ಧ್ರುವ ಸರ್ಜಾ “ಕಿಸ್’ ಮಾತು
Team Udayavani, Aug 20, 2019, 3:00 AM IST
ಎ.ಪಿ.ಅರ್ಜುನ್ ನಿರ್ಮಾಣ, ನಿರ್ದೇಶನದ “ಕಿಸ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಕೂಡಾ ಹಿಟ್ಲಿಸ್ಟ್ ಸೇರಿದ್ದು, ಚಿತ್ರತಂಡ ಖುಷಿಯಾಗಿದೆ. ಈಗ ಚಿತ್ರತಂಡಕ್ಕೆ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ. ಅದು ಹಿನ್ನೆಲೆ ಧ್ವನಿ ನೀಡುವ ಮೂಲಕ. ಹೌದು, “ಕಿಸ್’ ಚಿತ್ರಕ್ಕೆ ಧ್ರುವ ಸರ್ಜಾ ಹಿನ್ನೆಲೆ ಧ್ವನಿ ನೀಡುವ ಮೂಲಕ ಹೊಸ ನಾಯಕ-ನಾಯಕಿಯ ಸಿನಿಮಾವನ್ನು ಪ್ರೋತ್ಸಾಹಿಸಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ, “ಶೀಲಾ ಸುಶೀಲಾ..’, “ನೀನೆ ಮೊದಲು ನೀನೆ ಕೊನೆ..’ ಮತ್ತು ಪುನೀತ್ ರಾಜ್ ಕುಮಾರ್ ಹಾಡಿರುವ “ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ’ ಹಾಡು ಯಶಸ್ಸು ಕಂಡಿದೆ. ಕಿಸ್ ಸಿನಿಮಾಗೆ “ತುಂಟ ತುಟಿಗಳ ಆಟೋಗ್ರಾಫ್’ ಎನ್ನುವ ಅಡಿ ಬರಹ ಕೂಡಾ ಇದೆ. ಚಿತ್ರದಲ್ಲಿ ವಿರಾಟ್ ಹಾಗೂ ಶ್ರೀಲೀಲಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.