“ಹುಲಿಯಾ-2’ಗೆ ದೇವರಾಜ್‌ ಕಥೆ

ಅಪ್ಪನ ಕಥೆಗೆ ಮಗ ಹೀರೋ

Team Udayavani, Mar 2, 2020, 7:04 AM IST

prajwal

ಹುಲಿಯಾ – ದೇವರಾಜ್‌ ಅವರ ಕೆರಿಯರ್‌ನಲ್ಲಿ ಒಂದು ಹೊಸ ಬಗೆಯ ಸಿನಿಮಾವಾಗಿ ಗುರುತಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಯಾವುದೇ ನಟನಿಗಿರಲಿ, ಹೊಸ ಬಗೆಯ ಪಾತ್ರಗಳು ಆಗಾಗ ಕಾಡುತ್ತಲೇ ಇರುತ್ತದೆ. ಈಗ ದೇವರಾಜ್‌ ಅವರಿಗೂ ತಮ್ಮ “ಹುಲಿಯಾ’ ಚಿತ್ರ ಕಾಡಿದೆ. ಹಾಗಾಗಿಯೇ “ಹುಲಿಯಾ-2′ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ದೇವರಾಜ್‌ ಈಗ “ಹುಲಿಯಾ-2′ ಕನಸು ಕಂಡಿದ್ದಾರೆ. “ಹುಲಿಯಾ-2′ ಗಾಗಿ ಕಥೆ ಬರೆಯುತ್ತಿದ್ದಾರೆ.

ಈಗಾಗಲೇ ಕಥೆ ಅಂತಿಮ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಎಲ್ಲಾ ಓಕೆ, “ಹುಲಿಯಾ-2′ ಚಿತ್ರದಲ್ಲಿ ದೇವರಾಜ್‌ ನಟಿಸುತ್ತಾರಾ ಅಥವಾ ನಿರ್ದೇಶನ ಮಾಡುತ್ತಾರಾ ಎಂದರೆ ಅದಕ್ಕೆ ಉತ್ತರ ಪ್ರಜ್ವಲ್‌ ದೇವರಾಜ್‌. ಹೌದು, ಪ್ರಜ್ವಲ್‌ ದೇವರಾಜ್‌ ಅವರನ್ನು ಗಮನದಲ್ಲಿಟ್ಟುಕೊಂಡು ದೇವರಾಜ್‌ “ಹುಲಿಯಾ-2′ ಕಥೆ ಬರೆಯುತ್ತಿದ್ದಾರೆ. ಈ ಮೂಲಕ ತನ್ನ ಕನಸನ್ನು ಮಗನ ಮೂಲಕ ನನಸು ಮಾಡಲು ಹೊರಟಿದ್ದಾರೆ. ಈ ಬಗ್ಗೆ ಮಾತನಾಡುವ ಪ್ರಜ್ವಲ್‌ ದೇವರಾಜ್‌, “ಅಪ್ಪ “ಹುಲಿಯಾ-2′ ಗಮನದಲ್ಲಿಟ್ಟುಕೊಂಡು ಕಥೆ ಬರೆಯುತ್ತಿದ್ದಾರೆ.

ಈಗಾಗಲೇ ಕಥೆ ಅಂತಿಮ ಹಂತಕ್ಕೂ ಬಂದಂತಿದೆ’ ಎನ್ನುವ ಪ್ರಜ್ವಲ್‌, ದೇವರಾಜ್‌ ಅವರೇ ನಿರ್ದೇಶನ ಮಾಡುವ ಸಾಧ್ಯತೆಯ ಬಗ್ಗೆಯೂ ಹೇಳಿದ್ದಾರೆ. “ಸದ್ಯಕ್ಕೆ ಕಥೆ ಬಿಟ್ಟರೆ ಬೇರೆ ಯಾವುದೂ ಅಂತಿಮವಾಗಿಲ್ಲ. ಅವರಿಗೆ ನಾನು ನಟಿಸಬೇಕೆಂಬ ಆಸೆ ಇರೋದು ನಿಜ. ನಿರ್ದೇಶನದ ಬಗ್ಗೆ ಇನ್ನೂ ಗೊತ್ತಿಲ್ಲ. ಅವರು ಮಾಡಿದರೂ ಮಾಡಬಹುದು’ ಎಂದಷ್ಟೇ ಹೇಳುತ್ತಾರೆ.  ಸದ್ಯ ಪ್ರಜ್ವಲ್‌ ದೇವರಾಜ್‌ ಅವರ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈಗಾಗಲೇ ಆಡಿಯೋ ಬಿಡುಗಡೆಯಾಗಿದೆ.

ಈ ಚಿತ್ರದ ಬೆನ್ನಲ್ಲೇ “ಅರ್ಜುನ್‌ ಗೌಡ’ ಬರಲಿದೆ. ಈಗಾಗಲೇ ಬಿಡುಗಡೆಯಾಗಿರುವ “ಜಂಟಲ್‌ವುನ್‌’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾದ ಬಗ್ಗೆ ಪ್ರಜ್ವಲ್‌ಗೆ ಖುಷಿ ಇದೆ. “ಜಂಟಲ್‌ವುನ್‌ ನನ್ನ ಕೆರಿಯರ್‌ನಲ್ಲಿ ಒಂದು ಹೊಸ ಬಗೆಯ ಪಾತ್ರ. ಜನ ಕೂಡಾ ಇಷ್ಟಪಟ್ಟು, ಮೆಚ್ಚುಗೆ ವ್ಯಕ್ತಪಡಿಸಿದರು’ ಎನ್ನುತ್ತಾರೆ ಪ್ರಜ್ವಲ್‌. ಸದ್ಯ ಪ್ರಜ್ವಲ್‌ ಕೈಯಲ್ಲಿ “ವೀರಂ’, ಪಿ.ಸಿ.ಶೇಖರ್‌ ಹಾಗೂ ರಾಮ್‌ ನಾರಾಯಣ್‌ ನಿರ್ದೇಶನದ ತಲಾ ಒಂದೊಂದು ಚಿತ್ರಗಳಿವೆ. ಈ ನಡುವೆಯೇ ಒಂದಷ್ಟು ಕಥೆಗಳು ಕೂಡಾ ಸರತಿಯಲ್ಲಿವೆ.

ಟಾಪ್ ನ್ಯೂಸ್

1-dfdsf

ದಾವೋಸ್ ನಲ್ಲಿ ಸಿಎಂ: ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

1-sdsa-d

ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು : ಅಜಂ ಖಾನ್

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

ಮೇ 27ಕ್ಕೆ ವೀಲ್ ಚೇರ್ ರೋಮಿಯೋ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮೇ 27ಕ್ಕೆ “ವೀಲ್ ಚೇರ್ ರೋಮಿಯೋ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

ಎಚ್ ಡಿ ಕೋಟೆಯಲ್ಲಿ 77ನೇ ದಿನ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕನ್ನೇರಿ ಸಿನಿಮಾ

ಮೇ 27ಕ್ಕೆ ವೀಲ್ ಚೇರ್ ರೋಮಿಯೋ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮೇ 27ಕ್ಕೆ “ವೀಲ್ ಚೇರ್ ರೋಮಿಯೋ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

akshith shashikumar’s seethayana release on May 27th

ಶಶಿಕುಮಾರ್‌ ಪುತ್ರ ಅಕ್ಷಿತ್ ಚೊಚ್ಚಲ ಚಿತ್ರ ‘ಸೀತಾಯಣ’ ಮೇ 27ಕ್ಕೆ ರಿಲೀಸ್‌

gadang-rakkamma

ವಿಕ್ರಾಂತ್‌ ರೋಣ ಹವಾ ಶುರು; ಇಂದು ಗಡಂಗ್‌ ರಕ್ಕಮ್ಮ… ಹಾಡು ರಿಲೀಸ್‌

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

1-dfdsf

ದಾವೋಸ್ ನಲ್ಲಿ ಸಿಎಂ: ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

1-sdsa-d

ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು : ಅಜಂ ಖಾನ್

11

ನಾಯಕತ್ವ ಗುಣ ಬೆಳೆಸುತ್ತೆ ಕ್ರೀಡೆ: ಸಂಸದ ಕರಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.