ಟಾಲಿವುಡ್‌ ಕಡೆಗೆ ಸಲಗ ಸಂಚಾರ: ಬಾಲಕೃಷ್ಣ ಚಿತ್ರದಲ್ಲಿ ವಿಜಯ್ ನಟನೆ

Team Udayavani, Jan 4, 2022, 11:28 AM IST

ಟಾಲಿವುಡ್‌ ಕಡೆಗೆ ಸಲಗ ಸಂಚಾರ: ಬಾಲಕೃಷ್ಣ ಚಿತ್ರದಲ್ಲಿ ವಿಜಯ್ ನಟನೆ

ಕನ್ನಡ ಚಿತ್ರರಂಗದ ಅನೇಕ ನಟರು ಆಗಾಗ್ಗೆ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಟಾಲಿವುಡ್‌ನ‌ಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಲವು ನಟರು ಈಗಾಗಲೇ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುವಲ್ಲೂ ಯಶಸ್ವಿಯಾಗಿದ್ದಾರೆ. ಈಗ ಟಾಲಿವುಡ್‌ನ‌ಲ್ಲಿ ಅಕೌಂಟ್‌ ಒಪನ್‌ ಮಾಡುತ್ತಿರುವ ಸರದಿ ದುನಿಯಾ ವಿಜಯ್‌ ಅವರದ್ದು.

ಸದ್ಯ “ಸಲಗ’ ಚಿತ್ರದ ಸೂಪರ್‌ ಹಿಟ್‌ ಯಶಸ್ಸಿನಲ್ಲಿರುವ ದುನಿಯಾ ವಿಜಯ್‌ ಮುಂದೆ ಯಾವ ಸಿನಿಮಾ ಮಾಡುತ್ತಾರೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಸದ್ಯದ ಮಾಹಿತಿ ಪ್ರಕಾರ ದುನಿಯಾ ವಿಜಯ್‌ ಶೀಘ್ರದಲ್ಲಿಯೇ ತೆಲುಗು ಸಿನಿಮಾವೊಂದರಲ್ಲಿ ಬಣ್ಣ ಹಚ್ಚುವ ಮೂಲಕ ಟಾಲಿವುಡ್‌ ಅಂಗಳಕ್ಕೆ ಎಂಟ್ರಿಯಾಗುತ್ತಿದ್ದಾರೆ.

ಹೌದು, ನಟ ದುನಿಯಾ ವಿಜಯ್‌ ಅವರು ನಂದಮೂರಿ ಬಾಲಕೃಷ್ಣ ಜೊತೆ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಬಹುತೇಕ ಪಕ್ಕಾ ಆಗಿದೆ. ಈ ಹಿಂದೆ ಕೂಡ ತೆಲುಗು ಸ್ಟಾರ್‌ ನಟ ಬಾಲಕೃಷ್ಣ ಜೊತೆ ವಿಜಯ್‌ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಮತ್ತು ಒಂದಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹರಿದಾಡುತ್ತಿದ್ದರೂ, ಆದರೆ ಈ ಬಗ್ಗೆ ದುನಿಯಾ ವಿಜಯ್‌ ಅವರಾಗಲೀ, ಚಿತ್ರತಂಡವಾಗಲಿ ಎಲ್ಲೂ ಮಾಹಿತಿ ಬಿಟ್ಟುಕೊಂಡಿರಲಿಲ್ಲ. ಇದೀಗ ಚಿತ್ರತಂಡವೇ ಅಧಿಕೃತವಾಗಿ ದುನಿಯಾ ವಿಜಯ್‌ ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಷಯವನ್ನು ಹಂಚಿಕೊಂಡಿದೆ.

ಇದನ್ನೂ ಓದಿ:ಜೋಹಾನ್ಸ್ ಬರ್ಗ್ ಟೆಸ್ಟ್: ರಬಾಡಾ, ಅಂಪೈರ್ ಗೆ ಕ್ಷಮೆ ಕೇಳಿದ ಕೆ.ಎಲ್.ರಾಹುಲ್

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ “ಮೈತ್ರಿ ಮೂವೀ ಮೇಕರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ದುನಿಯಾ ವಿಜಯ್‌ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸುದ್ದಿಯನ್ನು ಖಚಿತಪಡಿಸಿದೆ.

ಇನ್ನು ನೈಜ ಘಟನೆಗಳನ್ನು ಆಧರಿಸಿ ಮಾಡಲಾಗುತ್ತಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ಗೋಪಿಚಂದ್‌ ಮಲಿನೇನಿ ಆ್ಯಕ್ಷನ್‌-ಕಟ್‌ ಹೇಳಲಿದ್ದಾರೆ. ಈಗಾಗಲೇ ನಿರ್ದೇಶಕರು, ಪೋಸ್ಟರ್‌ ಬಿಡುಗಡೆ ಮಾಡಿ ವಿಜಿಯನ್ನು ಸ್ವಾಗತಿಸಿದ್ದಾರೆ.

ಅಂದಹಾಗೆ, ಈ ಸಿನಿಮಾ ತೆಲುಗು ನಟ ಬಾಲಕೃಷ್ಣ ಅಭಿನಯದ 107ನೇ ಸಿನಿಮಾವಾಗಿದ್ದು, ಸದ್ಯಕ್ಕೆ ಈ ಸಿನಿಮಾದ ಟೈಟಲ್‌ ಇನ್ನೂ ಅಂತಿಮವಾಗಿಲ್ಲ. ಈ ಸಿನಿಮಾಕ್ಕಾಗಿ ದುನಿಯಾ ವಿಜಯ್‌ ಈಗಾಗಲೇ ತಮ್ಮ ಹೇರ್‌ ಸ್ಟೈಲ್‌ ಮತ್ತು ಲುಕ್‌ ಬದಲಾಯಿಸಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ದುನಿಯಾ ವಿಜಯ್‌ ಬಾಲಕೃಷ್ಣ ಅವರ ಸಿನಿಮಾದಲ್ಲಿ ಯಾವ ಪಾತ್ರ ಮಾಡಲಿದ್ದಾರೆ ಎಂಬ ಗುಟ್ಟನ್ನು ಮಾತ್ರ ಸದ್ಯಕ್ಕೆ ಚಿತ್ರತಂಡವಾಗಲಿ, ದುನಿಯಾ ವಿಜಯ್‌ ಅವರಾಗಲಿ ಇನ್ನೂ ಬಿಟ್ಟುಕೊಟ್ಟಿಲ್ಲ.

ಟಾಪ್ ನ್ಯೂಸ್

ರಾಹುಲ್‌-ಧವನ್‌ ಓಪನಿಂಗ್‌: ವನ್‌ಡೌನ್‌ನಲ್ಲಿ ಶುಭಮನ್‌ ಗಿಲ್‌

ರಾಹುಲ್‌-ಧವನ್‌ ಓಪನಿಂಗ್‌: ವನ್‌ಡೌನ್‌ನಲ್ಲಿ ಶುಭಮನ್‌ ಗಿಲ್‌

ಶತಮಾನೋತ್ಸವಕ್ಕೆ ಭಾರತದ ಕೀರ್ತಿ ಇನ್ನಷ್ಟು ಬೆಳೆಯಲಿ

ಶತಮಾನೋತ್ಸವಕ್ಕೆ ಭಾರತದ ಕೀರ್ತಿ ಇನ್ನಷ್ಟು ಬೆಳೆಯಲಿ

ಮಾಧುಸ್ವಾಮಿ ಜವಾಬ್ದಾರಿಯಿಂದ ಮಾತಾಡಲಿ: ಸಚಿವ ಮುನಿರತ್ನ

ಮಾಧುಸ್ವಾಮಿ ಜವಾಬ್ದಾರಿಯಿಂದ ಮಾತಾಡಲಿ: ಸಚಿವ ಮುನಿರತ್ನ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಒಬ್ಬ ವ್ಯಕ್ತಿಯಿಂದ ಅಲ್ಲ: ಸಿ.ಟಿ. ರವಿ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಒಬ್ಬ ವ್ಯಕ್ತಿಯಿಂದ ಅಲ್ಲ: ಸಿ.ಟಿ. ರವಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರೆಯತ್ತ ‘ಧಮ್’..: ಇದು ಸುದೀಪ್ ಚಿತ್ರವಲ್ಲ

ತೆರೆಯತ್ತ ‘ಧಮ್’..: ಇದು ಸುದೀಪ್ ಚಿತ್ರವಲ್ಲ

ಲಕ್ಷ್ಮೀ ಪುತ್ರನ ನಂಬಿ ಬಂದವರು…

ಲಕ್ಷ್ಮೀ ಪುತ್ರನ ನಂಬಿ ಬಂದವರು…

ಕಾಂತಾರದಿಂದ “ಸಿಂಗಾರ ಸಿರಿಯೇ” ಹಾಡು ಸೋಮವಾರ ಬಿಡುಗಡೆ

ಕಾಂತಾರದಿಂದ “ಸಿಂಗಾರ ಸಿರಿಯೇ” ಹಾಡು ಸೋಮವಾರ ಬಿಡುಗಡೆ

ಟೀಸರ್‌ ನಲ್ಲಿ ಶಿವ 143 ಮಿಂಚು: ಧೀರೇನ್‌ ರಾಮ್‌ ಕುಮಾರ್‌ ರಗಡ್‌ ಎಂಟ್ರಿ

ಟೀಸರ್‌ ನಲ್ಲಿ ಶಿವ 143 ಮಿಂಚು: ಧೀರೇನ್‌ ರಾಮ್‌ ಕುಮಾರ್‌ ರಗಡ್‌ ಎಂಟ್ರಿ

monsoon raga

‘ಮಾನ್ಸೂನ್‌ ರಾಗ’ ರಿಲೀಸ್‌ ಮುಂದಕ್ಕೆ: ಆ.19ಕ್ಕೆ ತೆರೆ ಕಾಣುತ್ತಿಲ್ಲ ಡಾಲಿ ಚಿತ್ರ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

ಹೊಸ ಸೇರ್ಪಡೆ

ರಾಹುಲ್‌-ಧವನ್‌ ಓಪನಿಂಗ್‌: ವನ್‌ಡೌನ್‌ನಲ್ಲಿ ಶುಭಮನ್‌ ಗಿಲ್‌

ರಾಹುಲ್‌-ಧವನ್‌ ಓಪನಿಂಗ್‌: ವನ್‌ಡೌನ್‌ನಲ್ಲಿ ಶುಭಮನ್‌ ಗಿಲ್‌

ಶತಮಾನೋತ್ಸವಕ್ಕೆ ಭಾರತದ ಕೀರ್ತಿ ಇನ್ನಷ್ಟು ಬೆಳೆಯಲಿ

ಶತಮಾನೋತ್ಸವಕ್ಕೆ ಭಾರತದ ಕೀರ್ತಿ ಇನ್ನಷ್ಟು ಬೆಳೆಯಲಿ

ಮಾಧುಸ್ವಾಮಿ ಜವಾಬ್ದಾರಿಯಿಂದ ಮಾತಾಡಲಿ: ಸಚಿವ ಮುನಿರತ್ನ

ಮಾಧುಸ್ವಾಮಿ ಜವಾಬ್ದಾರಿಯಿಂದ ಮಾತಾಡಲಿ: ಸಚಿವ ಮುನಿರತ್ನ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಒಬ್ಬ ವ್ಯಕ್ತಿಯಿಂದ ಅಲ್ಲ: ಸಿ.ಟಿ. ರವಿ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಒಬ್ಬ ವ್ಯಕ್ತಿಯಿಂದ ಅಲ್ಲ: ಸಿ.ಟಿ. ರವಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.