ಧನ್ವೀರ್‌ “ಬಂಪರ್‌’ಗೆ ದರ್ಶನ್‌ ಕ್ಲಾಪ್‌

Team Udayavani, Jan 16, 2020, 7:05 AM IST

ಧನ್ವೀರ್‌ ನಾಯಕರಾಗಿರುವ “ಬಂಪರ್‌’ ಚಿತ್ರದ ಮುಹೂರ್ತ ಬುಧವಾರ ನಡೆಯಿತು. ನಟ ದರ್ಶನ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. “ಬಜಾರ್‌’ ಚಿತ್ರದ ಮೂಲಕ ನಾಯಕ ನಟರಾಗಿ ಲಾಂಚ್‌ ಆದ ಧನ್ವೀರ್‌ ನಟನೆಯ ಎರಡನೇ ಸಿನಿಮಾ “ಬಂಪರ್‌’.

ಹರಿ ಸಂತೋಷ್‌ ಈ ಚಿತ್ರದ ನಿರ್ದೇಶಕರು. “ಭರಾಟೆ’ ಚಿತ್ರ ನಿರ್ಮಿಸಿದ್ದ ಸುಪ್ರಿತ್‌ ಈ “ಬಂಪರ್‌’ ಚಿತ್ರದ ನಿರ್ಮಾಪಕರು. ಅಂದಹಾಗೆ, “ಬಂಪರ್‌’ ಚಿತ್ರದಲ್ಲಿ ಸಾಕಷ್ಟು ನೈಜತೆಗೆ ಒತ್ತು ಕೊಡುವ ದೃಶ್ಯಗಳ ಜೊತೆಗೆ ಸಂದೇಶ ನೀಡುವ ಅಂಶಗಳಿವೆಯಂತೆ. ಅವೆಲ್ಲವನ್ನು ಕಮರ್ಷಿಯಲ್‌ ಅಂಶಗಳ ಮೂಲಕ ಹೇಳಲು ಚಿತ್ರತಂಡ ಹೊರಟಿದೆ.

ಮಧ್ಯಮ ವರ್ಗದ ಹುಡುಗನಾಗಿ ಬದುಕಿನಲ್ಲಿ ಏನೋ ಆಗಬೇಕೆಂದು ಬಯಕೆ ಹೊಂದಿರುವ ಪಾತ್ರದಲ್ಲಿ ಧನ್ವೀರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದ ಮೂಲಕ ಜನರಿಗೆ ಇಷ್ಟವಾಗುವ ವಿಶ್ವಾಸ ಕೂಡಾ ಧನ್ವೀರ್‌ಗಿದೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತವಿದೆ. ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ