ಚಿರು ದಂಪತಿಯಿಂದ ದರ್ಶನ್‌ಗೆ ನಾಯಿಮರಿ ಗಿಫ್ಟ್

Team Udayavani, Jul 15, 2019, 3:06 AM IST

ದರ್ಶನ್‌ ಅವರ ಪ್ರಾಣಿ ಪ್ರೀತಿ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಅದೇ ಕಾರಣದಿಂದ ಅವರ ಫಾರ್ಮ್ಹೌಸ್‌ನಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿಗಳಿವೆ. ಅದೇ ಕಾರಣದಿಂದ ಕೆಲವರು ದರ್ಶನ್‌ಗೆ ಪ್ರೀತಿಯಿಂದ ಪ್ರಾಣಿ-ಪಕ್ಷಿಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಈ ಬಾರಿ ದರ್ಶನ್‌ ಅವರಿಗೆ ಉಡುಗೊರೆಯಾಗಿ ಮುದ್ದಾಗಿರುವ ನಾಯಿ ಮರಿಯೊಂದು ಬಂದಿದೆ.

ಎಲ್ಲಾ ಓಕೆ, ದರ್ಶನ್‌ ಅವರಿಗೆ ನಾಯಿ ಮರಿಯನ್ನ ಗಿಫ್ಟ್ ಆಗಿ ಕೊಟ್ಟವರು ಯಾರು ಎಂದರೆ ಚಿರಂಜೀವಿ ಸರ್ಜಾ ದಂಪತಿ. ಹೌದು, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ದಂಪತಿ ದರ್ಶನ್‌ ಅವರಿಗೆ ನಾಯಿ ಮರಿಯನ್ನು ಉಡುಗೊರೆಯಾಗಿ ನೀಡಿ, ಕೃತಜ್ಞತೆ ಸಲ್ಲಿಸಿದ್ದಾರೆ. ಇದಕ್ಕೆ ಕಾರಣ, ದರ್ಶನ್‌ ಚಿರು ಸಿನಿಮಾಳಿಗೆ ನೀಡುತ್ತಾ ಬಂದಿರುವ ಪ್ರೋತ್ಸಾಹ ಬೆಂಬಲ.

ಹೌದು, ಚಿರಂಜೀವಿ ಸರ್ಜಾ ನಾಯಕರಾಗಿರುವ “ಸಿಂಗ’ ಚಿತ್ರದ “ಬ್ಯೂಟಿಫ‌ುಲ್‌ ಹುಡುಗಿ’ ಹಾಡನ್ನು ಇತ್ತೀಚೆಗೆ ದರ್ಶನ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಕೇವಲ ಇದು ಒಂದೇ ಅಲ್ಲ, ಈ ಹಿಂದೆ ಮೇಘನಾ ರಾಜ್‌ ನಾಯಕಿಯಾಗಿರುವ “ಇರುವುದೆಲ್ಲವ ಬಿಟ್ಟು’ ಚಿತ್ರಕ್ಕೂ ದರ್ಶನ್‌ ಸಾಥ್‌ ಕೊಟ್ಟಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಚಿರು ದಂಪತಿ ದರ್ಶನ್‌ ಅವರಿಗೆ ನಾಯಿಮರಿಯೊಂದನ್ನು ಪ್ರೀತಿಯಿಂದ ನೀಡಿದ್ದಾರೆ.

ಈ ಬಗ್ಗೆ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ಮೇಘನಾ, “ದರ್ಶನ್‌ ಸರ್‌ ನಮ್ಮ ಕುಟುಂಬ ಸದಸ್ಯರಿದ್ದಂತೆ. ಅವರಿಗೆ ನಮ್ಮ ಕಡೆಯಿಂದ ಈ ಪ್ರೀತಿಯ ಉಡುಗೊರೆ’ ಎಂದಿದ್ದಾರೆ. ಅಂದಹಾಗೆ, “ಸಿಂಗ’ ಚಿತ್ರದಲ್ಲಿ ಮೇಘನಾ ರಾಜ್‌ ಕೂಡಾ ಒಂದು ಭಾಗ. ಅದು ಸಿನಿಮಾದ ಹಾಡೊಂದಕ್ಕೆ ಧ್ವನಿಯಾಗುವ ಮೂಲಕ. ಈ ಚಿತ್ರ ಜುಲೈ 19ರಂದು ತೆರೆಕಾಣುತ್ತಿದೆ. ಉದಯ್‌ ಮೆಹ್ತಾ ಈ ಸಿನಿಮಾದ ನಿರ್ಮಾಪಕರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪುನೀತ್‌ರಾಜಕುಮಾರ್‌ ಅಭಿನಯದ "ಜೇಮ್ಸ್‌' ಶುರುವಾಗಿದ್ದು ಗೊತ್ತೇ ಇದೆ. ಸದ್ಯಕ್ಕೆ ಒಂದೆರೆಡು ಮಾತಿನ ದೃಶ್ಯ ಹಾಗು ಫೈಟ್‌ ಬಿಟ್‌ ಚಿತ್ರೀಕರಣಗೊಂಡಿದ್ದು,...

  • ನಟ ಧನಂಜಯ್‌ ಅಭಿನಯದ "ಪಾಪ್‌ಕಾರ್ನ್ ಮಂಕಿ ಟೈಗರ್‌' ಚಿತ್ರ ಮೂರು ದಿನಗಳ ಹಿಂದಷ್ಟೇ ತೆರೆಕಂಡಿದೆ. "ಟಗರು' ಚಿತ್ರದ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ ನಿರ್ದೇಶಕ "ದುನಿಯಾ'...

  • ಕನ್ನಡದಲ್ಲಿ ಹೊಸಬರ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ "ಒಂದು ಗಂಟೆಯ ಕಥೆ' ಕೂಡ ಸೇರಿದೆ. ಈಗಾಗಲೇ ಪೋಸ್ಟರ್‌ ಹಾಗು ಟ್ರೇಲರ್‌ ಬಿಡುಗಡೆಯಾಗಿದ್ದು,...

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

ಹೊಸ ಸೇರ್ಪಡೆ