ಮಳೆಬಿಲ್ಲು ಚಿತ್ರೀಕರಣ ಮುಕ್ತಾಯ


Team Udayavani, Dec 12, 2018, 11:35 AM IST

malebil.jpg

ದರ್ಶನ್‌ ಅಭಿನಯದ “ಚಕ್ರವರ್ತಿ’ ಚಿತ್ರದಲ್ಲಿ “ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ..’ ಎಂಬ ಹಾಡು ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಆ ಹಾಡಿನ ಸಾಲೊಂದು ಹೊಸಬರ ಚಿತ್ರದ ಶೀರ್ಷಿಕೆ ಕೂಡ ಆಗಿದೆ. “ಮಳೆಬಿಲ್ಲು’ ಎಂಬ ಹೆಸರಿಟ್ಟುಕೊಂಡು ಮಾಡಿರುವ ಚಿತ್ರ ಈಗಾಗಲೆ ಸದ್ದಿಲ್ಲದೆಯೇ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ನಾಗರಾಜ್‌ ಹಿರಿಯೂರು ನಿರ್ದೇಶಕರು.

ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದಾರೆ. ಅನನ್ಯ ಎಂಟರ್‌ಪ್ರೈಸಸ್‌ ಬ್ಯಾನರ್‌ನಲ್ಲಿ ನಿಂಗಪ್ಪ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗೆ ಚಿತ್ರದುರ್ಗ, ಹಿರಿಯೂರು ಹಾಗೂ ವಾಣಿವಿಲಾಸ ಸಾಗರ ಸುತ್ತಮುತ್ತಲಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ನಾಯಕ ಶರತ್‌ ಹಾಗೂ ನಾಯಕಿ ನಯನಾ ಕಾಂಬಿನೇಷನ್‌ನಲ್ಲಿ “ಮೊದಲಾಯಿತು ಮೊದಲು ಮೊದಲು ಶುರುವಾಯಿತು..’

ಹಾಗು “ಓ ಪ್ರೀತಿ, ಓ ಪ್ರೀತಿ…’ ಎಂಬ ಎರಡು ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಹೈಟ್‌ ಮಂಜು ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡುಗಳನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರೀಕರಣ ಪೂರ್ಣಗೊಂಡಿದೆ. “ಮಳೆಬಿಲ್ಲು’ ಕಥೆ ಬಗ್ಗೆ ಹೇಳುವುದಾದರೆ, ಪ್ರತಿಯೊಬ್ಬ ಯುವಕರ ಲೈಫ‌ಲ್ಲಿ  ಹುಡುಗಿಯೊಬ್ಬಳ ಪ್ರೀತಿ ಇದ್ದೇ ಇರುತ್ತೆ. ಅಂತಹ ಹುಡುಗಿಯೊಬ್ಬಳು ಚಿತ್ರದ ನಾಯಕನ ಲೈಫ‌ಲ್ಲಿ ಬಂದಾಗ, ಅವನ ಬದುಕು ಹೇಗೆ ಬಲದಾಗುತ್ತದೆ’ ಎಂಬುದು ಕಥೆ.

ಈ ಚಿತ್ರಕ್ಕೆ ಸಿ.ನಾರಾಯಣ್‌ ಛಾಯಾಗ್ರಹಣವಿದೆ. ಗಣೇಶ್‌-ನಾರಾಯಣ್‌ ಸಂಗೀತ ನೀಡಿದ್ದಾರೆ. ಎಂ.ಮುನಿರಾಜು ಸಂಕಲನ ಮಾಡಿದರೆ, ನಾಗಾರಾಜ್‌ ಸಾಹಿತ್ಯವಿದೆ. ಎಂ.ಆರ್‌.ಕಪಿಲ್‌, ಹೈಟ್‌ ಮಂಜು ನೃತ್ಯ ನಿರ್ದೇಶನ ಮಾಡಿದ್ದಾರೆ. ಡಿಫ‌ರೆಂಟ್‌ ಡ್ಯಾನಿ ಸಾಹಸವಿದೆ. ಚಿತ್ರದಲ್ಲಿ ಶರತ್‌, ನಯನಾ, ಸಂಜನಾ, ಕಿರ್ಲೋಸ್ಕರ್‌ ಸತ್ಯನಾರಾಯಣ್‌, ಮೈಕೋ ನಾಗಾರಾಜ್‌, ಶ್ರೀನಿವಾಸ ಪ್ರಭು, ಮಹಾದೇವ್‌, ಚಂದನ್‌, ಡಿಫ‌ರೆಂಟ್‌ ಡ್ಯಾನಿ, ಮೀಸೆ ಅಂಜನಪ್ಪ, ಕೃಷ್ಣ ಮೂರ್ತಿ, ಡಿ.ಕೆ.ಯಶೋಧ, ರವಿತೇಜ, ಹರ್ಷಿತ, ಪ್ರಜ್ವಲ್‌, ದಮಯಂತಿ ನಾಗಾರಾಜ್‌, ಸೌಮ್ಯ, ಲಾವಣ್ಯ ಇತರರು ನಟಿಸಿದ್ದಾರೆ.

ಟಾಪ್ ನ್ಯೂಸ್

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

200

ಮುಂದಿನ ಐಪಿಎಲ್ ಗೆ ಇನ್ನೆರಡು ತಂಡಗಳ ಸೇರ್ಪಡೆ

122

ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ

kangana

“ನಾಲ್ಕನೇ” ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ನಟಿ ಕಂಗನಾ

ದೀಪಾವಳಿಗೆ ಮುಂಚಿತವಾಗಿ ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ

 ದೀಪಾವಳಿ: ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ, ಸುರಕ್ಷಿತವಾಗಿರುವುದು ಹೇಗೆ?

1-33

ಮಾವನಿಗೆ ದಾದಾ ಸಾಹೇಬ್ ಫಾಲ್ಕೆ, ಅಳಿಯನಿಗೆ ಅತ್ಯುತ್ತಮ ನಟ ಪ್ರಶಸ್ತಿ

Untitled-1

ಗೋವಾದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಪಿ.ಚಿದಂಬರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

ಹೈದರಾಬಾದ್‌ ನಲ್ಲಿ ‘ತ್ರಿಶೂಲಂ’ಗೆ ಸಾಹಸ

love mocktail 2

ಲವ್‌ ಮಾಕ್ಟೇಲ್‌-2ಗೆ “ಯು’ ಪ್ರಮಾಣ ಪತ್ರ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

ಟ್ರೇಲರ್‌ನಲ್ಲಿ ‘ಪೆದ್ದು ನಾರಾಯಣ’ ದರ್ಶನ

meghana gaonkar

ಶಿವಾಜಿ ಸುರತ್ಕಲ್‌-2: ಮೇಘನಾ ಗಾಂವ್ಕರ್‌ ಎಂಟ್ರಿ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಕ್ಷೇತ್ರದಲ್ಲಿ ಬಹುದೊಡ್ಡ ಗೌರವವಿದೆ ರೋಷನ್ ಶ್ರೀಕಾಂತ್

ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಕ್ಷೇತ್ರದಲ್ಲಿ ಬಹುದೊಡ್ಡ ಗೌರವವಿದೆ ರೋಷನ್ ಶ್ರೀಕಾಂತ್

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

200

ಮುಂದಿನ ಐಪಿಎಲ್ ಗೆ ಇನ್ನೆರಡು ತಂಡಗಳ ಸೇರ್ಪಡೆ

122

ಬೆಂಗಳೂರಿನಲ್ಲಿ 72 ರೋಹಿಂಗ್ಯಾಗಳು : ಗಡಿಪಾರು ಮಾಡುವ ಯೋಜನೆ ಇಲ್ಲ

1-yrrt

ಕಳವಾಗಿ 2 ಸಂತೆಗೆ ಹೋದರೂ ಮಾಲೀಕರ ಸೇರಿದ 7 ಕುರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.