ಫೆ.19 ಪೊಗರು ರಿಲೀಸ್: ಮೂರೂವರೆ ವರ್ಷಗಳ ಬಳಿಕ ಧ್ರುವ ಸರ್ಜಾ ಸಿನಿಮಾ
Team Udayavani, Jan 19, 2021, 9:47 AM IST
ಇದೀಗ ಎಲ್ಲವೂ ಪಕ್ಕಾ ಆಗಿದೆ. ಜೊತೆಗೆ ಸ್ಪಷ್ಟವಾಗಿದೆ. ಅದು “ಪೊಗರು’ ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗುವ ಮೂಲಕ. ಹೌದು, ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರ ಫೆ.19ಕ್ಕೆ ತೆರೆಕಾಣುತ್ತಿದೆ. ಸ್ವತಃ ಧ್ರುವ ಸರ್ಜಾ ಈ ವಿಚಾರವನ್ನು ಘೋಷಿಸಿದ್ದಾರೆ. ಈ ಮೂಲಕ ಇಷ್ಟು ದಿನಗಳ ಅಂತೆ-ಕಂತೆಗಳಿಗೆ ತೆರೆಬಿದ್ದಿದೆ.
ಬಹುತೇಕ ಸ್ಟಾರ್ ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರೂ, “ಪೊಗರು’ ಮಾತ್ರ ಆ ಬಗ್ಗೆ ಯಾವುದೇ ಅಪ್ ಡೇಟ್ ನೀಡಿರಲಿಲ್ಲ. ಆರಂಭದಲ್ಲಿ ಜನವರಿ ಕೊನೆಯ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂಬ ಸುದ್ದಿ ಕೇಳಿ ಬಂದಿತ್ತಾದರೂ, ಆ ನಂತರ ಅದು ಫೆಬ್ರವರಿ ಮೊದಲ ವಾರವಂತೆ ಎಂದು ಕೇಳಿಬಂತು. ಇದರಿಂದ ಬೇರೆ ಚಿತ್ರತಂಡಗಳಿಗೆ ತಮ್ಮ ಸಿನಿಮಾ ಬಿಡುಗಡೆ ಪ್ಲ್ರಾನ್ ಮಾಡಿಕೊಳ್ಳುವುದು ಕಷ್ಟವಾಗಿತ್ತು.
ಏಕೆಂದರೆ ಸದ್ಯ “ಪೊಗರು’ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸ್ಟಾರ್ ಸಿನಿಮಾ. ಅದಕ್ಕಿಂತ ಹೆಚ್ಚಾಗಿ ಹೆಚ್ಚು ಮಾಸ್ ಫ್ಯಾನ್ಸ್ ಫಾಲೋವರ್ ಹೊಂದಿರುವ ಧ್ರುವ ಬರೋಬ್ಬರಿ ಮೂರೂವರೆ ವರ್ಷಗಳ ಬಳಿಕ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ.
ಇದನ್ನೂ ಓದಿ:ಹನಿಮೂನ್ ಇನ್ ಬ್ಯಾಂಕಾಕ್ ಚಿತ್ರದ ಸ್ಟಿಲ್ಸ್
ಧ್ರುವ ಸರ್ಜಾ ಅಭಿನಯದ “ಭರ್ಜರಿ’ ಚಿತ್ರ ತೆರೆಕಂಡಿರೋದು 2017 ಸೆಪ್ಟೆಂಬರ್‌ನಲ್ಲಿ. ಆ ನಂತರ ಅವರು ನಾಯಕರಾಗಿರುವ ಯಾವುದೇ ಚಿತ್ರ ತೆರೆಗೆ ಬಂದಿಲ್ಲ. ಹಾಗಾಗಿ, “ಪೊಗರು’ ಮೇಲೆ ನಿರೀಕ್ಷೆ ಹೆಚ್ಚೇ ಇದೆ. ಜೊತೆಗೆ ಚಿತ್ರದ “ಖರಾಬು’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ.
ಈ ಎಲ್ಲಾ ಕಾರಣಗಳಿಂದ ದೊಡ್ಡ ಸಿನಿಮಾ ಎದುರು ಬಂದು ರಿಸ್ಕ್ ಹಾಕಿಕೊಳ್ಳೋದು ಬೇಡ ಎಂಬ ನಿರ್ಧಾರಕ್ಕೆ ಇತರ ಚಿತ್ರತಂಡಗಳು “ಪೊಗರು’ ರಿಲೀಸ್ ಡೇಟ್‌ಗೆ ಕಾಯುತ್ತಿದ್ದವು. ಈಗ ಎಲ್ಲವೂ ಪಕ್ಕಾ ಆಗಿದೆ. ಇಡೀ ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಸಿನಿಮಾಭಿಮಾನಿಗಳಿಗೆ ಸ್ಟಾರ್ ಸಿನಿಮಾಗಳ ಕುರಿತಾಗಿ ಒಂದು ಸ್ಪಷ್ಟತೆ ಸಿಕ್ಕಿದೆ. ಈಗ ಇತರರು ಕೂಡಾ ತಮ್ಮ ಸಿನಿಮಾ ಬಿಡುಗಡೆ ತಯಾರಿ ಮಾಡಿಕೊಳ್ಳಲು ಸುಲಭವಾಗಿದೆ.
ಅಂದಹಾಗೆ, “ಪೊಗರು’ ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್.ಶೆಟ್ಟಿ
30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ಹೊಸ ಸೇರ್ಪಡೆ
ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣ, ನಿರಂತರ ಧನಾಗಮನ: ಹೇಗಿದೆ ಇಂದಿನ ಗ್ರಹಬಲ ?
ಸಿಇಟಿಗೆ ಪಠ್ಯಕಡಿತ, ನೀಟ್ಗೇಕಿಲ್ಲ? ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಆತಂಕ
ದಾವೂದ್ ಆಸ್ತಿ ಜಪ್ತಿಗೆ ಆದೇಶ : ಎಫ್ಎಟಿಎಫ್ ಕಪ್ಪುಪಟ್ಟಿಗೆ ತಪ್ಪಿಸಿಕೊಳ್ಳಲು ಪಾಕ್ ಉಪಾಯ
ಸಂಗೀತ ಇಲ್ಲದ ಸಿನೆಮಾ ಊಹಿಸಲಸಾಧ್ಯ
ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ಗೆ 1 ವರ್ಷ ಜೈಲು ಶಿಕ್ಷೆ