ಮೊದಲ ಸಿನಿಮಾದ ನಿರ್ಮಾಪಕರಿಗೆ ದರ್ಶನ್‌ ಸನ್ಮಾನ


Team Udayavani, Aug 8, 2017, 10:45 AM IST

d-sanmana.jpg

ದರ್ಶನ್‌ 50ನೇ ಚಿತ್ರ “ಕುರುಕ್ಷೇತ್ರ’ ಭಾನುವಾರವಷ್ಟೇ ಸೆಟ್ಟೇರಿದೆ. ಸಹಜವಾಗಿಯೇ 50 ಸಿನಿಮಾಗಳನ್ನು ಪೂರೈಸಿದ ಖುಷಿ ದರ್ಶನ್‌ ಅವರಿಗಿದೆ. ದರ್ಶನ್‌ ಈಗ 50 ಸಿನಿಮಾದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ. ಹಾಗಂತ ತಮಗೆ ಮೊದಲು ಅವಕಾಶ ಕೊಟ್ಟ ನಿರ್ಮಾಪಕರನ್ನು ದರ್ಶನ್‌ ಮರೆತಿಲ್ಲ.

ಅದೇ ಕಾರಣಕ್ಕೆ ತಮಗೆ ಮೊದಲು ಅವಕಾಶ ಕೊಟ್ಟ ನಿರ್ಮಾಪಕರನ್ನು ತಮ್ಮ 50ನೇ ಸಿನಿಮಾದ ಮುಹೂರ್ತ ದಿನ ದರ್ಶನ್‌ ಸನ್ಮಾನಿಸಿದ್ದಾರೆ. ಹೌದು, ದರ್ಶನ್‌ ಅವರ ಮೊದಲ ಚಿತ್ರ “ಮೆಜೆಸ್ಟಿಕ್‌’ ನಿರ್ಮಿಸಿದ ನಿರ್ಮಾಪಕ ಎಂ.ಜಿ. ರಾಮಮೂರ್ತಿಯವರನ್ನು ದರ್ಶನ್‌ ತಮ್ಮ ಮನೆಯಲ್ಲಿ ಮೈಸೂರು ಪೇಟಾ ತೊಡಿಸಿ, ಹಾರ ಹಾಕಿ ಸನ್ಮಾನಿಸಿದ್ದಾರೆ.

“ಕುರುಕ್ಷೇತ್ರ’ ಚಿತ್ರದ ಮುಹೂರ್ತ ಮುಗಿಸಿಕೊಂಡು ಎಂ.ಜಿ.ರಾಮಮೂರ್ತಿಯವರನ್ನು ತಮ್ಮ ಜೊತೆಗೆ ಮನೆಗೆ ಕರೆದುಕೊಂಡು ಹೋದ ದರ್ಶನ್‌ ಅವರನ್ನು ಸನ್ಮಾನಿಸುವ ಮೂಲಕ ಮೊದಲ ಅವಕಾಶ ಕೊಟ್ಟಿದ್ದನ್ನು ನೆನಪಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡುವ ದರ್ಶನ್‌, “ಇವತ್ತು 50ನೇ ಸಿನಿಮಾ ಆಗಿರಬಹುದು. ಆದರೆ, ಮೊದಲು ವೇದಿಕೆ ಹಾಕಿ ಕೊಟ್ಟವರು ರಾಮಮೂರ್ತಿಯವರು.

ಮೊದಲು ಅವಕಾಶ ಕೊಡೋದು ತುಂಬಾ ಮುಖ್ಯ. ಮೊದಲು ವೇದಿಕೆ ಹಾಕಿಕೊಟ್ಟವರನ್ನು, ಅವಕಾಶ ನೀಡಿದವರನ್ನು ನೆನಪಿಸಿಕೊಳ್ಳೋದು ನಮ್ಮ ಕರ್ತವ್ಯ. ಹಾಗಾಗಿ, 50ನೇ ಸಿನಿಮಾದ ಮುಹೂರ್ತ ದಿನ ಅವರಿಗೆ ಚಿಕ್ಕದಾಗಿ ಒಂದು ಸನ್ಮಾನ ಮಾಡಿದ್ದೇವೆ ಅಷ್ಟೇ’ ಎನ್ನುತ್ತಾರೆ.  ಸದ್ಯ ದರ್ಶನ್‌ ಅವರ “ತಾರಕ್‌’ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ತೆರೆಕಾಣಲಿದೆ. 

ಟಾಪ್ ನ್ಯೂಸ್

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

111111111

ನವೆಂಬರ್ ನಲ್ಲಿ ತೆರೆಯ ಮೇಲೆ ಮೂಡಿ ಬರಲಿದೆ ‘ಟಾಮ್ ಅಂಡ್ ಜೆರ್ರಿ’

WS_Jazz 4

ಕನ್ನಡದಲ್ಲೇ ಮೊದಲ ಪ್ರಯೋಗ : ವಿಂಡೋಸೀಟ್ ನಲ್ಲಿ ಮೂಡಿ ಬಂತು ಜಾಝ್ ಸಾಂಗ್

mugilpete

ಸಂಬಂಧಗಳ ಸುತ್ತ ಮುಗಿಲ್‌ಪೇಟೆ

kannada news films

ಬಿಡುಗಡೆಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾಗಳು…

kotigobba 3

ಸಲಗ, ಕೋಟಿಗೊಬ್ಬ-3 ಸಕ್ಸಸ್‌ ಸಂಭ್ರಮ

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ

ಸಾರಿಗೆ ನೌಕರರ ಪರ ಅನಿರ್ಧಿಷ್ಟಾವಧಿ ಧರಣಿ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.