ವಿಜಯ್‌ ಸಲಗ ನಿರ್ದೇಶಕ ಬದಲು

Team Udayavani, Jan 21, 2019, 6:01 AM IST

ದುನಿಯಾ ವಿಜಯ್‌ ಕಳೆದ ಡಿಸೆಂಬರ್‌ನಲ್ಲಿ ರಾಘ ಶಿವಮೊಗ್ಗ ನಿರ್ದೇಶನದಲ್ಲಿ “ಸಲಗ’ ಚಿತ್ರವನ್ನು ಮಾಡುವುದಾಗಿ ಘೋಷಿಸಿದ್ದರು. ಆದರೆ ಈಗ ಈ ಚಿತ್ರದ ಸಾರಥ್ಯವನ್ನು ಬೇರೊಬ್ಬರು ವಹಿಸಿಕೊಳ್ಳುತ್ತಿದ್ದಾರೆ. ಹೌದು, “ಸಲಗ’ ಚಿತ್ರದ ನಿರ್ದೇಶನದಿಂದ ರಾಘು ಶಿವಮೊಗ್ಗ ಹೊರಬಂದಿದ್ದಾರೆ. ಈ ಹಿಂದೆ “ಸಲಗ’ ಎಂಬ ಟೈಟಲ್‌ ಇಟ್ಟುಕೊಂಡು ರಾಘು ಔಟ್‌ ಅ್ಯಂಡ್‌ ಔಟ್‌ ಮಾಸ್‌ ಕಥೆಯನ್ನು ರೆಡಿ ಮಾಡುತ್ತಿದ್ದರು. ಇದೇ ವೇಳೆ ದುನಿಯಾ ವಿಜಿ ಬಳಿ ಮತ್ತೂಂದು ಕಥೆ ಚರ್ಚೆಗೆ ಬಂತು.

ಬಳಿಕ ಆ ಕಥೆಯನ್ನು ರಾಘು ಶಿವಮೊಗ್ಗ ಬಳಿ ಹೇಳಿದಾಗ, “ಈ ಕಥೆ “ಸಲಗ’ ಟೈಟಲ್‌ಗೆ ಹೊಂದುತ್ತದೆ. ಹಾಗಾಗಿ “ಸಲಗ’ ಟೈಟಲ್‌ನಲ್ಲಿ ನೀವು ಇದೇ ಕಥೆಯನ್ನು ಸಿನಿಮಾ ಮಾಡಿ. ನಾವಿಬ್ಬರೂ ಈ ಹಿಂದಿನ ಕಮಿಟ್‌ಮೆಂಟ್‌ನಂತೆ “ಕುಸ್ತಿ’ ಸಿನಿಮಾವನ್ನೇ ಮಾಡೋಣ’ ಎಂದರಂತೆ. ಹಾಗಾಗಿ, “ಸಲಗ’ದಿಂದ ರಾಘು ಹೊರಬಂದಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ವಿಜಿ, “ನನಗೆ ರಾಘು ಕಮಿಟ್ಮೆಂಟ್‌ ಇಷ್ಟ ಆಯ್ತು.

ಒಬ್ಬ ನಿರ್ದೇಶಕ ಈ ರೀತಿಯೂ ಯೋಚಿಸಬಹುದಾ ಎಂದುಕೊಂಡೆ. ಇದು ಅವರಲ್ಲಿನ ವೃತ್ತಿಪರತೆಯನ್ನು ತೋರಿಸುತ್ತದೆ. ಅವರ ಈ ನಿರ್ಧಾರ ನನಗೆ ಒಳ್ಳೆ ಕಥೆಗಾರ ಮತ್ತು ನಿಸ್ವಾರ್ಥಿ ನಿರ್ದೇಶಕನನ್ನು ತೋರಿಸಿಕೊಟ್ಟಿತು. ಹಾಗಾಗಿ ಈ ಬಾರಿ ಬೇರೆ ಮಾವುತನೊಂದಿಗೆ ಸಲಗನಾಗಿ ನಿಮ್ಮ ಮುಂದೆ ಬರಲಿದ್ದೇನೆ. ಆ ಮಾವುತ ಮತ್ತು ಆ ಸಿನಿಮಾದ ಇತರ ವಿವರವನ್ನು ಮುಂದೆ ತಿಳಿಸುತ್ತೇನೆ. ರಾಘು ಶಿವಮೊಗ್ಗ ಮತ್ತು ನಾನು ಮುಂದಿನ ದಿನಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ.

ಸದ್ಯ “ಸಲಗ’ ಮತ್ತು “ಕುಸ್ತಿ’ ಸಿನಿಮಾ ನಡೆಯುತ್ತಿದೆ. ಈ ಎರಡೂ ಸಿನಿಮಾಗಳು ಪೂರ್ಣಗೊಂಡ ನಂತರ ಮುಂದಿನ ಸಿನಿಮಾದ ಬಗ್ಗೆ ಯೋಚಿಸುತ್ತೇನೆ. ಅಭಿಮಾನಿಗಳು ನನ್ನಿಂದ ಏನು ನಿರೀಕ್ಷಿಸುತ್ತಾರೋ ಅಂಥ ಸಿನಿಮಾಗಳನ್ನು ಮಾಡುತ್ತೇನೆ. ಅವರನ್ನು ನಿರಾಸೆಗೊಳಿಸುವುದಿಲ್ಲ’ ಎಂದರು. ಇನ್ನು ವಿಜಯ್‌ ಭಾನುವಾರ (ಫೆ. 19) 45ನೇ ವಸಂತಕ್ಕೆ ಕಾಲಿಟ್ಟರು. ಇನ್ನು ವಿಜಯ್‌ ಬರ್ತ್‌ಡೇ ಪ್ರಯುಕ್ತ ಬೆಳ್ಳಗಿನಿಂದಲೇ ಅವರ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಅಭಿಮಾನಿಗಳು ತಂದಿದ್ದ ಕೇಕ್‌ ಕತ್ತರಿಸಿ ವಿಜಯ್‌ ಸಂಭ್ರಮಿಸಿದರು.

ವಿಜಯ್‌ ಅವರಿಗೆ  ಬೇರೊಂದು ಕಥೆ ಬಂತು. ಅದು ಸಲಗ ಟೈಟಲ್‌ಗೆ ಚೆನ್ನಾಗಿ ಹೊಂದಿಕೆಯಾಗುತ್ತಿತ್ತು. ಆ ಕಾರಣದಿಂದ ಆ ಕಥೆಯನ್ನು “ಸಲಗ’ ಟೈಟಲ್‌ನಡಿ ಮಾಡುತ್ತಿದ್ದಾರೆ. ನಾನು “ಸಲಗ’ ಟೈಟಲ್‌ನಡಿ ಮಾಡಿಕೊಂಡಿರುವ ಕಥೆಯನ್ನು ಬೇರೆ ಹೀರೋಗೆ ಮಾಡುತ್ತೇನೆ. ವಿಜಯ್‌ ಜೊತೆ ಮುಂದೆ “ಕುಸ್ತಿ’ ಸಿನಿಮಾ ಮಾಡುತ್ತೇನೆ.
-ರಾಘು ಶಿವಮೊಗ್ಗ, ನಿರ್ದೇಶಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ