ಗೋಲ್ಡ್‌ ಸ್ಟೋರಿಗೆ ಡಿಂಪಲ್‌ ಸ್ಟಾರ್‌ ಫಿದಾ

Team Udayavani, Jan 18, 2020, 7:01 AM IST

ಡಿಂಪಲ್‌ ಹುಡುಗ ದಿಗಂತ್‌ ಮತ್ತೆ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಮದುವೆ ಬಳಿಕ ಅವರೀಗ ಹೊಸ ಬಗೆಯ ಕಥೆಗಳ ಆಯ್ಕೆಯಲ್ಲಿದ್ದಾರೆ. “ಹುಟ್ಟು ಹಬ್ಬದ ಶುಭಾಶಯಗಳು’ ಸಿನಿಮಾ ಒಪ್ಪಿಕೊಂಡ ಅವರು, “ಗಾಳಿಪಟ 2′ ಚಿತ್ರ ಒಪ್ಪಿಕೊಂಡಿದ್ದು ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಈ ಎರಡು ಸಿನಿಮಾಗಳ ಬಳಿಕ ದಿಗಂತ್‌ ಹೊಸದೊಂದು ಚಿತ್ರ ಒಪ್ಪಿಕೊಂಡಿ ದ್ದಾರೆ. ಹೌದು, ದಿಗಂತ್‌ ಇನ್ನೂ ಹೆಸರಿಡದ ಕಾಮಿಡಿ ಥ್ರಿಲ್ಲರ್‌ ಜಾನರ್‌ ಸಿನಿಮಾ ಒಪ್ಪಿಕೊಂಡಿದ್ದಾರೆ.

“ಗಾಳಿಪಟ 2′ ಚಿತ್ರದ ಬಳಿಕ ದಿಗಂತ್‌ ಸಾಕಷ್ಟು ಕಥೆ ಕೇಳಿದ್ದರೂ, ಯಾವುದಕ್ಕೂ ಗ್ರೀನ್‌ ಸಿಗ್ನಲ್‌ ಕೊಟ್ಟಿರಲಿಲ್ಲ. ಈಗಂತೂ ಕಥೆ ಆಯ್ಕೆಯಲ್ಲಿ ತುಂಬ ಚ್ಯೂಸಿಯಾಗಿರುವ ಅವರು ಈ ಕಾಮಿಡಿ ಥ್ರಿಲ್ಲರ್‌ ಕಥೆ ಕೇಳಿ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಅಂದಹಾಗೆ, ದಿಗಂತ್‌ ಅಭಿನಯದ ಚಿತ್ರಕ್ಕೆ ಕುಂದಾಪುರ ಮೂಲದ ರಾಘವೇಂದ್ರ ಎಂ.ನಾಯಕ್‌ ನಿರ್ದೇಶಕರು. ಇವರಿಗೆ ಇದು ಮೊದಲ ಚಿತ್ರ.

ಇನ್ನು, ಈ ಚಿತ್ರವನ್ನು ಆರ್‌.ವಿ. ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ರಘುವರ್ಧನ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಈಗ ದಿಗಂತ್‌ ಹೀರೋ ಆಗಿದ್ದು, ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಹೇಳುವ ರಾಘವೇಂದ್ರ ಎಂ.ನಾಯಕ್‌, “ಇದೊಂದು ಕಾಮಿಡಿ ಥ್ರಿಲ್ಲರ್‌ ಜಾನರ್‌ ಹೊಂದಿರುವ ಚಿತ್ರ. ಇಲ್ಲೊಂದು ವಿಶೇಷತೆ ಇದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ಹೀರೋ ಜೊತೆ ಯಲ್ಲಿ ಮೂರು ಪ್ರಮುಖ ಪಾತ್ರಗಳು ಸಾಗುತ್ತವೆ.

ಇಡೀ ಚಿತ್ರದ ಕಥೆ ಆ ನಾಲ್ಕು ಪಾತ್ರಗಳ ಸುತ್ತವೇ ನಡೆಯಲಿದೆ. ಇನ್ನು, ಹಾಸ್ಯ ದೊಂದಿಗೆ ಗಂಭೀರ ವಿಷಯ ಹೇಳುತ್ತಲೇ ಬೊಗಸೆಯಷ್ಟು ಪ್ರೀತಿ, ಎಮೋಷನಲ್‌ ಎಲ್ಲವನ್ನೂ ಒಳಗೊಂಡಿದೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ಹಿನ್ನೆಲೆ ಸಂಗೀತ. ಅದು ಚಿತ್ರದ ಹೈಲೈಟ್‌. ಇನ್ನು ಛಾಯಾಗ್ರಹಣದಲ್ಲಿ ಹೊಸತನ ಇರಲಿದೆ. ದಿಗಂತ್‌ ಅವರು ಹಿಂದೆಂದೂ ಮಾಡದ ಪಾತ್ರವಿಲ್ಲಿ ಮಾಡುತ್ತಿದ್ದು, ಹೊಸ ಶೇಡ್‌ನ‌ಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಕಥೆಯೇ ಇಲ್ಲಿ ಎಲ್ಲವೂ ಆಗಿರುವುದರಿಂದ, ಸ್ಪೆಷಲ್‌ ದಿಗಂತ್‌ ಅವರನ್ನಿಲ್ಲಿ ಕಾಣಬಹುದು’ ಎನ್ನುತ್ತಾರೆ ನಿರ್ದೇಶಕರು. ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಇತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ. ವೀರ್‌ಸಮರ್ಥ್ ಸಂಗೀತವಿದ್ದು, ಚಿತ್ರದಲ್ಲಿ ಎರಡು ಹಾಡುಗಳಿವೆ. ಕೆ.ಎಸ್‌. ಚಂದ್ರಶೇಖರ್‌ ಛಾಯಾಗ್ರಹಣವಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ