ಉಪ್ಪಿಗೆ ಗಿಡ ಗಿಫ್ಟ್ ಕೊಟ್ಟ ಅಭಿಮಾನಿಗಳು
Team Udayavani, Sep 19, 2019, 3:04 AM IST
ನಟ ಉಪೇಂದ್ರ ಅವರಿಗೆ ಬುಧವಾರ ಹುಟ್ಟುಹಬ್ಬದ ಸಂಭ್ರಮ. ಉಪ್ಪಿ ಮನೆ ಮುಂದೆಯೂ ಬೆಳಗ್ಗೆಯಿಂದಲೇ ಅಭಿಮಾನಿಗಳು ಕೈಯಲ್ಲಿ ಗಿಡ ಹಿಡಿದು ನಿಂತಿದ್ದರು. ಅದಕ್ಕೆ ಕಾರಣ, ಉಪೇಂದ್ರ ಅವರ ಮನವಿ. ಹಾರ, ಪೇಟಾ ಬದಲು ಗಿಡ ನೀಡಿ ಎಂದು ಉಪೇಂದ್ರ ಕೇಳಿಕೊಂಡಿದ್ದರು.
ಅದರಂತೆ ಬಹುತೇಕ ಅಭಿಮಾನಿಗಳು ಗಿಡ ನೀಡಿ ತಮ್ಮ ನೆಚ್ಚಿನ ನಟನ ಜೊತೆ ಫೋಟೋಗೆ ಫೋಸ್ ಕೊಟ್ಟರು. ಉಪೇಂದ್ರ ಅವರು ನಟಿಸಲು ಒಪ್ಪಿಕೊಂಡಿರುವ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು ಬಂದು ಶುಭಕೋರುವ ಜೊತೆಗೆ ಚಿತ್ರದ ಟೈಟಲ್, ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದರು.