ಹೊಸ ಗೆಟಪ್ನಲ್ಲಿ ಧ್ರುವ
Team Udayavani, Sep 29, 2018, 11:33 AM IST
ಧ್ರುವ ಸರ್ಜಾ ಅಭಿನಯದ ಚಿತ್ರಗಳೇಕೆ ತಡವಾಗುತ್ತಿವೆ? ಈ ಪ್ರಶ್ನೆಗೆ ಅವರ ಬಳಿಯೂ ಸ್ಪಷ್ಟ ಉತ್ತರವಿಲ್ಲ. ಆದರೆ, ತಡವಾದರೂ ವಿಶೇಷವಾಗಿಯೇ ತೆರೆಗೆ ಬರುವ ನಿರೀಕ್ಷೆ ಮಾತ್ರ ಇದ್ದೇ ಇದೆ. ಹೌದು, ಧ್ರವ ಸರ್ಜಾ ಅಭಿನಯದ “ಪೊಗರು’ ಸಿನಿಮಾ ಯಾವ ಹಂತದಲ್ಲಿದೆ. ಏನೆಲ್ಲಾ ಆಗುತ್ತಿದೆ ಎಂಬೆಲ್ಲಾ ಒಂದಷ್ಟು ಪ್ರಶ್ನೆಗಳು ಓಡಾಡುತ್ತಿದ್ದವು.
ಧ್ರುವ ಸರ್ಜಾ “ಪೊಗರು’ ಚಿತ್ರಕ್ಕಾಗಿ ಸಾಕಷ್ಟು ಕಸರತ್ತು ನಡೆಸಿದ್ದು ಗೊತ್ತೇ ಇದೆ. ಚಿತ್ರದಲ್ಲಿ ಎರಡು ಶೇಡ್ ಇರುವುದರಿಂದ ಅದಕ್ಕಾಗಿ ತಮ್ಮ ಲುಕ್ ಚೇಂಜ್ ಮಾಡಿಕೊಂಡಿದ್ದೂ ಹೌದು. ಈಗ ಮತ್ತೂಂದು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ, “ಪೊಗರು’ ಚಿತ್ರದ ಪಾತ್ರಕ್ಕಾಗಿ ಗಡ್ಡ, ಕೂದಲು ಬಿಟ್ಟಿದ್ದಾರೆ. ಈ ಗೆಟಪ್ನ ಫೋಟೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಮುಖದ ಮೇಲೆ ಜೇಡವೊಂದು ಬಲೆ ಬಿಟ್ಟುಕೊಂಡಿದೆ. ಈ ಫೋಟೋ ನೋಡಿದರೆ, “ಭರ್ಜರಿ’ ಫೈಟ್ಗಾಗಿ ಮಾಡಿಕೊಂಡ ತಯಾರಿ ಎಂದೆನಿಸುವುದು ನಿಜ. ಅಂದಹಾಗೆ, ಧ್ರುವಸರ್ಜಾ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಸುಮಾರು 15ಕೆಜಿಯಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ