ಟಿಕೆಟ್ ಸಿಗದೆ ಅಭಿಮಾನಿಗಳ ಪ್ರತಿಭಟನೆ
Team Udayavani, Dec 22, 2018, 11:25 AM IST
“ಕೆಜಿಎಫ್’ ಬಿಡುಗಡೆಯಾಗಿರುವ ರಾಜ್ಯದ ಹಲವು ಥಿಯೇಟರ್ಗಳಲ್ಲಿ ಅಭಿಮಾನಿಗಳು ಟಿಕೆಟ್ ಸಿಗದೇ ಅಭಿಮಾನಿಗಳು ಪ್ರತಿಭಟನೆ ನಡೆಸಿರುವ ಘಟನೆಯೂ ನಡೆದಿದೆ. ಮೈಸೂರಿನ ಗರುಡಾ ಮಾಲ್ನಲ್ಲಿ “ಕೆಜಿಎಫ್’ ವೀಕ್ಷಣೆಗಾಗಿ ಯುವಕರ ಗುಂಪು ಮಧ್ಯರಾತ್ರಿಯಿಂದಲೇ ಕಾಯುತ್ತಿತ್ತು.
ಗುರುವಾರ ಮಧ್ಯಾಹ್ನ ಕೇವಲ 20 ಟಿಕೆಟ್ಗಳನ್ನು ಮಾತ್ರ ಕೊಟ್ಟು ಉಳಿದ ಟಿಕೆಟ್ಗಳು ಆನ್ಲೈನ್ನಲ್ಲಿ ಸೋಲ್ಡ್ ಔಟ್ ಆಗಿದೆ ಎಂದು ಚಿತ್ರಮಂದಿರದಲ್ಲಿ ತಿಳಿಸಿದ್ದರಿಂದ, ಕುಪಿತಗೊಂಡ ಅಭಿಮಾನಿಗಳು ನಮಗೆ ಟಿಕೆಟ್ ಬೇಕು ಎಂದು ಗದ್ದಲ ಎಬ್ಬಿಸಿದ್ದರು. ಇದರಿಂದ ಕೆಲಕಾಲ ಮಾಲ್ ನಲ್ಲಿ ಗೊಂದಲದ ವಾತಾವರಣ ಉಂಟಾಯಿತು.
ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಅಭಿಮಾನಿಗಳನ್ನು ಸಮಾಧಾನಗೊಳಿಸಿ, ಸ್ಥಳದಿಂದ ಚದುರಿಸಿದರು. ಇನ್ನು ಹಿಂದಿ, ತಮಿಳು, ತೆಲುಗು ಹಾಗೂ ಅನ್ಯ ಭಾಷೆಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದ ಕೆಲವು ಕಡೆಗಳಲ್ಲಿ “ಕೆಜಿಎಫ್’ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ವಾಗ್ವಾದಕ್ಕೆ ಇಳಿದ್ದದ್ದೂ ಕಂಡು ಬಂದಿತು.