ಶುಗರ್ ಫ್ಯಾಕ್ಟರಿಯಲ್ಲಿ ಡಾರ್ಲಿಂಗ್ ಕೃಷ್ಣ
ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್
Team Udayavani, Nov 1, 2020, 1:41 PM IST
“ಲವ್ ಮಾಕ್ಟೇಲ್’ ಚಿತ್ರದ ಸಕ್ಸಸ್ ಬಳಿಕ ನಟ ಡಾರ್ಲಿಂಗ್ ಕೃಷ್ಣ “ಲವ್ ಮಾಕ್ಟೇಲ್ -2′ ಚಿತ್ರದಲ್ಲಿ ಅಭಿನಯದ ಜೊತೆಗೆ ನಿರ್ದೇಶನದಲ್ಲೂ ನಿರತರಾಗಿದ್ದಾರೆ. ಅಲ್ಲದೆ ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಶ್ರೀಕೃಷ್ಣ ಆ್ಯಟ್ ಜಿಮೇಲ್ ಡಾಟ್ ಕಾಂ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದರ ನಡುವೆಯೇ ಡಾರ್ಲಿಂಗ್ ಕೃಷ್ಣ ಅಭಿನಯಿಸುತ್ತಿರುವ ಮತ್ತೂಂದು ಹೊಸ ಚಿತ್ರ ಅನೌನ್ಸ್ ಆಗಿದೆ. ಅಂದಹಾಗೆ, ಕೃಷ್ಣ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ “ಶುಗರ್ ಫ್ಯಾಕ್ಟರಿ’ ಎಂದು ಟೈಟಲ್ ಇಡಲಾಗಿದೆ.
ಇನ್ನು “ಶುಗರ್ ಫ್ಯಾಕರಿ’ ಚಿತ್ರಕ್ಕೆ ನಟಿ ಅಮೂಲ್ಯ ಸೋದರ ದೀಪಕ್ ಅರಸ್ ಆ್ಯಕ್ಷನ್ -ಕಟ್ ಹೇಳುತ್ತಿದ್ದಾರೆ. ಈ ಹಿಂದೆ “ಮನಸಾಲಜಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ದೀಪಕ್ ಅರಸ್, ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ಸಂಪೂರ್ಣ ಹಾಸ್ಯಮಯ ಕಥೆಯೊಂದನ್ನು ತೆರೆಮೇಲೆ ಹೇಳಲಿದ್ದಾರಂತೆ ನಿರ್ದೇಶಕರು.
ಇತ್ತೀಚಿಗಷ್ಟೆ ಈ ಚಿತ್ರದ ಟೈಟಲ್ ಅನೌನ್ಸ್ ಮಾಡಿರುವ ಚಿತ್ರತಂಡ, ಮುಂಬರುವ ಜನವರಿಯಿಂದ ಚಿತ್ರೀಕರಣ ಪ್ರಾರಂಭ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಇನ್ನೂ ಚಿತ್ರದಲ್ಲಿ ಕೃಷ್ಣ ಅವರಿಗೆ ಮೂವರು ನಾಯಕಿಯರು ಇರಲಿದ್ದು, ಸದ್ಯ ಚಿತ್ರತಂಡ ನಾಯಕಿಯರು ಮತ್ತು ಇತರೆ ಕಲಾವಿದರ ಹುಡುಕಾಟದಲ್ಲಿದೆ. ಉಳಿದಂತೆ “ಶುಗರ್ ಫ್ಯಾಕ್ಟರಿ’ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ. ಸದ್ಯ “ಲವ್ ಮಾಕ್ಟೇಲ್-2′ ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣ ಮುಗಿಸಿರುವ ಡಾರ್ಲಿಂಗ್ ಕೃಷ್ಣ, ಇದೇ ಡಿಸೆಂಬರ್ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಈ ಚಿತ್ರವನ್ನು ರಿಲೀಸ್ ಮಾಡುವ ಯೋಚನೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್