Viral: ಸ್ನೇಹಿತೆಯ ಬರ್ತ್ ಡೇ ಪಾರ್ಟಿಯನ್ನು ಎಂಜಾಯ್ ಮಾಡಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ
Team Udayavani, Sep 10, 2024, 11:52 AM IST
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ (Renukaswamy case) ಪ್ರಕರಣದಲ್ಲಿ ದರ್ಶನ್ & ಗ್ಯಾಂಗ್ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ಬಳಿಕ ಪ್ರಕರಣ ಮತ್ತಷ್ಟು ಸದ್ದು ಮಾಡುತ್ತಿದೆ.
ದರ್ಶನ್ ಬಂಧನವಾದ ಬಳಿಕದಿಂದ ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಪತಿಯ ಸಂಕಷ್ಟ ದೂರವಾಗಲು ಹತ್ತಾರು ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದ್ದಾರೆ. ಜೈಲಿಗೆ ಅನೇಕ ಸಲಿ ಭೇಟಿಯಾಗಿ ಪತಿಗೆ ಧೈರ್ಯ ತುಂಬಿದ್ದಾರೆ.
ಜೈಲಿಗೆ ಹೋಗಿ ಪತಿ ದರ್ಶನ್ (Darshan) ಅವರನ್ನು ಭೇಟಿ ನೀಡಿದ ಬಳಿಕ ಭಾವುಕರಾಗಿದ್ದ ವಿಜಯಲಕ್ಷ್ಮೀ ಇತ್ತೀಚೆಗೆ ತನ್ನ ಆತ್ಮೀಯ ಸ್ನೇಹಿತೆಯೊಬ್ಬಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿದೆ.
ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ದರ್ಶನ್ ಅದರಲ್ಲಿನ ಸಾಕ್ಷ್ಯಗಳನ್ನು ನೋಡಿ ಮುಂದೆ ಏನು ಮಾಡುವುದೆನ್ನುವ ಚಿಂತೆಯಲ್ಲಿದ್ದಾರೆ. ಆದರೆ ಅವರ ಪತ್ನಿ ವಿಜಯಲಕ್ಷ್ಮೀ ಶ್ರುತಿ ರಮೇಶ್ ಕುಮಾರ್ ಸ್ನೇಹಿತೆಯ ಬರ್ತ್ ಡೇ ಪಾರ್ಟಿಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.
ವಿಜಯಲಕ್ಷ್ಮೀ ಪಾರ್ಟಿಯಲ್ಲಿ ಆಪ್ತ ಗೆಳೆತಿಗೆ ಕೇಕ್ ತಿನ್ನಿಸಿ ತಾವು ಕೇಕ್ ತಿಂದು, ಅಪ್ಪಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಶ್ರುತಿ ರಮೇಶ್ ಕುಮಾರ್ ಅವರಿಗೆ ವಿಶ್ ಮಾಡುವ ಫೋಟೋಗಳು ಕೂಡ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಪತಿ ಜೈಲಿನಲ್ಲಿದ್ದರೂ ಇಂತಹ ಪಾರ್ಟಿಗಳಲ್ಲಿ ಅವರು ಭಾಗಿಯಾಗುವ ಅನಿವಾರ್ಯತೆ ಇತ್ತಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಇನ್ನೊಂದೆಡೆ ಪಾರ್ಟಿ ಮುಗಿಸಿ ವಿಜಯಲಕ್ಷ್ಮೀ ಪತಿಗಾಗಿ ಮತ್ತೆ ಟೆಂಪಲ್ ರನ್ ಆರಂಭಿಸಿದ್ದಾರೆ. ಅಸ್ಸಾಂನ ದೇವಸ್ಥಾನವೊಂದಕ್ಕೆ ಅವರು ಭೇಟಿ ನೀಡಿದ್ದಾರೆ.
ಪ್ರಕರಣ ಸಂಬಂಧ ದರ್ಶನ್ ಮತ್ತು ಇತರೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆ.12ರವರೆಗೆ ವಿಸ್ತರಣೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Martin Box Office: ಹೇಗಿದೆ ʼಮಾರ್ಟಿನ್ʼ ಹವಾ.. ಎರಡು ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು?
Yuva: ರೌಡಿಸಂ ಸುತ್ತ ಯುವ ರಾಜಕುಮಾರ್: ಹೊಸ ಚಿತ್ರಕ್ಕೆ 3 ನಿರ್ಮಾಪಕರು
Box office: ಮಾರ್ಟಿನ್ To ಜಿಗ್ರಾ.. ದಸರಾಕ್ಕೆ ರಿಲೀಸ್ ಆದ ಸಿನಿಮಾಗಳು ಗಳಿಸಿದ್ದೆಷ್ಟು?
Darshan; ವಿಜಯಲಕ್ಷ್ಮೀ ಪೋಸ್ಟ್ ವೈರಲ್: ದರ್ಶನ್ ಬಿಡುಗಡೆಯ ಸೂಚನೆ?
Kannada cinema: ನವೆಂಬರ್ 22ಕ್ಕೆ ʼಮರ್ಯಾದೆ ಪ್ರಶ್ನೆʼ ತೆರೆಗೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.