ಎಲ್ಲಿದ್ದೆ ಇಲ್ಲಿತನಕ: ನವಿರು ಪ್ರೇಮದೊಂದಿಗೆ ಭರ್ಜರಿ ಮನೋರಂಜನೆ!

Team Udayavani, Oct 10, 2019, 12:36 PM IST

ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ನಟಿಸಿರುವ ಎಲ್ಲಿದ್ದೆ ಇಲ್ಲಿತನಕ ಚಿತ್ರ ಈ ವಾರ ಅದ್ದೂರಿಯಾಗಿ ತೆರೆಗಾಣುತ್ತಿದೆ. ಈಗಾಗಲೇ ಹೊರ ಬಂದಿರುವ ಹಾಡುಗಳ ಮೂಲಕವೇ ಸೃಜನ್ ಮತ್ತು ಹರಿಪ್ರಿಯಾ ಜೋಡಿ ರೊಮ್ಯಾಂಟಿಕ್ ಪೇರ್ ಆಗಿ ಗುರುತಿಸಿಕೊಂಡಿದೆ. ಹಾಗಾದರೆ ಇದು ಪ್ರೇಮ ಪ್ರಧಾನ ಕಥಾ ಹಂದರ ಹೊಂದಿರೋ ಸಿನಿಮಾನಾ ಅಂತ ನೋಡ ಹೋದರೆ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಜಾಹೀರು ಮಾಡುತ್ತದೆ. ಅದೆಲ್ಲವೂ ಈ ಚಿತ್ರದ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡುವಂತಿವೆ.

ತೇಜಸ್ವಿ ಮೊದಲ ಹೆಜ್ಜೆಯಲ್ಲಿಯೇ ಎಲ್ಲ ರಸಗಳೂ ಸೇರಿಕೊಂಡಿರೋ ಅಚ್ಚುಕಟ್ಟಾದ ಕಥೆಯೊಂದಕ್ಕೆ ದೃಶ್ಯ ರೂಪ ನೀಡಿದ್ದಾರೆ. ಕೇವಲ ಒಂದು ಅಂಶವಿದ್ದರೆ ಅದನ್ನು ಇಷ್ಟ ಪಡುವಂಥಾ ಒಂದು ವರ್ಗದ ಪ್ರೇಕ್ಷಕರನ್ನು ಮಾತ್ರವೇ ತಲುಪಿಕೊಳ್ಳುತ್ತದೆ. ಆದರೆ ಎಲ್ಲ ಅಂಶಗಳೂ ಬೆರೆತ ಕಥೆಯೊಂದಿಗೆ ಸೃಜನ್ ಲೋಕೇಶ್ ಅವರ ನಟನೆಯ ಕಸುವನ್ನೂ ಮಿರುಗಿಸಬೇಕೆಂಬ ಉದ್ದೇಶದಿಂದಲೇ ತೇಜಸ್ವಿ ಮತ್ತು ತಂಡ ಮಜವಾದ ಕಥೆಯನ್ನು ಸೃಷ್ಟಿಸಿದೆ. ಆದ್ದರಿಂದಲೇ ಪ್ರೇಮ ಮತ್ತು ಭರ್ಜರಿ ಮನೋರಂಜನಾತ್ಮಕ ಚಿತ್ರವಾಗಿ ಎಲ್ಲಿದ್ದೆ ಇಲ್ಲಿತನಕ ಮೂಡಿ ಬಂದಿದೆ.

ಪ್ರೀತಿ ಪ್ರೇಮದೊಂದಿಗೇ ಮನೋರಂಜನೆ ಈ ಸಿನಿಮಾದ ಪ್ರಧಾನ ಅಂಶ. ಇಲ್ಲಿ ಪ್ರತೀ ಹಂತದಲ್ಲಿಯೂ ನಗುವಿನ ಸೆಲೆ ಬತ್ತದಂತೆ ನೋಡಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ಭರ್ಜರಿ ಕಾಮಿಡಿಯ ರಸಪಾಕ ಸವಿಯುವಂತೆ ಮಾಡಿದ್ದಾರೆ. ಇದುವರೆಗೂ ಥರ ಥರದ ಪಾತ್ರಗಳನ್ನು ನಿರ್ವಹಿಸಿರುವ ಸಾಧು ಕೋಕಿಲಾ ಇಲ್ಲಿ ಬೇರೆಯದ್ದೇ ಥರದಲ್ಲಿ ನಗಿಸಲು ಮುಂದಾಗಿದ್ದಾರೆ. ಅವರಿಗೆ ಸಿಹಿಕಹಿ ಚಂದ್ರು, ತರಂಗ ವಿಶ್ವ ಮುಂತಾದವರು ಸಾಥ್ ಕೊಟ್ಟಿದ್ದಾರೆ. ಈ ಎಲ್ಲ ಅಂಶಗಳೊಂದಿಗೆ ಎಲ್ಲಿದ್ದೆ ಇಲ್ಲಿತನಕ ಚಿತ್ರ ಈ ವಾರ ತೆರೆಗಾಣುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ