ಸುಖಕರ ಪ್ರಯಾಣ, ಸ್ವಲ್ಪ ನಿಧಾನ

Team Udayavani, Dec 1, 2019, 10:19 AM IST

fillm-tdy-1

ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿರುವಹೊಸ ಪ್ರತಿಭೆಗಳ ಯೋಚನಾ ಲಹರಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಅದರಲ್ಲೂ ಚಿತ್ರರಂಗಕ್ಕೆ ಅಡಿಯಿಡುತ್ತಿರುವ ಬಹುತೇಕಹೊಸಬರು, ಮಿಲೆನಿಯಲ್‌ಗ‌ಳ (ಈಗಿನ ತಲೆಮಾರಿನ ಯುವಕ-ಯುವತಿಯರು) ಬದುಕಿನ ಚಿತ್ರಣವನ್ನು ವಿವಿಧ ಆಯಾಮಗಳಲ್ಲಿ ತೆರೆದಿಡಲು ಹೆಚ್ಚು ಆಸಕ್ತರಾಗುತ್ತಿದ್ದಾರೆ. ಅಂಥ ಚಿತ್ರಗಳ ಸಾಲಿಗೆ, ಈ ವಾರ ತೆರೆಗೆ ಬಂದಿರುವ “ಮುಂದಿನ ನಿಲ್ದಾಣ’ ಚಿತ್ರ ಮತ್ತೂಂದು ಹೊಸ ಸೇರ್ಪಡೆ.

ಮೊದಲೇ ಹೇಳಿದಂತೆ “ಮುಂದಿನ ನಿಲ್ದಾಣ’ ಮಿಲೆನಿಯಲ್‌ಗ‌ಳ ಸುತ್ತ ಸಾಗುವ ಚಿತ್ರ. ಲೈಫ್ನಲ್ಲಿ ಒಳ್ಳೆಯ ಕೆಲಸ, ಹಣ ಸಂಪಾದನೆ, ಸ್ಥಾನಮಾನ, ಬದುಕಿನ ಭದ್ರತೆ ಮುಖ್ಯವೋ, ಅಥವಾ ಮದುವೆ-ಸಂಬಂಧಗಳು, ಸಾಮಾಜಿಕ ಮೌಲ್ಯಗಳು ಮುಖ್ಯವೋ ಎಂಬ ವಿಷಯಗಳು ಇಂದಿನ ತಲೆಮಾರಿನಲ್ಲಿ ಹೆಚ್ಚು ಚರ್ಚಿತ ಸಂಗತಿಗಳು. ಇದರ ಪ್ರತಿರೂಪವಾಗಿ ಸಾಫ್ಟ್ ವೇರ್‌ ಇಂಜಿನಿಯರ್‌ ಪಾರ್ಥ, ಆರ್ಟ್‌ ಕ್ಯುರೇಟರ್‌ ಮೀರಾ ಶರ್ಮಾ ಮತ್ತು ಮೆಡಿಕಲ್‌ ವಿದ್ಯಾರ್ಥಿನಿ ಅಹನಾ ಕಶ್ಯಪ್‌ ಎಂಬ ಮೂವರುಮಿಲೆನಿಯಲ್‌ಗ‌ಳ ಲೈಫ್ ಜರ್ನಿಯಲ್ಲಿ ಟ್ವಿಸ್ಟ್‌-ಟರ್ನಿಂಗ್‌ ನಡುವೆ ಸಿಗುವ “ಮುಂದಿನ ನಿಲ್ದಾಣ’ ಯಾವುದು, ಅದು ಹೇಗಿರುತ್ತದೆ ಅನ್ನೋದೇ ಚಿತ್ರದ ಕಥಾ ಹಂದರ. ಈ ಜರ್ನಿಯಲ್ಲಿ ಯಾರ್ಯಾರು, ಯಾವ್ಯಾವ “ನಿಲ್ದಾಣ’ ಸೇರಿಕೊಳ್ಳುತ್ತಾರೆ, ಒಬ್ಬೊಬ್ಬರ ಜರ್ನಿ ಹೇಗೆಲ್ಲ ಇರುತ್ತದೆ, ಅನ್ನೋದನ್ನ ತಿಳಿದುಕೊಳ್ಳುವಕುತೂಹಲವಿದ್ದರೆ, “ಮುಂದಿನ ನಿಲ್ದಾಣ’ ಚಿತ್ರವನ್ನು ನೋಡಲು ಅಡ್ಡಿಯಿಲ್ಲ.

ಗಾಂಧಿನಗರದ ಮಾಮೂಲಿ ಕಮರ್ಷಿಯಲ್‌ಚಿತ್ರಗಳಿಗಿಂತ ಇಂಥ ಚಿತ್ರಗಳು ವಿಭಿನ್ನವಾಗಿರುವುದರಿಂದ, ಇದರಲ್ಲಿ ಭರ್ಜರಿ ಆ್ಯಕ್ಷನ್‌, ಮಾಸ್‌ ಡೈಲಾಗ್ಸ್‌, ಮಸ್ತ್ ಸ್ಟೆಪ್ಸ್‌, ಅತಿಯಾದ ಬಿಲ್ಡಪ್‌ ಯಾವುದನ್ನೂ ನಿರೀಕ್ಷಿಸುವಂತಿಲ್ಲ. ಆದರೆ ಚಿತ್ರದ ಕಥೆ, ಸಾಗುವ ರೀತಿ, ಪಾತ್ರಗಳು ಎಲ್ಲವೂ ನಿಧಾನವಾಗಿ ನೋಡುಗರನ್ನು ಆವರಿಸಿಕೊಳ್ಳುತ್ತದೆ. ಚಿತ್ರದ ವಿಷಯಗಳು ಒಂದಷ್ಟು ಗಂಭೀರ ಚರ್ಚೆಗೆ ಹಚ್ಚುವುದರಿಂದ, “ಮುಂದಿನ ನಿಲ್ದಾಣ’ ತಲುಪುವವರೆಗೂ ನೋಡುಗರದ್ದು ಕೂಡ ಕೊಂಚ ಗಂಭೀರ ಪ್ರಯಾಣ ಎನ್ನಬಹುದು. ಹಾಗಂತ ಇಡೀ ಚಿತ್ರ ಎಲ್ಲೂ ಬೋಧನೆಯ ಮಟ್ಟಕ್ಕೆ ಇಳಿಯದೆ ಮನರಂಜಿಸುತ್ತದೆ. ಜರ್ನಿಯ ಜೊತೆಗೆ ಒಂದು ಸಂದೇಶವನ್ನು ನೋಡುಗರಿಗೆನೀಡುವ ಪ್ರಯತ್ನ ಚೆನ್ನಾಗಿದೆ. ಆದರೆ ಚಿತ್ರಕಥೆಯ ನಿರೂಪಣೆಯ ವೇಗ ಮಂದಗತಿಯಲ್ಲಿರುವುದರಿಂದ, ಅದೆಲ್ಲವನ್ನೂ ಕಣ್ತುಂಬಿಕೊಳ್ಳಲು ಪ್ರೇಕ್ಷಕ ಪ್ರಭುಗಳಿಗೆ ಸಾವದಾನ ತುಂಬಾ ಮುಖ್ಯ.

ಚಿತ್ರಕಥೆ ನಿರೂಪಣೆಯ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಹರಿಸಿ ಕೊಂಚ ವೇಗ ಕೊಟ್ಟಿದ್ದರೆ, ಥಿಯೇಟರ್‌ನಲ್ಲಿ ಸ್ವಲ್ಪ ಬೇಗನೆ “ಮುಂದಿನ ನಿಲ್ದಾಣ’ ತಲುಪುವ ಸಾಧ್ಯತೆಯಿತ್ತು. ಉಳಿದಂತೆ ಚಿತ್ರದಲ್ಲಿ ನಾಯಕ ಪ್ರವೀಣ್‌ತೇಜ್‌, ರಾಧಿಕಾ ನಾರಾಯಣ್‌, ಅನನ್ಯಾ ಕಶ್ಯಪ್‌,ಅಜಯ್‌ ರಾಜ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದ ಪಾತ್ರಗಳು ಹಾಗೆ ಬಂದು ಹೀಗೆ ಹೋಗುವುದರಿಂದ ಮನಸ್ಸಿನಲ್ಲಿಉಳಿಯುವುದಿಲ್ಲ. ಇನ್ನು ಚಿತ್ರದ ತಾಂತ್ರಿಕಕೆಲಸಗಳು ಗುಣಮಟ್ಟದಲ್ಲಿದ್ದು, ತೆರೆಮೇಲೆ ದೃಶ್ಯಗಳಿಗೆ ಮೆರುಗು ನೀಡಿವೆ. ಚಿತ್ರದಲ್ಲಿ ಅಭಿಮನ್ಯು ಸದಾನಂದನ್‌ ಛಾಯಾಗ್ರಹಣ,ಅಜಯ್‌ ಕುಮಾರ್‌ ಸೌಂಡ್‌ ಡಿಸೈನ್‌, ಶ್ರೀಕಾಂತ್‌ ಸಂಕಲನ, ಹಿನ್ನೆಲೆ ಸಂಗೀತ, ವಸ್ತ್ರ ವಿನ್ಯಾಸ,ಕಲರಿಂಗ್‌ ಎಲ್ಲವೂ “ಮುಂದಿನ ನಿಲ್ದಾಣ’ದ ಅಂದವನ್ನು ಹೆಚ್ಚಿಸಿವೆ.

ಒಟ್ಟಾರೆ ಒಂದಷ್ಟು ಒಪ್ಪಬಹುದಾದ ಲೋಪಗಳನ್ನು ಬದಿಗಿಟ್ಟು ಹೇಳುವುದಾದರೆ, “ಮುಂದಿನ ನಿಲ್ದಾಣ’ ಒಂದೊಳ್ಳೆ ಪ್ರಯತ್ನ ಅಂತ ಚಿತ್ರ ತಂಡದ ಬೆನ್ನು ತಟ್ಟಬಹುದು. ಹೊಸತನದ ಚಿತ್ರಗಳನ್ನು ಆಸ್ವಾಧಿಸುವವರು ವಾರಾಂತ್ಯದಲ್ಲಿ ಒಮ್ಮೆ ಚಿತ್ರವನ್ನು ನೋಡಲು ಅಡ್ಡಿ ಇಲ್ಲ.

-ಜಿ.ಎಸ್‌ ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.