ಪುನೀತ್‌ ಬ್ಯಾನರ್‌ನಲ್ಲಿ ದಾನಿಶ್‌ ಚಿತ್ರ

Team Udayavani, Sep 30, 2018, 11:40 AM IST

ನೀವು “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’ ಚಿತ್ರ ನೋಡಿದ್ದರೆ ಅದರಲ್ಲಿ ಪುನೀತ್‌ರಾಜಕುಮಾರ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದರು. ಚಿತ್ರದಲ್ಲಿ ಅವರು ಪುನೀತ್‌ರಾಜಕುಮಾರ್‌ ಆಗಿಯೇ ಕಾಣಿಸಿಕೊಂಡಿದ್ದರು. ಆ ಚಿತ್ರದಲ್ಲಿ ನೀವು ಗೆಸ್ಟ್‌ ಅಪಿಯರೆನ್ಸ್‌ ಮಾಡಲು ಕಾರಣವೇನು ಎಂದು ಕೇಳಿದ್ದಕ್ಕೆ, “ನನಗೆ ದಾನಿಶ್‌ ಸೇಠ್ ಅಂದ್ರೆ ತುಂಬಾ ಇಷ್ಟ. ಯಾವತ್ತೂ ತುಂಬಾ ಜೋಶ್‌ನಿಂದ ಇರುತ್ತಾರೆ. ಅದಕ್ಕೆ ಅವರ ಚಿತ್ರದಲ್ಲಿ ಕಾಣಿಸಿಕೊಂಡೆ’ ಎಂದು ಮಾಧ್ಯಮ ಮಂದಿಯಲ್ಲಿ ಪುನೀತ್‌ ಹೇಳಿದ್ದರು.

ಈಗ ಪುನೀತ್‌ರಾಜಕುಮಾರ್‌ ಹಾಗೂ ದಾನಿಶ್‌ ಸೇಠ್ ಒಟ್ಟಾಗಿದ್ದಾರೆ. ಅದು ಸಿನಿಮಾವೊಂದಕ್ಕಾಗಿ. ಹೌದು, ಪುನೀತ್‌ರಾಜಕುಮಾರ್‌ ತಮ್ಮ ಪಿಆರ್‌ಕೆ ಬ್ಯಾನರ್‌ನಲ್ಲಿ ಹೊಸ ಚಿತ್ರ ನಿರ್ಮಿಸಲು ಮುಂದಾಗಿದ್ದು, ಈ ಚಿತ್ರದಲ್ಲಿ ದಾನಿಶ್‌ ನಾಯಕರಾಗಿ ನಟಿಸಲಿದ್ದಾರೆ. ಈಗಾಗಲೇ ಮಾತುಕತೆಯಾಗಿ ಎಲ್ಲವೂ ಅಂತಿಮವಾಗಿದ್ದು, ಸದ್ಯದಲ್ಲೇ ಚಿತ್ರ ಆರಂಭವಾಗಲಿದೆ.

ಪನ್ನಗ ಭರಣ ಈ ಚಿತ್ರದ ನಿರ್ದೇಶಕರು. ಹೊಸ ಬಗೆಯ ಕಥೆ ಮಾಡಿದ್ದು, ಈ ಹಿಂದೆ ದಾನಿಶ್‌ ಸೇಠ್ ಕಾಣಿಸಿಕೊಳ್ಳದ ರೀತಿಯಲ್ಲಿ ತಮ್ಮ ಹೊಸ ಚಿತ್ರದಲ್ಲಿ ತೋರಿಸಲು ಸಿದ್ಧರಾಗಿದ್ದಾರೆ. “ಹ್ಯಾಪಿ ನ್ಯೂ ಇಯರ್‌’ ಚಿತ್ರದ ನಂತರ ಪನ್ನಗ ನಿರ್ದೇಶಿಸಲು ಮುಂದಾಗಿರುವ ಚಿತ್ರವಿದು. ದಾನಿಶ್‌ ಅವರ “ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರ ಹಿಟ್‌ಲಿಸ್ಟ್‌ ಸೇರಿತ್ತು.

ಆ ನಂತರ ದಾನಿಶ್‌ “ಸೋಲ್ಡ್‌’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಬಂದಿತ್ತು. ಈಗ ಪುನೀತ್‌ ಬ್ಯಾನರ್‌ನಲ್ಲಿ ಅವರಿಗೆ ಅವಕಾಶ ಸಿಕ್ಕಿದೆ. ಸದ್ಯ ಪುನೀತ್‌ ಬ್ಯಾನರ್‌ನಲ್ಲಿ “ಕವಲುದಾರಿ’ ಚಿತ್ರ ಸಿದ್ಧವಾಗಿದ್ದು, ಚಿತ್ರೀಕರಣ ಮುಗಿದು ಬಿಡುಗಡೆಯ ಹಂತಕ್ಕೆ ಬಂದಿದೆ. ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದಲ್ಲದೇ, “ಮಾಯಾಬಜಾರ್‌’ ಎಂಬ ಚಿತ್ರವನ್ನು ಪುನೀತ್‌ ನಿರ್ಮಿಸುತ್ತಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ