ಎಲ್ಲಿದ್ದೆ ಇಲ್ಲಿ ತನಕ ಅಂದ ಹರಿಪ್ರಿಯಾ ಪಾತ್ರವೇನು?

Team Udayavani, Oct 9, 2019, 3:25 PM IST

ಒಂದೊಂದು ಸಿನಿಮಾಗಳಲ್ಲಿಯೂ ವಿಭಿನ್ನವಾದ ಪಾತ್ರಗಳ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಳ್ಳುತ್ತಾ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವವರು ಹರಿಪ್ರಿಯಾ. ಈವರೆಗೆ ಅವರು ನಟಿಸಿರೋ ಚಿತ್ರಗಳ ಗ್ರಾಫ್ ಇದೆಯಲ್ಲಾ? ಅದವೇ ಹರಿಪ್ರಿಯಾ ಅದೆಷ್ಟು ಪ್ರತಿಭಾವಂತ ನಟಿ ಎಂಬುದನ್ನು ಸಾಕ್ಷೀಕರಿಸುತ್ತದೆ. ನೀರ್ ದೋಸೆಯೂ ಸೇರಿದಂತೆ ಬಗೆ ಬಗೆಯ ಪಾತ್ರಗಳನ್ನು ನಿರ್ವಹಿಸಿರೋ ಅವರೊಂದು ಸಿನಿಮಾ ಒಪ್ಪಿಕೊಂಡರೆಂದರೆ ಅದರ ಬಗ್ಗೆ ಆಸಕ್ತಿ ಹುಟ್ಟಿಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ಮೋಡಿ ಮಾಡಿರೋ ಹರಿಪ್ರಿಯಾ ಇದೀಗ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗೋ ತವಕದಿಂದಿದ್ದಾರೆ.

ಈ ಸಿನಿಮಾ ನಿರ್ದೇಶಕ ತೇಜಸ್ವಿ ಸೇರಿದಂತೆ ಇಡೀ ಚಿತ್ರತಂಡ ಕಥೆ ಮತ್ತು ತಾರಾಗಣದ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಅದಕ್ಕೆ ಸಾಕಷ್ಟು ಶ್ರಮ ವಹಿಸಿದೆ. ಅದರಲ್ಲಿಯೂ ಸೃಜಾಗೆ ನಾಯಕಿ ಯಾರಾಗ ಬೇಕೆಂಬುದರ ಬಗ್ಗೆಯೇ ಸುದೀರ್ಘ ಚರ್ಚೆ ನಡೆದಿತ್ತು. ಆದರೆ ಆ ಪಾತ್ರವನ್ನು ನಿರ್ವಹಿಸಲು ಹರಿಪ್ರಿಯಾ ಅವರೇ ಸೂಕ್ತ ಎಂಬ ಒಕ್ಕೊರಲ ನಿರ್ಧಾರವೇ ಹೊರ ಬಿದ್ದಿತ್ತು. ಕಡೆಗೂ ಹರಿಪ್ರಿಯಾ ಕಥೆ ಮತ್ತು ತಮ್ಮ ಪಾತ್ರದ ಹೊಸತನ ಕಂಡು ಒಂದೇ ಸಲಕ್ಕೆ ಒಪ್ಪಿಗೆ ಸೂಚಿಸಿದ್ದರು.

ಅಷ್ಟಕ್ಕೂ ಹರಿಪ್ರಿಯಾ ಸಿನಿಮಾ ಕಥೆಗಳ ಆಯ್ಕೆಯಲ್ಲಿ ಅದೆಂಥಾ ಚೂಸಿ ಅನ್ನೋದು ಸಿನಿಮಾ ರಂಗದಲ್ಲಿ ಎಲ್ಲರಿಗೂ ಗೊತ್ತಿರೋ ವಿಚಾರವೇ. ಅವರು ಕಥೆ ಮತ್ತು ಪಾತ್ರ ಇಷ್ಟವಾಗದೇ ಇದ್ದರೆ ಯಾವ ಮರ್ಜಿಗೂ ಬೀಳುವವರಲ್ಲ. ಸ್ನೇಹ ಬೇರೆ ಸಿನಿಮಾ ಕಥೆಯ ಆಯ್ಕೆ ವಿಚಾರವೇ ಬೇರೆ ಎಂಬಂಥಾ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಿಕೊಂಡು ಬರುತ್ತಿರುವವರು ಹರಿಪ್ರಿಯಾ. ಅಂಥಾ ಅವರೇ ನಟಿಸಲು ಒಪ್ಪಿಕೊಂಡಿದ್ದಾರೆಂದರೆ ಅದಕ್ಕೆ ಕಾರಣ ಈ ಕಥೆಯ ಹೊಸತನವಲ್ಲದೇ ಬೇರೇನೂ ಅಲ್ಲ. ಇವರ ಬಗ್ಗೆ ಸಿಕ್ಕಿರೋ ಕೆಲ ಸುಳಿವುಗಳೇ ಅವರಿಲ್ಲಿ ರೊಮ್ಯಾಂಟಿಕ್ ಮೂಡಲ್ಲಿ ಕಾಣಿಸಿಕೊಂಡಿದ್ದಾರೆಂಬ ಭಾವನೆ ಮೂಡಿಸಿದೆ. ಆದರೆ ಅದಕ್ಕೂ ಮೀರಿದ ವಿಶೇಷತೆಗಳು ಅವರ ಪಾತ್ರಕ್ಕಿದೆಯಂತೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ