Udayavni Special

ಕೋಮಲ್‌ ಬೆಂಬಲಕ್ಕೆ ನಿಂತ ದರ್ಶನ್‌ ಅಭಿಮಾನಿಗಳು

Team Udayavani, Jul 30, 2019, 3:07 AM IST

Komal

ಫ‌ುಟ್‌ಪಾತ್‌ನಲ್ಲಿ ಹೋಗುತ್ತಿದ್ದವನ ಮೇಲೆ ಬಂದು ಗುದ್ದಿದರೆ ನಾನೇನು ಮಾಡೋಕ್ಕಾಗುತ್ತೆ … ಹೀಗಂತ ಕೋಮಲ್‌ ಬೇಸರ ತೋಡಿಕೊಂಡಿದ್ದರು. ಅದಕ್ಕೆ ಕಾರಣ ಅವರ ನಟನೆಯ “ಕೆಂಪೇಗೌಡ-2′ ಚಿತ್ರ ರಿಲೀಸ್‌ (ಆ.09) ದಿನವೇ ಬಹುನಿರೀಕ್ಷಿತ, ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರ ಬಿಡುಗಡೆಯಾಗುತ್ತಿರುವುದು. ಬಹುದಿನಗಳ ನಂತರ ಕೋಮಲ್‌ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ “ಕೆಂಪೇಗೌಡ-2′ ಚಿತ್ರ ಆಗಸ್ಟ್‌ 09 ರಂದು ತೆರೆಕಾಣುತ್ತಿದೆ.

ಆಗಸ್ಟ್‌ 02 ರಂದು ತೆರೆಕಾಣಬೇಕಿದ್ದ “ಕುರುಕ್ಷೇತ್ರ’ ತನ್ನ ಬಿಡುಗಡೆಯನ್ನು ಆ.09ಕ್ಕೆ ಹಾಕಿರುವುದರಿಂದ ಕೋಮಲ್‌ ಬೇಸರಿಸಿಕೊಂಡಿದ್ದರು. ಈಗ ಕೋಮಲ್‌ ಬೆಂಬಲಕ್ಕೆ ಸ್ವತಃ ದರ್ಶನ್‌ ಅಭಿಮಾನಿಗಳು ನಿಂತಿದ್ದಾರೆ. ಇವರ ಜೊತೆಗೆ ಜಗ್ಗೇಶ್‌ ಅವರ ಅಭಿಮಾನಿಗಳು ಕೂಡಾ ಕೋಮಲ್‌ಗೆ ಸಾಥ್‌ ನೀಡುತ್ತಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಜೊತೆಗೆ ಕೋಮಲ್‌ ಅವರ “ಕೆಂಪೇಗೌಡ-2′ ಚಿತ್ರವನ್ನೂ ನೋಡುವುದಾಗಿ ಹೇಳಿದ್ದಾರೆ.

ದರ್ಶನ್‌ ಅವರ ಕೆಲವು ಅಭಿಮಾನಿಗಳು ಈ ಕುರಿತು ಟ್ವೀಟ್‌ ಮಾಡಿದ್ದಾರೆ. ಅವರ ಅಭಿಮಾನಿಗಳು ಮಾಡಿರುವ ಕೆಲವು ಟ್ವೀಟ್‌ಗಳು ಹೀಗಿವೆ: “ತೂಗುದೀಪ ಅಭಿಮಾನಿಗಳಲ್ಲಿ ಮನವಿ 9/8/2019 ಕೋಮಲ್‌ ರ್ಸ ಅವರ ‘ಕೆಂಪೇಗೌಡ 2′ ಚಿತ್ರ ಬರುತ್ತಿದೆ ದಯವಿಟ್ಟು ಎಲ್ಲಾ ಡಿ ಬಾಸ್‌ ಅಭಿಮಾನಿಗಳು ಡಿ ಬಾಸ್‌ “ಕುರುಕ್ಷೇತ್ರ’ ಜಾತ್ರೆ ಆದ ಮೇಲೆ ಕೋಮಲ್‌ ಸರ್ ಅವರ ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂದು ಡಿ ಬಾಸ್‌ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ’ ಎಂದರೆ, ಇನ್ನು ಕೆಲವು ಅಭಿಮಾನಿಗಳು “ನಮ್ಮ ಡಿ ಬಾಸ್‌ ಎಲ್ಲರಿಗೂ ಬೆಂಬಲ ಕೊಡುತ್ತಾರೆ.

ಅದರಂತೆ ನಾವು ಕೂಡಾ ಎಲ್ಲರಿಗೂ ಬೆಂಬಲ ಕೊಡುತ್ತೇವೆ. ನರ್ತಕಿಯಲ್ಲಿ “ಕುರುಕ್ಷೇತ್ರ’ ಹಾಗೂ ಸಂತೋಷ್‌ ಚಿತ್ರಮಂದಿರಲ್ಲಿ “ಕೆಂಪೇಗೌಡ-2′ ನೋಡುತ್ತೇವೆ’ ಎಂದಿದ್ದಾರೆ. ಜಗ್ಗೇಶ್‌ ಅಭಿಮಾನಿಗಳು ಕೂಡಾ ಕೋಮಲ್‌ ಬೆಂಬಲಕ್ಕೆ ನಿಂತಿದ್ದು, ಸಿನಿಮಾ ನೋಡುವ ಭರವಸೆ ನೀಡಿದ್ದಾರೆ. ಈ ಮೂಲಕ ಅನಾವಶ್ಯಕ ವಿವಾದವಾಗದಂತೆ ಸ್ವತಃ ಅಭಿಮಾನಿಗಳೇ ನೋಡಿಕೊಂಡಿರುವುದು ಶ್ಲಾಘನೀಯ. “ಕೆಂಪೇಗೌಡ-2′ ಚಿತ್ರದಲ್ಲಿ ಕೋಮಲ್‌ ಮೊದಲ ಬಾರಿಗೆ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಇಮೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮುನಿರತ್ನ ನನ್ನ ಗಾಡ್‌ಫಾದರ್‌ ಅಲ್ಲ. ಚಿತ್ರದ ನಿರ್ಮಾಪಕರಷ್ಟೇ: ನಿಖಿಲ್ ಕುಮಾರಸ್ವಾಮಿ

ಮುನಿರತ್ನ ನನ್ನ ಗಾಡ್‌ಫಾದರ್‌ ಅಲ್ಲ. ಚಿತ್ರದ ನಿರ್ಮಾಪಕರಷ್ಟೇ: ನಿಖಿಲ್ ಕುಮಾರಸ್ವಾಮಿ

ಹತ್ರಾಸ್ ರೇಪ್ ಕೇಸ್ ಬೇರೆಡೆಗೆ ವರ್ಗಾವಣೆ ಇಲ್ಲ, ಹೈಕೋರ್ಟ್ ವಿಚಾರಣೆ ನಡೆಸಲಿದೆ: ಸುಪ್ರೀಂ

ಹತ್ರಾಸ್ ರೇಪ್ ಕೇಸ್ ಬೇರೆಡೆಗೆ ವರ್ಗಾವಣೆ ಇಲ್ಲ, ಹೈಕೋರ್ಟ್ ವಿಚಾರಣೆ ನಡೆಸಲಿದೆ: ಸುಪ್ರೀಂ

ಭಕ್ತಕೋಡಿ ಸ್ವಿಫ್ಟ್- ಓಮ್ನಿ ಅಪಘಾತ: ಗಾಯಗೊಂಡಿದ್ದ ಓಮ್ನಿ ಚಾಲಕ ಸಾವು

ಭಕ್ತಕೋಡಿ ಸ್ವಿಫ್ಟ್- ಓಮ್ನಿ ಅಪಘಾತ: ಗಾಯಗೊಂಡಿದ್ದ ಓಮ್ನಿ ಚಾಲಕ ಸಾವು

2021ರ ಆರಂಭದಲ್ಲೇ ರಾಜ್ಯದ ಜನರಿಗೆ ಸಿಗಲಿದೆ ಕೋವಿಡ್ ಲಸಿಕೆ: ಸಚಿವ ಸುಧಾಕರ್

2021ರ ಆರಂಭದಲ್ಲೇ ರಾಜ್ಯದ ಜನರಿಗೆ ಸಿಗಲಿದೆ ಕೋವಿಡ್ ಲಸಿಕೆ: ಸಚಿವ ಸುಧಾಕರ್

ಅಮಾಯಕರ ಮೇಲೆ ಪಿ.ಎಸ್.ಐ ದರ್ಪ ಆರೋಪ: ಆಲ್ದೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ

ಅಮಾಯಕರ ಮೇಲೆ ಪಿ.ಎಸ್.ಐ ದರ್ಪ ಆರೋಪ: ಆಲ್ದೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ

“ಮತ್ತೆ ಕಡೆಗಣನೆ..” ಭಾರತೀಯ ತಂಡ ಸೇರಲು ಈತ ಇನ್ನೆಷ್ಟು ಉತ್ತಮ ಪ್ರದರ್ಶನ ತೋರಬೇಕು?

“ಮತ್ತೆ ಕಡೆಗಣನೆ..” ಭಾರತೀಯ ತಂಡ ಸೇರಲು ಈತ ಇನ್ನೆಷ್ಟು ಉತ್ತಮ ಪ್ರದರ್ಶನ ತೋರಬೇಕು?

ಬಿಹಾರ ಚುನಾವಣೆ: ನಿತೀಶ್ ರಿಂದ ದೂರಸರಿಯುತ್ತಿದೆ ಎನ್ ಡಿಎ: ಏನಿದು ಬಿಜೆಪಿ ಲೆಕ್ಕಾಚಾರ

ಬಿಹಾರ ಚುನಾವಣೆ: ನಿತೀಶ್ ರಿಂದ ದೂರಸರಿಯುತ್ತಿದೆ ಎನ್ ಡಿಎ: ಏನಿದು ಬಿಜೆಪಿ ಲೆಕ್ಕಾಚಾರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cinema-tdy-1

ಆನ ಆದ ಅದಿತಿ : ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

20 ವರ್ಷ ನಂತರ ಚಿರು ಮಗುನಾ ಹೀರೋ ಮಾಡ್ತೀನಿ…

20 ವರ್ಷ ನಂತರ ಚಿರು ಮಗುನಾ ಹೀರೋ ಮಾಡ್ತೀನಿ…

cinema-tdy-1

ಕೆಜಿಎಫ್-2 ಟ್ರೇಲರ್‌ ಬಿಡಿ..: ಫ್ಯಾನ್ಸ್‌ ಒತ್ತಾಯ

ಸ್ಯಾಂಡಲ್‌ವುಡ್‌ ಡ್ರಗ್‌ ಜಾಲ : ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಪೂರ್ಣ

ಸ್ಯಾಂಡಲ್‌ವುಡ್‌ ಡ್ರಗ್‌ ಜಾಲ : ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಪೂರ್ಣ

ರಾಯರ ಆಶೀರ್ವಾದ: ಮೇಘನಾ-ಚಿರು ಮಗು ಬಗ್ಗೆ ನವರಸ ನಾಯಕ ಜಗ್ಗೇಶ್ ಮೊದಲ ಮಾತು

ರಾಯರ ಆಶೀರ್ವಾದ: ಮೇಘನಾ-ಚಿರು ಮಗು ಬಗ್ಗೆ ನವರಸ ನಾಯಕ ಜಗ್ಗೇಶ್ ಮೊದಲ ಮಾತು

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಮುನಿರತ್ನ ನನ್ನ ಗಾಡ್‌ಫಾದರ್‌ ಅಲ್ಲ. ಚಿತ್ರದ ನಿರ್ಮಾಪಕರಷ್ಟೇ: ನಿಖಿಲ್ ಕುಮಾರಸ್ವಾಮಿ

ಮುನಿರತ್ನ ನನ್ನ ಗಾಡ್‌ಫಾದರ್‌ ಅಲ್ಲ. ಚಿತ್ರದ ನಿರ್ಮಾಪಕರಷ್ಟೇ: ನಿಖಿಲ್ ಕುಮಾರಸ್ವಾಮಿ

ಓದುಗರ ಅಭಿರುಚಿಗೆ ತಕ್ಕ ಕೃತಿ ಬಹುಕಾಲ ಉಳಿಯುತ್ತದೆ

ಓದುಗರ ಅಭಿರುಚಿಗೆ ತಕ್ಕ ಕೃತಿ ಬಹುಕಾಲ ಉಳಿಯುತ್ತದೆ

ಡ್ರೋಣ್‌ನಿಂದ ಕೃಷಿ ಜಮೀನುಗಳಿಗೆ ಔಷಧಿ ಸಿಂಪಡಣೆ ಪ್ರಾತ್ಯಕ್ಷಿಕೆ

ಡ್ರೋಣ್‌ನಿಂದ ಕೃಷಿ ಜಮೀನುಗಳಿಗೆ ಔಷಧಿ ಸಿಂಪಡಣೆ ಪ್ರಾತ್ಯಕ್ಷಿಕೆ

ಕಾಂಗ್ರೆಸ್‌ ನಾಯಕರಿಂದ ಅಕ್ರಮ ಕೆರೆ ಒತ್ತುವರಿ

ಕಾಂಗ್ರೆಸ್‌ ನಾಯಕರಿಂದ ಅಕ್ರಮ ಕೆರೆ ಒತ್ತುವರಿ

ಬೇಲೂರಿಗೆ ಪ್ರವಾಸಿಗರ ದಂಡು

ಬೇಲೂರಿಗೆ ಪ್ರವಾಸಿಗರ ದಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.