ಹೆದರಿಸಲು ಬರುತ್ತಿದ್ದಾಳೆ “ದಮಯಂತಿ’

ಸೆ. 18ರಂದು ಟೀಸರ್‌ ಬಿಡುಗಡೆ

Team Udayavani, Sep 11, 2019, 3:02 AM IST

ಬಹುಕಾಲದಿಂದ ತನ್ನ ಶೂಟಿಂಗ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ “ದಮಯಂತಿ’ ಚಿತ್ರ ತೆರೆಗೆ ಬರಲು ಅಣಿಯಾಗುತ್ತಿದೆ. ಸದ್ಯ ನಿಧಾನವಾಗಿ “ದಮಯಂತಿ’ಯ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಸೆ. 18ರಂದು “ದಮಯಂತಿ’ ಚಿತ್ರದ ಮೊದಲ ಟೀಸರ್‌ ಬಿಡುಗಡೆ ಮಾಡಲು ಪ್ಲಾನ್‌ ಹಾಕಿಕೊಂಡಿದೆ.

“ಶ್ರೀಲಕ್ಷ್ಮೀವೃಷಾದ್ರಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನವರಸನ್‌ ನಿರ್ಮಿಸಿ, ನಿರ್ದೇಶಿಸಿರುವ “ದಮಯಂತಿ’ ಚಿತ್ರ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದ್ದು, ಏಕಕಾಲಕ್ಕೆ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

ಇನ್ನು ಹಾರರ್‌, ಥ್ರಿಲ್ಲರ್‌ ಕಥಾಹಂದರದ “ದಮಯಂತಿ’ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಗಮನ ಸೆಳೆಯುವಂತಿವೆ. ಬೆಂಗಳೂರು, ಮೈಸೂರು, ಹೈದರಾಬಾದ್‌ ಮುಂತಾದ ಕಡೆಗಳಲ್ಲಿ ಸುಮಾರು 67 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಪಿ.ಕೆ.ಎಚ್‌ ದಾಸ್‌ ಛಾಯಾಗ್ರಹಣ, ಮಹೇಶ್‌ ರೆಡ್ಡಿ ಸಂಕಲನವಿದೆ.

ಚಿತ್ರದ ಹಾಡುಗಳಿಗೆ ಚಿತ್ರಕ್ಕೆ ಆರ್‌.ಎಸ್‌ ಗಣೇಶ್‌ ನಾರಾಯಣ್‌ ಸಂಗೀತ ನಿರ್ದೇಶನವಿದೆ. ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ, ಭಜರಂಗಿ ಲೋಕಿ, ಸಾಧುಕೋಕಿಲ, ತಬಲನಾಣಿ, ಮಿತ್ರ, ನವೀನ್‌ ಕೃಷ್ಣ, ಹೊನ್ನವಳ್ಳಿ ಕೃಷ್ಣ, ರವಿಗೌಡ, ಬಲರಾಜವಾಡಿ, ವೀಣಾಸುಂದರ್‌, ಕೆಂಪೇಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರತಂಡದ ಮೂಲಗಳ ಪ್ರಕಾರ ಅಕ್ಟೋಬರ್‌ ಅಂತ್ಯಕ್ಕೆ “ದಮಯಂತಿ’ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ