ಮಂಜುನಾಥನ ಕ್ರೈಮ್ ಕಾಮಿಡಿ
Team Udayavani, Mar 7, 2022, 4:45 PM IST
“ಎದ್ದೇಳು ಮಂಜುನಾಥ’ ಸಿನಿಮಾ ದೊಡ್ಡ ಹಿಟ್ ಆಗಿರೋದು, ಹೊಸ ಪ್ರಯೋಗದ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದು ನಿಮಗೆ ಗೊತ್ತೇ ಇದೆ. ಈಗ ನಿರ್ದೇಶಕ ಗುರುಪ್ರಸಾದ್ “ಎದ್ದೇಳು ಮಂಜುನಾಥಾ-2’ಮಾಡಿದ್ದಾರೆ.
ಹಾಗಂತ ಈ ಚಿತ್ರದಲ್ಲಿ ಜಗ್ಗೇಶ್ ನಾಯಕರಲ್ಲ. ಬದಲಾಗಿ, ಸ್ವತಃ ಗುರುಪ್ರಸಾದ್ ಅವರೇ ನಟಿಸಿದ್ದಾರೆ. ಇದೊಂದು ಕ್ರೈಮ್ ಕಾಮಿಡಿ ಸಿನಿಮಾ. ಸಾಮಾನ್ಯವಾಗಿ ಕ್ರೈಮ್ ಹಿನ್ನೆಲೆಯ ಸಿನಿಮಾ ಎಂದರೆ ಕೊಲೆ, ರಕ್ತಪಾತ ಸಹಜ. ಆದರೆ, ಈ ಸಿನಿಮಾದಲ್ಲಿ ಕ್ರೈಮ್ ಅನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಕಾಮಿಡಿಯಾಗಿ ಸಿನಿಮಾವನ್ನು
ಕಟ್ಟಿಕೊಟ್ಟಿದ್ದಾರಂತೆ. ಚಿತ್ರದಲ್ಲಿ ರಚಿತಾ ನಾಯಕಿಯಾಗಿ ನಟಿಸಿದ್ದಾರೆ. ಹಾಗಂತ ರಚಿತಾ ರಾಮ್ ಅಲ್ಲ, ಈಗಾಗಲೇ ಗುರುಪ್ರಸಾದ್ ನಿರ್ದೇಶನದ “ರಂಗನಾಯಕ’ ಚಿತ್ರದಲ್ಲಿನಾಯಕಿಯಾಗಿ ನಟಿಸಿರುವ ರಚಿತಾ ಅವರಿಗೆ ಗುರು ಮತ್ತೂಮ್ಮೆಅವಕಾಶ ಕೊಟ್ಟಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ ಪ್ರಮುಖಪಾತ್ರ ಮಾಡಿದ್ದಾರೆ. ಅಂದಹಾಗೆ, ಇದು “ಎದ್ದೇಳು ಮಂಜುನಾಥ’ದ ಮುಂದುವರಿದ ಭಾಗವಲ್ಲ ಎಂಬುದು ಗುರುಪ್ರಸಾದ್ಮಾತು. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ನಿರತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ