Dhruva Sarja; 10 ವರ್ಷಗಳ ನಂತರ ‘ಬಹದ್ದೂರ್‌’ ಮತ್ತೆ ರಿಲೀಸ್‌


Team Udayavani, Jun 17, 2024, 4:03 PM IST

Dhruva sarja’s bahaddur movie re releasing after 10 years

ಸ್ಟಾರ್‌ ಸಿನಿಮಾಗಳ ರೀ ರಿಲೀಸ್‌ ಮೇಳ ಮುಂದುವರೆದಿದೆ. ಈ ಮೂಲಕ ಸ್ಟಾರ್‌ ನಟರ ಅಭಿಮಾನಿಗಳನ್ನು ತಕ್ಕ ಮಟ್ಟಿಗೆ ಸಮಾಧಾನ ಪಡಿಸುವ ಪ್ರಯತ್ನ ನಡೆಯುತ್ತಿದೆ.ಈಗ ನಟ ಧ್ರುವ ಸರ್ಜಾ ಅವರ ಸಿನಿಮಾವೊಂದು ಮರು ಬಿಡುಗಡೆ ಆಗುತ್ತಿದೆ. ಅದು ಬಹದ್ದೂರ್‌.

ಆರ್‌ ಎಸ್‌ ಪ್ರೊಡಕ್ಷನ್ ಲಾಂಛನದಲ್ಲಿ ಆರ್‌ ಶ್ರೀನಿವಾಸ್‌ ಹಾಗೂ ಕೆ.ಪಿ.ಶ್ರೀಕಾಂತ್‌ ನಿರ್ಮಿಸಿರುವ, ಚೇತನ್‌ ಕುಮಾರ್‌ ನಿರ್ದೇಶನದ ಹಾಗೂ ಆಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ ನಾಯಕ ಹಾಗೂ ರಾಧಿಕಾ ಪಂಡಿತ್‌ ನಾಯಕಿಯಾಗಿ ನಟಿಸಿದ್ದ ಸೂಪರ್‌ ಹಿಟ್‌ “ಬಹದ್ದೂರ್‌” ಚಿತ್ರ 2014ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಹತ್ತು ವರ್ಷಗಳ ನಂತರ ಜೂನ್‌ 21 ರಂದು ಈ ಚಿತ್ರ ಮರು ಬಿಡುಗಡೆಯಾಗುತ್ತಿದೆ.

ಗೋಕುಲ್‌ ಫಿಲಂಸ್‌ ಅವರು ಚಿತ್ರವನ್ನು ರೀ ರಿಲೀಸ್‌ ಮಾಡುತ್ತಿದ್ದಾರೆ. “ಬಹದ್ದೂರ್‌” ಚಿತ್ರಕ್ಕೆ ಪುನೀತ್‌ ರಾಜಕುಮಾರ್‌ ಅವರು ಧ್ವನಿ ನೀಡಿದ್ದರು. ಪುನೀತ್‌ ಅವರು ತಮ್ಮ ಅಭಿನಯದ ಚಿತ್ರವನ್ನು ಹೊರತುಪಡಿಸಿ ಧ್ವನಿ ನೀಡಿದ ಮೊದಲ ಚಿತ್ರ “ಬಹದ್ದೂರ್‌”. ಚಿತ್ರದ ಮೊದಲ ಸನ್ನಿವೇಶಕ್ಕೆ ರವಿಚಂದ್ರನ್‌ ಅವರು ಕ್ಲಾಪ್‌ ಮಾಡಿ ಹಾರೈಸಿದ್ದರು. ಪುನೀತ್‌ ರಾಜಕುಮಾರ್‌ ಅವರೆ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದ್ದರು. ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಹಿಟ್‌ ಲಿಸ್ಟ್ ಸೇರಿದ್ದವು.

ಧ್ರುವ ಸರ್ಜಾ ಅಭಿನಯದ 2ನೇ ಚಿತ್ರವಿದು. ಈಗ 10 ವರ್ಷಗಳ ಮೇಲೆ ಈ ಚಿತ್ರ ಮರು ಬಿಡುಗಡೆಯಾಗು ತ್ತಿರುವುದು ಸಂತೋಷವಾಗಿದೆ ಎನ್ನುತ್ತಾರೆ ನಿರ್ದೇಶಕ ಚೇತನ್‌ ಕುಮಾರ್‌.

ಟಾಪ್ ನ್ಯೂಸ್

1-aaaa

Shiruru hill collapse; ಕಡಲ ತೀರದಲ್ಲಿ ಅರ್ಧ ಮೃತದೇಹ ಪತ್ತೆ!;ಸಂಖ್ಯೆ 7ಕ್ಕೇರಿಕೆ

Team India

Sri Lanka ಪ್ರವಾಸ; ಭಾರತ ತಂಡ ಪ್ರಕಟ: ಹಾರ್ದಿಕ್ ಪಾಂಡ್ಯಗೆ ಸಿಗದ T20 ನಾಯಕತ್ವ

1-madi-a

Hill Collapse ಭೀತಿ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

BYR-joga-Visit

Jog Falls: ಜೋಗ ಜಲಪಾತಕ್ಕೆ ವಿಶ್ವದರ್ಜೆಯ ಸ್ಪರ್ಶ: ಸಂಸದ ಬಿ.ವೈ.ರಾಘವೇಂದ್ರ

Byndoor  ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

Byndoor ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

ICC suffered a loss of Rs 167 crore from T20 World Cup 2024

T20 World Cup 2024 ಆಯೋಜನೆಯಿಂದ 167 ಕೋಟಿ ರೂ ನಷ್ಟ ಅನುಭವಿಸಿದ ಐಸಿಸಿ; ಆಗಿದ್ದೇನು?

Untitled-123

Kannappa: ಇದೇ ವರ್ಷ ತೆರೆಗೆ ಬರಲಿದೆ ವಿಷ್ಣು ಮಂಚು ಪ್ಯಾನ್‌ ಇಂಡಿಯಾ ʼಕಣ್ಣಪ್ಪʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gowri movie songs released

Gowri ಹಾಡು ಹಬ್ಬ; ಸಮರ್ಜಿತ್‌, ಸಾನ್ಯಾ ಜೋಡಿ

baila baila song of hiranya

Rajavardan; ಹಿರಣ್ಯದಲ್ಲಿ ದಿವ್ಯಾ ಸುರೇಶ್‌ ಹಾಟ್‌ ಸ್ಟೆಪ್‌

roopantara movie

Roopanthara; ಬದುಕು ಬವಣೆಗಳ ಸುತ್ತ ರೂಪಾಂತರ

Renukaswamy Case: ನಟ ದರ್ಶನ್‌ ‍& ಗ್ಯಾಂಗ್‌ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ

Renukaswamy Case: ನಟ ದರ್ಶನ್‌ ‍& ಗ್ಯಾಂಗ್‌ ನ್ಯಾಯಾಂಗ ಬಂಧನದ ಅವಧಿ ಮತ್ತೆ ವಿಸ್ತರಣೆ

Chaithra J Achar

Chaithra J Achar; ಸಿದ್ಧಾರ್ಥ್ ಗೆ ಜೋಡಿಯಾದ ಟೋಬಿಯ ಬೇಬಿ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-aaaa

Shiruru hill collapse; ಕಡಲ ತೀರದಲ್ಲಿ ಅರ್ಧ ಮೃತದೇಹ ಪತ್ತೆ!;ಸಂಖ್ಯೆ 7ಕ್ಕೇರಿಕೆ

Team India

Sri Lanka ಪ್ರವಾಸ; ಭಾರತ ತಂಡ ಪ್ರಕಟ: ಹಾರ್ದಿಕ್ ಪಾಂಡ್ಯಗೆ ಸಿಗದ T20 ನಾಯಕತ್ವ

1-madi-a

Hill Collapse ಭೀತಿ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

Manipal ಬಹುಮುಖಿ ವೈದ್ಯ ವಿದ್ವಾಂಸ ಡಾ| ಎಂ.ಎಸ್‌.ವಲಿಯತ್ತಾನ್‌ ಇನ್ನಿಲ್ಲ

Updated ಬಹುಮುಖಿ ವೈದ್ಯ ವಿದ್ವಾಂಸ ಡಾ| ಎಂ.ಎಸ್‌.ವಲಿಯತ್ತಾನ್‌ ಇನ್ನಿಲ್ಲ

BYR-joga-Visit

Jog Falls: ಜೋಗ ಜಲಪಾತಕ್ಕೆ ವಿಶ್ವದರ್ಜೆಯ ಸ್ಪರ್ಶ: ಸಂಸದ ಬಿ.ವೈ.ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.