ಎಲ್ಲಿದ್ದೆ ಇಲ್ಲಿತನಕ: ಸೃಜನ್ ಪಾಲಿಗಿದು ವಿಶೇಷ ಚಿತ್ರ!

Team Udayavani, Oct 10, 2019, 12:46 PM IST

ಮಜಾ ಟಾಕೀಸ್ ಶೋ ಮೂಲಕ ಟಾಕಿಂಗ್ ಸ್ಟಾರ್ ಎಂದೇ ಪ್ರಸಿದ್ಧರಾಗಿರೋ ಸೃಜನ್ ಲೋಕೇಶ್ ಮಾತಿನ ಮಲ್ಲನಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸೆಳೆದುಕೊಂಡಿದ್ದಾರೆ. ಆ ಪ್ರಸಿದ್ಧಿಯ ಪ್ರಭೆಯಲ್ಲಿಯೇ ಅವರೀಗ ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಈ ವರೆಗೂ ಒಂದಷ್ಟು ಚಿತ್ರಗಳಲ್ಲಿ ಸೃಜನ್ ನಾಯಕನಾಗಿ ನಟಿಸಿದ್ದರೂ ಕೂಡಾ ಎಲ್ಲಿದ್ದೆ ಇಲ್ಲಿತನಕ ಅವರ ಪಾಲಿಗೆ ವಿಶೇಷವಾದ ಚಿತ್ರ. ಅದಕ್ಕೆ ಅನೇಕಾನೇಕ ಕಾರಣಗಳಿದ್ದಾವೆ.

ಸೃಜನ್ ಈ ಹಿಂದೆಯೇ ಮಹತ್ವಾಕಾಂಕ್ಷೆಯಿಂದ ಲೋಕೇಶ್ ಪ್ರೊಡಕ್ಷನ್ಸ್ ಹೆಸರಿನಲ್ಲಿ ಸಂಸ್ಥೆಯೊಂದನ್ನು ತೆರೆದಿದ್ದರು. ಈ ಬ್ಯಾನರಿನಡಿಯಲ್ಲಿಯೇ ಮಜಾ ಟಾಕೀಸ್ ಎಂಬ ಯಶಸ್ವೀ ಶೋ ಕೂಡಾ ಸಂಪನ್ನಗೊಂಡಿತ್ತು. ಈ ಯಶಸ್ವೀ ಕಾರ್ಯಕ್ರಮದ ಮೂಲಕ ತಮ್ಮ ತಂದೆಯವರ ಹೆಸರನ್ನು ಸೃಜನ್ ಮತ್ತಷ್ಟು ಮಿರುಗಿಸಿದ್ದಾರೆ. ಇದೀಗ ಅದೇ ಬ್ಯಾನರಿನಡಿಯಲ್ಲಿಯೇ ಎಲ್ಲಿದ್ದೆ ಇಲ್ಲಿತನಕ ಚಿತ್ರವನ್ನವರು ನಿರ್ಮಾಣ ಮಾಡಿದ್ದಾರೆ. ಒಂದು ಸಿನಿಮಾದಲ್ಲಿ ಒಂದು ಥರದ ಜವಾಬ್ದಾರಿ ನಿರ್ವಹಿಸೋದೇ ಕಷ್ಟದ ಕೆಲಸ. ಅಂಥಾದ್ದರಲ್ಲಿ ಸೃಜನ್ ಎರಡೆರಡು ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ.

ತಂದೆಯ ಬಗ್ಗೆ ಅಪಾರ ಪ್ರೀತ್ಯಾಭಿಮಾನ ಹೊಂದಿರುವವರು ಸೃಜನ್ ಲೋಕೇಶ್, ತಂದೆ ಲೋಕೇಶ್ ಹೆಸರಿನ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡುತ್ತಿರೋ ಈ ಮೊದಲ ಚಿತ್ರ ವಿಶೇಷವಾಗಿರಬೇಕೆಂಬ ಕಾರಣದಿಂದಲೇ ಅವರು ಆರಂಭದಿಂದಲೂ ತುಂಬಾನೇ ಮುತುವರ್ಜಿ ವಹಿಸಿದ್ದರಂತೆ. ಅದಕ್ಕೆ ತೇಜಸ್ವಿ ಮತ್ತು ಇಡೀ ತಂಡ ಕೂಡಾ ಸಾಥ್ ನೀಡಿದೆ. ಇದೆಲ್ಲದರ ಸಾಹಚರ್ಯದೊಂದಿಗೇ ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಫ್ಯಾಮಿಲಿ ಪ್ಯಾಕೇಜಿನಂಥಾ ಈ ಚಿತ್ರ ರೂಪುಗೊಂಡಿದೆ. ಇದು ಈ ವಾರವೇ ತೆರೆಗಾಣಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ