ಬೆಂಗಳೂರು ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಡಜನ್‌ ಕನ್ನಡ ಸಿನಿಮಾ

Team Udayavani, Jan 15, 2017, 11:59 AM IST

ಫೆಬ್ರವರಿ 2 ರಿಂದ 9 ರವರೆಗೆ ನಡೆಯಲಿರುವ ಒಂಭತ್ತನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿ ಕನ್ನಡದ ಹನ್ನೆರೆಡು ಸಿನಿಮಾಗಳು ಆಯ್ಕೆಯಾಗಿವೆ. ಕನ್ನಡ ಸಿನಿಮಾಗಳ ಸ್ಪರ್ಧೆಯಲ್ಲಿ ಹೊಸಬರ ಹಾಗೂ ಪ್ರಶಸ್ತಿ ವಿಜೇತ ನಿರ್ದೇಶಕರ ಸಿನಿಮಾಗಳು ಪಾಲ್ಗೊಳ್ಳುತ್ತಿವೆ. ಈ ಹನ್ನೆರೆಡು ಸಿನಿಮಾಗಳನ್ನು ವೀಕ್ಷಿಸಲಿರುವ ಜ್ಯೂರಿ ಅಂತಿಮವಾಗಿ ಒಂದು ಚಿತ್ರವನ್ನು ಆಯ್ಕೆ ಮಾಡಲಿದೆ. ಜ್ಯೂರಿ ಆಯ್ಕೆ ಮಾಡಿದ ಚಿತ್ರವನ್ನು ವಿಜೇತ ಚಿತ್ರ ಎಂದು ಘೋಷಿಸಲಾಗುತ್ತದೆ.

ಅಂದಹಾಗೆ, ಫೆಬ್ರವರಿಯಲ್ಲಿ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಿರ್ದೇಶಕ ಆರ್‌.ಮಹಂತೇಶ್‌ ನಿರ್ದೇಶನದ “6 “3′ ಎಂಬ ಚಿತ್ರ ಪ್ರದರ್ಶನವಾಗಲಿದೆ. ದಯಾಳ್‌ ಪದ್ಮನಾಭನ್‌ ನಿರ್ದೇಶನದ ಹಾಗೂ ನವೀನ್‌ ಕೃಷ್ಣ ಅಭಿನಯದ “ಆ್ಯಕ್ಟರ್‌’, ಅಮರದೇವ ನಿರ್ದೇಶಿಸಿರುವ “ಅಲೆಮಾರಿಯ ಆತ್ಮಕಥೆ’, ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಬೆಕ್ಕು’, ಸಬಾಸ್ಟಿನ್‌ ಡೇವಿಡ್‌ ನಿರ್ದೇಶಿಸಿರುವ “ಧ್ವನಿ’, ಕನ್ನಡ ಚಿತ್ರರಂಗದಲ್ಲಿ ಹೊಸತನದ ಚಿತ್ರ ಎನಿಸಿಕೊಂಡ ಹೇಮಂತ್‌ ರಾವ್‌ ನಿರ್ದೇಶನದ ರಕ್ಷಿತ್‌ಶೆಟ್ಟಿ ಹಾಗೂ ಅನಂತ್‌ನಾಗ್‌ ಅಭಿನಯದ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ಅರವಿಂದ್‌ ಶಾಸಿŒ ನಿರ್ದೇಶನದ “ಕಹಿ’, ಸಾಲೋಮನ್‌ ಕೆ.ಜಾರ್ಜ್‌ ನಿರ್ದೇಶಿಸಿರುವ “ಕಂದ’, ಸುಮನಾ ಕಿತ್ತೂರು ನಿರ್ದೇಶನದ “ಕಿರಗೂರಿನ ಗಯ್ನಾಳಿಗಳು’, ರಘು ನಿರ್ದೇಶನದ “ಪಲ್ಲಟ’, ಹೊಸ ತಂಡ ಕಟ್ಟಿಕೊಂಡು ಹೊಸತನ ಇಟ್ಟುಕೊಂಡು ಮೂಡಿಬಂದ ಡಿ. ಸತ್ಯಪ್ರಕಾಶ್‌ ನಿರ್ದೇಶನದ “ರಾಮಾ ರಾಮಾ ರೇ’ ಹಾಗೂ ಬಿ.ಸುರೇಶ ನಿರ್ದೇಶನ “ಉಪ್ಪಿನ ಕಾಗದ’ ಚಿತ್ರಗಳು ಚಿತ್ರೋತ್ಸವದಲ್ಲಿ ಆಯ್ಕೆಯಾಗಿದ್ದು, ಪ್ರದರ್ಶನ ಕಾಣಲಿವೆ.

ಜ್ಯೂರಿ ಈ ಎಲ್ಲಾ ಚಿತ್ರಗಳನ್ನು ವೀಕ್ಷಿಸಿ, ಒಂದು ಚಿತ್ರವನ್ನು ವಿಜೇತ ಚಿತ್ರವೆಂದು ಘೋಷಿಸಲಿದ್ದಾರೆ. ಯಾವ ಚಿತ್ರ ಸ್ಪರ್ಧೆಯಲ್ಲಿ ಗೆಲುವು ಪಡೆದುಕೊಳ್ಳುತ್ತೆ ಎಂಬುದೇ ಎಲ್ಲರಲ್ಲಿರುವ ಪ್ರಶ್ನೆ. ಆ ಪ್ರಶ್ನೆಗೆ ಉತ್ತರ ಚಿತ್ರೋತ್ಸವದಲ್ಲೇ ಗೊತ್ತಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಕ್ಕಳು ಹಾಗೂ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸಿಕೊಡಲು ಸರಕಾರ ಮುಂದಾಗಬೇಕು...

  • ಅಮೀನಗಡ: ಗ್ರಾಮೀಣ ಪ್ರದೇಶದಲ್ಲಿರುವ ಸುಮಾರು 5 ಉಪಕೇಂದ್ರಗಳ ಸಾರ್ವಜನಿಕರಿಗೆ ಉಪಯುಕ್ತವಾದ ಆರೋಗ್ಯ ಸೇವೆ ಒದಗಿಸುವ ಗುಡೂರ(ಎಸ್‌.ಸಿ) ಗ್ರಾಮದ ಸರಕಾರಿ ಪ್ರಾಥಮಿಕ...

  • ಬೀದರ: ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ಅವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ...

  • ಕೊರಟಗೆರೆ: ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಸಂಕಲ್ಪದಂತೆ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಯಂತಿ ಅಂಗವಾಗಿ ಆಯೋಜಿಸಿರುವ ರಥಯಾತ್ರೆಗೆ ಪಟ್ಟಣದಲ್ಲಿ ಅದ್ಧೂರಿ...

  • ತೀರ್ಥಹಳ್ಳಿ: ತಾಲೂಕಿನಲ್ಲಿ ಕೆರೆಗಳ ಸರ್ವೇ ಕಾರ್ಯ ಸಮಾಧಾನಕರ ಆಗಿಲ್ಲ. 305 ಕೆರೆಗಳ ಗಡಿ ಗುರುತಿಸುವ ಕಾರ್ಯ ವಿಳಂಬವಾಗಿದೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಡಿಡಿಎಲ್‌ಆರ್‌...