Udayavni Special

ದರ್ಶನ್‌ ಹುಟ್ಟುಹಬ್ಬದಲ್ಲಿ “ಅಭಿಮಾನದ ಜಾತ್ರೆ’

ಹರಿದು ಬಂತು ಕ್ವಿಂಟಾಲ್‌ಗ‌ಟ್ಟಲೇ ದವಸ-ಧಾನ್ಯ

Team Udayavani, Feb 17, 2020, 7:02 AM IST

Darshan-Birthday

ನಟ ದರ್ಶನ್‌ ಅವರ ಹುಟ್ಟುಹಬ್ಬ ಕಳೆದ ವರ್ಷದಂತೆ ಈ ಬಾರಿಯೂ ಅರ್ಥಪೂರ್ಣ ವಾಗಿ ನಡೆದಿದೆ. ಕೇಕ್‌, ಹಾರಗಳ ಅಬ್ಬರ ವಿಲ್ಲದೇ, ದವಸ-ಧಾನ್ಯಗಳ ಉಡುಗೊರೆಯೊಂದಿಗೆ ಅಭಿಮಾನಿಗಳ ಪಾಲಿನ “ಡಿ ಬಾಸ್‌’ ದರ್ಶನ್‌ ಭಾನುವಾರ ಹುಟ್ಟುಹಬ್ಬ ಆಚರಿಸಿಕೊಂಡರು. ಕೇಕ್‌ ಕಟ್‌ ಮಾಡದೇ, ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ಅಭಿಮಾನಿಗಳ ಜೊತೆ ಬೆರೆಯುವ ಮೂಲಕ ದರ್ಶನ್‌ ಹುಟ್ಟುಹಬ್ಬ ಆಚರಿಸಿಕೊಂಡರು.

ಸರತಿ ಸಾಲಿನಲ್ಲಿ ಬಂದ ಅಭಿಮಾನಿಗಳ ಕೈ ಕುಲುಕುವ ಮೂಲಕ ಅವರ ಖುಷಿಗೆ ಕಾರಣವಾದ ದರ್ಶನ್‌ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ಮೀಸಲಿಟ್ಟಿದ್ದರು. ಸಾಮಾನ್ಯವಾಗಿ ಸ್ಟಾರ್‌ ನಟರ ಬರ್ತ್‌ಡೇ ಅಂದರೆ ಕೇಕ್‌, ಹಾರಗಳ ರಾಶಿ ಬಿದ್ದಿರುತ್ತದೆ. ಆದರೆ, ದರ್ಶನ್‌ ಅಭಿಮಾನಿಗಳಿಗೆ ಕೇಕ್‌, ಹಾರ ತರಬಾರದು ಎಂದು ಹೇಳಿದ್ದರಿಂದ ದರ್ಶನ್‌ ಮನೆ ಸುತ್ತಮುತ್ತ ಕೇಕ್‌, ಹಾರವಿರ ಲಿಲ್ಲ. ಇದು ದರ್ಶನ್‌ಗೆ ಖುಷಿ ಕೊಟ್ಟಿದೆ.

“ಕೇಕ್‌, ಹಾರವಿಲ್ಲದೇ ಇಡೀ ವಠಾರ ಕ್ಲೀನ್‌ ಇದೆ. ಇಲ್ಲಾಂದ್ರೆ ರಾಶಿ ರಾಶಿ ಬಿದ್ದಿರುತ್ತಿತ್ತು. ಕಳೆದ ವರ್ಷಕ್ಕಿಂತಲೂ ಹೆಚ್ಚು ದವಸ-ಧಾನ್ಯ ಗಳು ಬಂದಿವೆ. ಒಂದಷ್ಟು ವೃದ್ಧಾಶ್ರಮ, ಅನಾಥಶ್ರಮಗಳು ತುಂಬುತ್ತವೆ. ಅದೇ ಖುಷಿ. ಇದು ಅಭಿಮಾನಿಗಳ ದಿನ. ಅವರ ಪ್ರೀತಿಗೆ ಬೆಲೆ ಕಟ್ಟಲಾಗದು’ ಎನ್ನುವ ಮೂಲಕ ಅಭಿಮಾನಿಗಳ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಅಭಿಮಾನಿಗಳಿಂದ ಗಿಫ್ಟ್: ದವಸ- ಧಾನ್ಯಗಳ ಜೊತೆಗೆ ಒಂದಷ್ಟು ಅಭಿಮಾನಿಗಳು ದರ್ಶನ್‌ಗೆ ಮೊಲ, ಬಾತುಕೋಳಿ, ಕರುವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ದಾಸನ ಪ್ರಾಣಿ ಪ್ರೀತಿಗೆ ಅಭಿಮಾನಿಗಳು ಸಾಥ್‌ ನೀಡಿದ್ದಾರೆ. ದರ್ಶನ್‌ ಇದನ್ನು ಮೈಸೂರಿನ ಲ್ಲಿರುವ ತೋಟಕ್ಕೆ ಸಾಗಿಸಲಿದ್ದಾರೆ. ದರ್ಶನ್‌ ಅವರ ಕೆಲವು ಅಭಿಮಾನಿ ಸಂಘಗಳು ವೀಲ್‌ಚೇರ್‌ ಕೂಡಾ ವಿತರಿಸಿದೆ.

ಇನ್ನು, ದರ್ಶನ್‌ ಹುಟ್ಟುಹಬ್ಬ ದಿನ ಅಭಿಮಾನಿಗಳೊಂದಿಗೆ ಬೆರೆಯುವ ಜೊತೆಗೆ ಸಿನಿಮಾ ಕೆಲಸದಲ್ಲೂ ನಿರತರಾಗಿರುತ್ತಾರೆ. ಈ ಬಾರಿಯೂ ಕೊಂಚ ಬಿಡುವು ಮಾಡಿಕೊಂಡು “ರಾಬರ್ಟ್‌’ ಚಿತ್ರದ ಡಬ್ಬಿಂಗ್‌ ಮಾಡಿದ್ದಾರೆ. ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾತನಾಡುವ ದರ್ಶನ್‌, “ಟೀಸರ್‌ನಲ್ಲಿ ನೋಡಿರೋದು ಬರೀ ಶೇ 10. ಸಿನಿಮಾ ಬೇರೇನೇ ಇದೆ. ತರುಣ್‌ ಏನು ಅಂದುಕೊಂಡಿದ್ದರೋ ಅದನ್ನು ಮಾಡಿದ್ದಾರೆ. ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ’ ಎನ್ನುತ್ತಾರೆ.

ಕಳೆದ ವರ್ಷಕ್ಕಿಂತಲೂ ಹೆಚ್ಚು ದವಸ-ಧಾನ್ಯಗಳು ಬಂದಿವೆ. ಒಂದಷ್ಟು ವೃದ್ಧಾಶ್ರಮ, ಅನಾಥಶ್ರಮಗಳು ತುಂಬುತ್ತವೆ. ಅದೇ ಖುಷಿ. ಇದು ಅಭಿಮಾನಿಗಳ ದಿನ. ಅವರ ಪ್ರೀತಿಗೆ ಬೆಲೆ ಕಟ್ಟಲಾಗದು.
-ದರ್ಶನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

covid 19-4500ಕ್ಕೆ ಏರಿಕೆ; ಏ.14ರ ನಂತರ ಲಾಕ್ ಡೌನ್ ಮುಂದುವರಿಕೆಗೆ ಕೇಂದ್ರದ ಲೆಕ್ಕಾಚಾರ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ಎಲ್ಲಾ ಅಲ್ಪಸಂಖ್ಯಾತರು ದೇಶದ್ರೋಹಿಗಳಲ್ಲ, ಭಯೋತ್ಪಾದಕರೂ ಅಲ್ಲ: ರೇಣುಕಾಚಾರ್ಯ

ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ

ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ

ಕೋವಿಡ್ 19, ಸರ್ಕಾರದ ವಿರುದ್ಧ ಗಂಭೀರ ಆರೋಪ; ಅಸ್ಸಾಂ ಶಾಸಕ ಅಮಿನುಲ್ ಅರೆಸ್ಟ್

ಕೋವಿಡ್ 19, ಸರ್ಕಾರದ ವಿರುದ್ಧ ಗಂಭೀರ ಆರೋಪ; ಅಸ್ಸಾಂ ಶಾಸಕ ಅಮಿನುಲ್ ಅರೆಸ್ಟ್

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಗದಗ ನಗರದ 80ರ ವೃದ್ಧೆಗೆ ಸೋಂಕು: 44 ಜನರ ವೈದ್ಯಕೀಯ ತಪಾಸಣೆ

ಗದಗ ನಗರದ 80ರ ವೃದ್ಧೆಗೆ ಸೋಂಕು: 44 ಜನರ ವೈದ್ಯಕೀಯ ತಪಾಸಣೆ

ಸಿದ್ದರಾಮಯ್ಯ ರಿಯಾಲಿಟಿ ಚೆಕ್: ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯ ರಿಯಾಲಿಟಿ ಚೆಕ್: ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಷ್ಣು ಪ್ರಿಯ ಫ‌ಸ್ಟ್‌ ಲುಕ್‌ ರಿಲೀಸ್‌

ವಿಷ್ಣು ಪ್ರಿಯ ಫ‌ಸ್ಟ್‌ ಲುಕ್‌ ರಿಲೀಸ್‌

ಕಣ್ಸನ್ನೆ ಹುಡುಗಿಯ ಕನ್ನಡ ಮಾತು

ಕಣ್ಸನ್ನೆ ಹುಡುಗಿಯ ಕನ್ನಡ ಮಾತು

ಬಿಟ್‌ಸಾಂಗ್‌ನಲ್ಲೇ ಲವ್‌, ಮದುವೆ, ಮಕ್ಕಳು…

ಬಿಟ್‌ಸಾಂಗ್‌ನಲ್ಲೇ ಲವ್‌, ಮದುವೆ, ಮಕ್ಕಳು…

ಸುಳ್ಳು ಸುದ್ದಿಗೆ ಗರಂ

ಸುಳ್ಳು ಸುದ್ದಿಗೆ ಗರಂ

ಡಾ. ರಾಜ್‌ ಸಿನಿ ಸಂಭ್ರಮ

ಡಾ. ರಾಜ್‌ ಸಿನಿ ಸಂಭ್ರಮ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

07-April-27

ಅಂತರ ಕಾಪಾಡಿ ಕೊರೊನಾ ಓಡಿಸಿ: ಮಹಾಂತೇಶ್‌

ವರ್ಕ್ ಫ್ರಮ್ ಹಳ್ಳಿ

ವರ್ಕ್ ಫ್ರಮ್ ಹಳ್ಳಿ

07-April-26

ಜನಸಾಮಾನ್ಯರಲ್ಲಿ ಕೊರೊನಾ ಜಾಗೃತಿ ಮೂಡಿಸಿ

07-April-25

ಹಾಲು ವಿತರಣೆಗಾಗಿ ಅಧಿಕಾರಿಗಳು-ಸದಸ್ಯರ ತಿಕ್ಕಾಟ

07-April-24

ಗ್ರಾಮಲೆಕ್ಕಾಧಿಕಾರಿಗಳ ಲೊಕೇಶನ್‌ ಪಡೆಯಿರಿ