ಶರಣರ ಮುಂದೆ ಎಲ್ಲವೂ ಗೌಣ


Team Udayavani, Dec 11, 2018, 11:56 AM IST

sharan-1.jpg

ಕನ್ನಡದಲ್ಲಿ ಪ್ರತಿಯೊಬ್ಬ ನಾಯಕ ನಟನಿಗೂ ಅವರವರ ಅಭಿಮಾನಿಗಳು ಒಂದೊಂದು ಬಿರುದು ಕೊಡುವ ಮೂಲಕ ಪ್ರೀತಿಯಿಂದ ಕರೆಯುತ್ತಾರೆ. ಬಹುತೇಕ ಸ್ಟಾರ್‌ ನಟರಿಂದ ಹಿಡಿದು, ಈಗೀಗ ಸಿನಿಮಾಗೆ ಎಂಟ್ರಿಕೊಡುತ್ತಿರುವ ಯುವ ನಾಯಕರೂ ಸಹ ಒಂದೊಂದು ಬಿರುದು ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಬಹುತೇಕ ನಟರ ಅಭಿಮಾನಿಗಳು ಅಭಿಮಾನದಿಂದ “ಸ್ಟಾರ್‌’ ಅಂತ ಕರೆಯುವಾಗ, ಶರಣ್‌ ಮಾತ್ರ ಅದರಿಂದ ಬಲು ದೂರವೇ ಉಳಿದಿದ್ದಾರೆ.

ಹೌದು, ಸಾಲು ಸಾಲು ಯಶಸ್ವಿ ಚಿತ್ರಗಳನ್ನು ಕೊಟ್ಟರೂ ಈ ತಮ್ಮ ಹೆಸರಿನ ಮುಂದೆ ಯಾವುದೇ ಸ್ಟಾರ್‌ ಬಿರುದು ಬೇಡವೇ ಬೇಡ ಅಂತ ದೂರ ಸರಿಯುತ್ತಿದ್ದಾರೆ ಶರಣ್‌. ತಮ್ಮ ಹಾಸ್ಯ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಕೊಡುತ್ತ, ಮನರಂಜಿಸುತ್ತಲೇ ಇರುವ ಶರಣ್‌ಗೆ ಯಾವ ಬಿರುದೂ ಬೇಕಿಲ್ಲ. ಅಭಿಮಾನಿಗಳ ಚಪ್ಪಾಳೆ, ಶಿಳ್ಳೆ, ಪ್ರೀತಿ ಮಾತ್ರ ಸಾಕು ಎಂಬುದು ಅವರ ಮಾತು.

ಇತ್ತೀಚೆಗೆ ಬರುವ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುತೇಕ ಯುವ ನಟರು ಸೇರಿದಂತೆ ಬಹುತೇಕರಿಗೆ ತಮ ಹೆಸರ ಮುಂದೆ ಆ “ಸ್ಟಾರ್‌’, ಈ “ಸ್ಟಾರ್‌’ ಎಂಬ ಬಿರುದು ಇದೆ. ಅದು ಅಭಿಮಾನಿಗಳೇ ಕೊಟ್ಟ ಪ್ರೀತಿಯ ಬಿರುದು. ಹೀಗಿರುವಾಗ, ಈವರೆಗೆ ಕನ್ನಡ ಚಿತ್ರರಂಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾದ ಶರಣ್‌, ಕಳೆದ ಏಳೆಂಟು ವರ್ಷಗಳಿಂದ ಸಾಲು ಸಾಲು ಹಾಸ್ಯಮಯ ಚಿತ್ರಗಳನ್ನು ಕೊಟ್ಟಿರುವ ಶರಣ್‌ ಯಾಕೆ ತಮ್ಮ ಹೆಸರಿನ ಮುಂದೆ ಯಾವುದೇ “ಸ್ಟಾರ್‌’ ಬಿರುದು ಹಾಕಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಇದೆ. ಅದಕ್ಕೆ ತಮ್ಮದೇ ಧಾಟಿಯಲ್ಲಿ ಶರಣ್‌ ಉತ್ತರಿಸಿದ್ದು ಹೀಗೆ.

“ನನಗೆ ಯಾವುದೇ ಹೀರೋಯಿಸಂ ಮೇಲೆ ನಂಬಿಕೆ ಇಲ್ಲ. ನನ್ನ ಪ್ರತಿ ಚಿತ್ರದ ಟೈಟಲ್‌ ಕಾರ್ಡ್‌ನಲ್ಲೂ ಶರಣ್‌ ಅಂತಾನೇ ಇರುತ್ತದೆ. ಪ್ರತಿಸಲ ಚಿತ್ರದ ಟೈಟಲ್‌ ಮಾಡುವಾಗ ಚಿತ್ರತಂಡದವರು, ನಿಮ್ಮ ಹೆಸರಿನ ಮುಂದೆ ಏನಾದ್ರೂ ಸೇರಿಸೋಣವಾ? ಅಂಥ ಕೇಳುತ್ತಾರೆ. ಆದರೆ, ನಾನೇ ಅದೆಲ್ಲ ಏನೂ ಬೇಡ ಅಂತ ಹೇಳುತ್ತೇನೆ. ಯಾಕೆಂದರೆ, ಈ ಹೆಸರಿನ ಹಿಂದೆ ಒಂದು ಕಥೆ ಇದೆ’ ಎನ್ನುತ್ತಲೇ ಅದರ ಒಂದು ಸಣ್ಣ ಕಥೆ ಹೇಳುತ್ತಾರೆ. 

“ಗುಬ್ಬಿ ನಾಟಕ ಕಂಪೆನಿ ಯಾದಗಿರಿ ಕ್ಯಾಂಪ್‌ನಲ್ಲಿರುವಾಗ ನನ್ನ ತಾಯಿ ಗರ್ಭಿಣಿಯಾಗಿದ್ದರಂತೆ. ನಾನು ಅವರ ಹೊಟ್ಟೆಯಲ್ಲಿದ್ದಾಗ, ಏನಾಯ್ತೋ, ಏನೋ, ನನ್ನ ತಾಯಿಯನ್ನು ಪರೀಕ್ಷಿಸಿದ ಡಾಕ್ಟರ್‌ ಮಗು ಡೇಂಜರ್‌ ಸ್ಥಿತಿಯಲ್ಲಿದೆ. ತೆಗೆಸಿಬಿಡುವುದು ಒಳ್ಳೆಯದು. ಇಲ್ಲದಿದ್ರೆ ತಾಯಿ-ಮಗು ಇಬ್ಬರ ಜೀವಕ್ಕೂ ಅಪಾಯ ಎಂದರಂತೆ. ಆದರೆ, ನಮ್ಮ ತಾಯಿ ಮಾತ್ರ ಗರ್ಭದಲ್ಲಿದ್ದ ಮಗುವನ್ನು ತೆಗೆಸಲು ತಯಾರಿರಲಿಲ್ಲ.

ಕೂಡಲೇ ಅಲ್ಲಿಯೇ ಇದ್ದ ಶ್ರೀ ಶರಣ ಬಸವೇಶ್ವರ ಸನ್ನಿಧಿಗೆ ಹೋಗಿ ಯಾವುದೇ ತೊಂದರೆಯಾಗದೆ ಮಗು ಹುಟ್ಟಿದರೆ, ಅದಕ್ಕೆ ನಿನ್ನ ಹೆಸರು ಇಡುತ್ತೇನೆ ಎಂದು ಹರಕೆ ಕಟ್ಟಿಕೊಂಡು ಬಂದಿದ್ದಾರೆ. ಅದಾದ ನಂತರವೇ ನಾನು ಹುಟ್ಟಿದ್ದೇನೆ. ನಮ್ಮ ತಾಯಿಯ ಹರಕೆಯಂತೆ ನನಗೆ ಶರಣ ಅಂಥ ಹೆಸರಿಟ್ಟಿದ್ದಾರೆ. ಯಾವುದೇ ನಕ್ಷತ್ರ, ಗಳಿಗೆ, ಜಾತಕ ಅಂತ ನೋಡದೆ ಗರ್ಭದಲ್ಲಿರುವಾಗಲೇ ಈ ಹೆಸರು ಇಟ್ಟಿದ್ದರು. ಶರಣ್‌ ಎಂಬ ಹೆಸರೆ ಇಲ್ಲಿಯವರೆಗೆ ತುಂಬ ತಂದುಕೊಟ್ಟಿದೆ. ಇದಕ್ಕಿಂತ ಹೆಸರಿನ ಹಿಂದೆ ಮುಂದೆ ಏನು ಬೇಕು ಅಂಥ ಅನಿಸಲಿಲ್ಲ’ ಎಂದು ತಮ್ಮ ಹೆಸರಿನ ಹಿಂದಿನ ವೃತ್ತಾಂತವನ್ನು ತೆರೆದಿಡುತ್ತಾರೆ ಶರಣ್‌.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.