುತ್ತಾರೆ.

ಈ ಬಗ್ಗೆ ಮಾತನಾಡುವ ಪ್ರಕಾಶ್‌ ಜಯರಾಮ್‌, “ದರ್ಶನ್‌ ಅವರಿಗೆ ನಾವು ಸಿನಿಮಾ ಮಾಡುವುದು ಪಕ್ಕಾ. ಈ ಹಿಂದೊಮ್ಮೆ ಸ್ಕ್ರಿಪ್ಟ್ ಡಿಸ್ಕಶನ್‌ ವೇಳೆ ಅವರೇ “55′ ಮಾಡಿಕೊಳ್ಳಿ ಎಂದಿದ್ದರು. ಹಾಗಂತ ನಮಗೆ ಇಲ್ಲಿ ನಂಬರ್‌ ಮುಖ್ಯವಲ್ಲ. 55ನೇ ಸಿನಿಮಾವನ್ನು ಯಾರೇ ಮಾಡಿದರೂ ಬೇಸರವಿಲ್ಲ. ಒಂಚೂರು ಹಿಂದೆ-ಮುಂದೆ ಆಗಬಹುದಷ್ಟೇ. ದರ್ಶನ್‌ಗೆ ಸಿನಿಮಾ ಮಾಡೋದಂತೂ ಪಕ್ಕಾ. ಇದರಲ್ಲಿ ಬೇರೆ ಗೊಂದಲ, ವಿವಾದಗಳೇನಿಲ್ಲ’ ಎನ್ನುತ್ತಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ