ದಳಪತಿಯ ಪ್ರೇಮ ಯಾತ್ರೆ: ಮಾಸ್‌ ಫೀಲ್‌ನ ಕ್ಲಾಸ್‌ ಚಿತ್ರ

Team Udayavani, Apr 2, 2018, 11:15 AM IST

dalapati.jpg

ನೆನಪಿರಲಿ ಪ್ರೇಮ್‌ ಈಗ ಬದಲಾಗಿದ್ದಾರೆ! ಹೀಗೆಂದಾಕ್ಷಣ, ಬೇರೆ ಏನನ್ನೋ ಅರ್ಥ ಕಲ್ಪಿಸಿಕೊಳ್ಳುವುದು ಬೇಡ. ಅವರ ಬದಲಾವಣೆಗೆ ಕಾರಣ “ದಳಪತಿ’. ಹೌದು, ಇದುವರೆಗೆ ಲವ್ವರ್‌ ಬಾಯ್‌ ಆಗಿಯೇ ಮಿಂಚಿದ್ದ ಪ್ರೇಮ್‌, “ದಳಪತಿ’ ಮೂಲಕ ಲವ್‌ ಲೀಡರ್‌ ಆಗಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತುಂಬ ಹಿಂದೆಯೇ ಶುರುವಾಗಿದ್ದ “ದಳಪತಿ’ ಇದೇ ಏಪ್ರಿಲ್‌ 13 ರಂದು ತೆರೆಗೆ ಬರುತ್ತಿದೆ.

ಈ ಚಿತ್ರ ನೆನಪಿರಲಿ ಪ್ರೇಮ್‌ಗೆ ಹೊಸ ಲುಕ್‌ ಕೊಟ್ಟರೆ, ನಿರ್ದೇಶಕ ಪ್ರಶಾಂತ್‌ಗೂ ಹೊಸ ಜಾನರ್‌ನ ಸಿನಿಮಾ ಆಗಲಿದೆ. ಚಿತ್ರ ಲೇಟ್‌ ಆಗಿದ್ದರೂ ಲೇಟೆಸ್ಟ್‌ ಆಗಿ ಬರುತ್ತಿದೆ ಎನ್ನುವ ನಿರ್ದೇಶಕ ಪ್ರಶಾಂತ್‌ರಾಜ್‌, ಇಲ್ಲಿ ಕೆಲಸ ಮಾಡಿದ ಮೂರು ಮಂದಿ ಕೂಡ ಈ ಚಿತ್ರ ಶುರುವಾಗುವ ವೇಳೆ ಬಿಜಿಯಾಗಿದ್ದು ನಿಜ. ನಾನು “ಜೂಮ್‌’ ಕೈಗೆತ್ತಿಕೊಂಡೆ. ಪ್ರೇಮ್‌ “ಚೌಕ’ದಲ್ಲಿ ಬಿಜಿಯಾದರು.

ಕೃತಿ ತಮಿಳು ಮತ್ತು ಹಿಂದಿ ಚಿತ್ರಗಳಿಗೆ ಕಮಿಟ್‌ ಆಗಿದ್ದರು. ಅದರಲ್ಲೂ ಇದೊಂದು ಜರ್ನಿ ಸಿನಿಮಾ. ಪ್ರೇಮ್‌ ಅವರನ್ನು ಇಲ್ಲಿ ಸಾಕಷ್ಟು ಯಂಗ್‌ ಆಗಿ ತೋರಿಸಬೇಕಿತ್ತು. ಅದಕ್ಕಾಗಿ ಹೋಮ್‌ ವರ್ಕ್‌ ಜಾಸ್ತಿ ಇತ್ತು. ಎಲ್ಲವನ್ನೂ ಸರಿಪಡಿಸಿಕೊಳ್ಳುವ ಉದ್ದೇಶದಿಂದ ಸಮಯ ತೆಗೆದುಕೊಂಡು “ದಳಪತಿ’ ಮಾಡಿದ್ದೇವೆ. ಈಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಎಂಬುದು ನಿರ್ದೇಶಕರ ಮಾತು.

ಇದೊಂದು ಲವ್‌ಸ್ಟೋರಿ ಹೊಂದಿರುವ ಕಥೆಯಾಗಿದ್ದರೂ, ಚಿತ್ರಕಥೆಯೇ ಇಲ್ಲಿನ ಹೈಲೈಟ್‌. ಸಂಪೂರ್ಣ ಇದು ಉತ್ತರ ಕರ್ನಾಟಕ ಶೈಲಿಯಲ್ಲೇ ಸಾಗುವಂತಹ ಚಿತ್ರ. ಹೊಸತೆನಿಸುವ ಅಂಶಗಳನ್ನು ಇಟ್ಟುಕೊಂಡು ಈಗಿನ ಯುವ ಮನಸ್ಸುಗಳಿಗೆ ಇಷ್ಟವಾಗುವಂತಹ ಚಿತ್ರ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. “ದಳಪತಿ’ ಅಂದರೆ, ಲೀಡರ್‌ ಎಂದರ್ಥ.

ಪ್ರತಿಯೊಬ್ಬರಿಗೂ ಪ್ರೀತಿ ಹೇಳಿಕೊಳ್ಳಲು ಮೀಟರ್‌ ಇರಬೇಕು. ಮಿಡ್ಲ್ಕ್ಲಾಸ್‌ ಅಥವಾ ಲೋ ಮಿಡ್ಲ್ಕ್ಲಾಸ್‌ ಯಾರೇ ಇರಲಿ, ಪ್ರೀತಿಯನ್ನು ಗೆಲ್ಲುವುದೇ ದೊಡ್ಡ ಸಮಸ್ಯೆ. ಅಂತಹ ಸಮಸ್ಯೆಯನ್ನು ಹೇಗೆ ದಾಟಿ ಇಲ್ಲಿ ಲವ್‌ಗೊಂದು ಅರ್ಥ ಕೊಡಲಾಗುತ್ತೆ ಎಂಬುದು ವಿಶೇಷ. ಎಲ್ಲಾ ಚಿತ್ರಗಳಲ್ಲಿರುವಂತೆ ಇಲ್ಲೂ ಲವ್‌ಸ್ಟೋರಿ ಇದೆಯಾದರೂ, ಅದನ್ನು ಹೊಸ ಪ್ಯಾಟ್ರನ್‌ನಲ್ಲಿ ಹೇಳಲಾಗಿದೆ.

ಪ್ರೇಮ್‌ ಮತ್ತು ಕೃತಿ ಅವರ ಜೋಡಿ ಇಲ್ಲಿ ಹೊಸ ಮೋಡಿ ಮಾಡುವುದು ಗ್ಯಾರಂಟಿ. ಪ್ರೇಮ್‌ ಅವರು ಕ್ಲಾಸ್‌ಗೂ ಸೈ ಮಾಸ್‌ಗೂ ಸೈ. ಇದು ಕಂಪ್ಲೀಟ್‌ ಮಾಸ್‌ ಫೀಲ್‌ ಸಿನಿಮಾ ಆಗಿದ್ದರೂ, ಕ್ಲಾಸ್‌ ಆಗಿದೆ. ನನ್ನ ಹಿಂದಿನ ಕಮರ್ಷಿಯಲ್‌ ಲವ್‌ಸ್ಟೋರಿ ಚಿತ್ರಗಳಿಗಿಂತಲೂ “ದಳಪತಿ’ಯನ್ನು ಬೇರೆ ರೀತಿಯಾಗಿ ತೋರಿಸಲು ಹೊರಟಿದ್ದೇನೆ ಎಂದು ವಿವರ ಕೊಡುವ ಪ್ರಶಾಂತ್‌ರಾಜ್‌, ಈಗಾಗಲೇ ಹಾಡುಗಳು ಕೇಳುಗರ ಮನಗೆದ್ದಿವೆ.

ಚಿತ್ರಕ್ಕೆ ಇನ್ನೊಂದು ಪ್ಲಸ್‌ ಅಂದರೆ ಅದು ಹಿನ್ನೆಲೆ ಸಂಗೀತ. ಚಿತ್ರವನ್ನು ಸುಮಾರು 200 ಚಿತ್ರಮಂದಿರಗಳಲ್ಲಿ ಜಯಣ್ಣ ವಿತರಣೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಏಕಕಾಲದಲ್ಲಿ ವಿದೇಶದಲ್ಲೂ ಚಿತ್ರ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ ಎನ್ನುತ್ತಾರೆ ನಿರ್ದೇಶಕರು.

ಟಾಪ್ ನ್ಯೂಸ್

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.