ಕುರುಕ್ಷೇತ್ರಕ್ಕೆ ದರ್ಶನ್ ಡಬ್ಬಿಂಗ್ ಮುಕ್ತಾಯ
Team Udayavani, Jun 8, 2018, 1:38 PM IST
ದರ್ಶನ್ ಅಭಿನಯದ 50ನೇ ಚಿತ್ರವಾದ “ಕುರುಕ್ಷೇತ್ರ’ದ ಸುದ್ದಿ ಸ್ವಲ್ಪ ಕಡಿಮೆಯಾಗಿತ್ತು. ನಿರ್ಮಾಪಕ ಮುನಿರತ್ನ ಅವರು ವಿಧಾನಸಭೆ ಚುನಾವಣೆಗಳಲ್ಲಿ ಬಿಝಿ ಇದ್ದುದರಿಂದ, ಚಿತ್ರದ ಕೆಲಸಗಳು ಹೆಚ್ಚು ಸದ್ದುಗದ್ದಲವಿಲ್ಲದೆ ನಡೆಯುತ್ತಿದ್ದವು.
ಈಗ ಚುನಾವಣೆ ಮುಗಿದಿದೆ. ಹಾಗೆಯೇ ಚಿತ್ರದ ಕೆಲಸಗಳು ಸಹ ಮುಗಿಯುವ ಹಂತಕ್ಕೆ ಬಂದಿದೆ. ಅದರಲ್ಲೂ ಚಿತ್ರಕ್ಕೆ ದರ್ಶನ್ ಅವರ ಡಬ್ಬಿಂಗ್ ಬುಧವಾರ ಸಂಪೂರ್ಣವಾಗಿದೆ. ಮಿಕ್ಕಂತೆ ಒಂದಿಷ್ಟು ಕೆಲಸಗಳು ಬಾಕಿ ಇದ್ದು, ಮುಂದಿನ ಕೆಲವೇ ದಿನಗಳಲ್ಲಿ ಅದೂ ಸಹ ಮುಗಿಯಲಿದೆ.
“ಕುರುಕ್ಷೇತ್ರ’ ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ದರ್ಶನ್ ಜೊತೆಗೆ ಅಂಬರೀಶ್, ಅರ್ಜುನ್ ಸರ್ಜಾ, ರವಿಚಂದ್ರನ್, ರವಿಶಂಕರ್, ನಿಖೀಲ್ ಕುಮಾರ್, ರವಿಚೇತನ್, ಭಾರತಿ ವಿಷ್ಣುವರ್ಧನ್, ಶ್ರೀನಿವಾಸಮೂರ್ತಿ, ಸೋನು ಸೂದ್, ಹರಿಪ್ರಿಯಾ, ಮೇಘನಾ ರಾಜ್, ಯಶಸ್ ಸೂರ್ಯ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಅಜಯನ್ ವೆನ್ಸೆಂಟ್ ಛಾಯಾಗ್ರಹಣ ಮಾಡಿದ್ದು, ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. “ಕುರುಕ್ಷೇತ್ರ’ ಚಿತ್ರದ ಆಡಿಯೋ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಜುಲೈನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.