ಪಾತ್ರಕ್ಕೆ ತೂಕ ಹೆಚ್ಚಿಸಿಕೊಂಡ ಗಣೇಶ್‌ ಹಿಂಗ್‌ ಕಾಣ್ತಾರೆ


Team Udayavani, Jan 31, 2019, 11:57 AM IST

ganseh.jpg

ಈ ಫೋಟೋದಲ್ಲಿರೋದು ಬೇರಾರೂ ಅಲ್ಲ, ನಟ ಗಣೇಶ್‌. ಅವರೇಕೆ ಹೀಗಾಗಿಬಿಟ್ಟರು ಅನ್ನುವ ಪ್ರಶ್ನೆಗೆ ಉತ್ತರ ’99’. ಈ ಚಿತ್ರದ ಫ‌ಸ್ಟ್‌ ಲುಕ್‌ ಇದು. ಈ ಗೆಟಪ್‌ನಲ್ಲಿ ಗಣೇಶ್‌ ಇದೇ ಮೊದಲು ಈ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ. ದಪ್ಪ ಬೆಳೆದಿರುವ ದಾಡಿ, ಗುಂಡು ಗುಂಡಾಗಿರುವ ದೇಹ ಇದೆಲ್ಲಾ ಹೇಗೆ ಸಾಧ್ಯ? ಅದು ’99’ ಆಗಿದ್ದಕ್ಕೆ ಸಾಧ್ಯವಾಗಿದೆ ಅನ್ನೋದು ಚಿತ್ರತಂಡದ ಮಾತು.

ಅಂದ ಹಾಗೆ, ’99’ ಚಿತ್ರ ಸದ್ದಿಲ್ಲದೆಯೇ ಚಿತ್ರೀಕರಣ ಪೂರ್ಣಗೊಂಡಿದೆ. ನಿರ್ದೇಶಕ ಪ್ರೀತಂಗುಬ್ಬಿ ಮತ್ತು ಗಣೇಶ್‌ ಕಾಂಬಿನೇಷನ್‌ನ ಮೂರನೇ ಸಿನಿಮಾ ಇದು. ಇನ್ನು, ರಾಮು ಅವರ ಜೊತೆ ಗಣೇಶ್‌ಗೆ ಇದು ಮೊದಲ ಚಿತ್ರ. ’99’ ತಮಿಳಿನ ಸೂಪರ್‌ ಹಿಟ್ ’96’ ಚಿತ್ರದ ಅವತರಣಿಕೆ. ಗಣೇಶ್‌ ಅವರಿಗೆ ಆ ಪಾತ್ರ ಸೂಕ್ತ ಅನ್ನುವ ಕಾರಣಕ್ಕೆ ಪ್ರೀತಮ್‌ ಗುಬ್ಬಿ, ಅವರೊಂದಿಗೆ ಬಹುಬೇಗನೆ ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ.

ಇದೊಂದು ಅದ್ಭುತವಾದ ಪ್ರೇಮಕಾವ್ಯ. ಇಲ್ಲೊಂದು ಲವ್‌ಸ್ಟೋರಿ ಇದೆಯಾದರೂ, ಅದು ಬೇರೆಯದ್ದೇ ಮಜಾ ಕೊಡುವಂತಹ ಲವ್‌ಸ್ಟೋರಿ. ಈ ಚಿತ್ರದ ಪಾತ್ರಕ್ಕಾಗಿ ಗಣೇಶ್‌ ಏನೆಲ್ಲಾ ಕಸರತ್ತು ಮಾಡಿದ್ದಾರೆ ಗೊತ್ತಾ? ಆ ಬಗ್ಗೆ ಸ್ವತಃ ಗಣೇಶ್‌ ಅವರೇ ‘ಉದಯವಾಣಿ’ ಬಳಿ ಒಂದಷ್ಟು ಸ್ವಾರಸ್ಯಕರ ವಿಷಯಗಳನ್ನು ಬಿಚ್ಚಿಡುತ್ತಾರೆ.

ನಾನು ’99’ ಚಿತ್ರದ ಪಾತ್ರಕ್ಕೆ ಬರೋಬ್ಬರಿ ಐದು ಕೆಜಿ ತೂಕ ಹೆಚ್ಚಿಸಿಕೊಂಡಿದ್ದೇನೆ. ಅದೂ ಕೇವಲ ಒಂದುವರೆ ತಿಂಗಳಲ್ಲಿ ಅನ್ನೋದು ವಿಶೇಷ. ‘ಗೀತಾ’ ಚಿತ್ರೀಕರಣ ವೇಳೆಯಲ್ಲೇ ’99’ ಚಿತ್ರದ ಪಾತ್ರದ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಹೇಗೆಂದರೆ, ಬಿಡುವಿನ ವೇಳೆ, ಐಸ್‌ಕ್ರೀಂ, ಚಾಕೋಲೇಟ್, ಸ್ವೀಟ್ಸ್‌ ಸೇರಿದಂತೆ ಇತ್ಯಾದಿ ತಿನಿಸುಗಳನ್ನು ಸಿಕ್ಕಾಪಟ್ಟೆ ತಿನ್ನುತ್ತಿದ್ದೆ. ಹಾಗೆ ಮಾಡಿದ್ದಕ್ಕೆ ’99’ ಚಿತ್ರೀಕರಣ ಹೊರಡುವ ಸಮಯದಲ್ಲಿ ನಾನು ತೂಕ ಹೆಚ್ಚಾಗಿದ್ದು. ಆ ಪಾತ್ರದಲ್ಲಿ ಸಾಕಷ್ಟು ವಿಶೇಷತೆ ಇದೆ.

ಅದೊಂಥರಾ ಜಾಲಿ ಹುಡುಗನ ಪಾತ್ರ. ಸದಾ ಅರಾಮವಾಗಿರುವ ತನ್ನ ಬದುಕನ್ನು ಹೀಗೇ ಇಟ್ಟುಕೊಳ್ಳಬೇಕು ಅನ್ನುವಂಥದ್ದಲ್ಲ. ಸಾಕಷ್ಟು ಏರಿಳಿತಗಳ ನಡುವಿನ ಬದುಕು ಆ ಪಾತ್ರದ್ದು. ಮುಖದ ಮೇಲೆ ಗಡ್ಡ, ಗುಂಡಾಗಿರುವ ದೇಹ ಆ ಪಾತ್ರ ಬಯಸಿತ್ತು. ಹಾಗಾಗಿ, ಅದಕ್ಕೆ ತಯಾರಾದೆ’ ಎಂದು ತಾವು ಹೆಚ್ಚಿಸಿಕೊಂಡ ತೂಕದ ಹಿಂದಿನ ರಹಸ್ಯ ಬಿಚ್ಚಿಸುತ್ತಾರೆ ಗಣೇಶ್‌.

ಈಗ ಗಣೇಶ್‌ ‘ಗೀತಾ’ ಚಿತ್ರಕ್ಕಾಗಿ ಮತ್ತೆ ತೂಕ ಇಳಿಸುವ ತಯಾರಿಯಲ್ಲಿದ್ದಾರೆ. ಬೆಳಗ್ಗೆ ಎದ್ದವರೇ, ಓಡುತ್ತಿದ್ದಾರೆ. ಮತ್ತೆ ಸಣ್ಣಗಾಗಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ‘ಗೀತಾ’ ಚಿತ್ರದ ಪಾತ್ರ ಕೂಡ ಹೊಸದಾಗಿದೆ. ಹಾಗಾಗಿ, ಅದಕ್ಕೆ ಈಗಾಗಲೇ ತೂಕ ಇಳಿಸಿಕೊಳ್ಳಲು ಮತ್ತೆ ಓಟ ಶುರುಮಾಡಿದ್ದಾರಂತೆ.

’99’ ಚಿತ್ರದಲ್ಲಿ ‘ಜಾಕಿ’ ಭಾವನಾ ಗಣೇಶ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಗಣೇಶ್‌ ಅಭಿನಯದ ‘ಗಿಮಿಕ್‌’ ಮೊನ್ನೆಯಷ್ಟೇ ಪೂರ್ಣಗೊಂಡಿದೆ. ಅದರ ಬೆನ್ನಲ್ಲೇ ’99’ ಕೂಡ ಮುಗಿದು ಹೋಗಿದೆ. ಈಗ ‘ಗೀತಾ’ ಚಿತ್ರೀಕರಣಕ್ಕೆ ಹೋಗುವ ಸಮಯ. ಫೆಬ್ರವರಿ 9 ರಿಂದ ಪುನಃ ‘ಗೀತಾ’ಳನ್ನು ಗಣೇಶ್‌ ಸೇರಿಕೊಳ್ಳಲಿದ್ದಾರೆ. ಈ ವರ್ಷ ಗಣೇಶ್‌ ಅಭಿಮಾನಿಗಳಿಗೆ ಹಬ್ಬ ಅನ್ನೋದು ಪಕ್ಕಾ. ಈ ಮೂರು ಚಿತ್ರಗಳು ಇದೇ ವರ್ಷ ತೆರೆ ಕಂಡರೂ ಅಚ್ಚರಿ ಇಲ್ಲ.

ಟಾಪ್ ನ್ಯೂಸ್

1-sdsadsa

ಕಂಚು ಗೆದ್ದರೂ ಕ್ಷಮೆಯಾಚಿಸಿದ ಪೂಜಾಗೆ ಪ್ರಧಾನಿ ಮೋದಿ ಸಾಂತ್ವನ

750

ಶಾಸಕ ಜಮೀರ್‌ ಅಹಮದ್‌ ವಿದೇಶಿ ಹೂಡಿಕೆ ಕೆದಕುತ್ತಿರುವ ಎಸಿಬಿ

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಕಾಮನ್‌ವೆಲ್ತ್‌ ಗೇಮ್ಸ್‌ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ

ಕಾಮನ್‌ವೆಲ್ತ್‌ ಗೇಮ್ಸ್‌ : ಭಾರತೀಯ ಪುರುಷರ ಹಾಕಿ: ಫೈನಲಿಗೆ ಲಗ್ಗೆ

22-gavanil

ಕಾಮನ್‌ವೆಲ್ತ್‌ ಗೇಮ್ಸ್‌ : 10,000 ಮೀ. ನಡಿಗೆ:  ಸಂದೀಪ್‌ಗೆ ಕಂಚು

21-meeting

ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಿರಲಿ; ನೀತಿ ಆಯೋಗದ ಸಭೆಯಲ್ಲಿ ಸಿಎಂಗಳ ಆಗ್ರಹ

ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್‌ ರಂಜನ್‌ ಸಿಂಗ್‌

ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್‌ ರಂಜನ್‌ ಸಿಂಗ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

miss nandini

ಟ್ರೇಲರ್ ನಲ್ಲಿ ‘ನಂದಿನಿ ಟೀಚರ್’ ಎಂಟ್ರಿ

ಕಿಚ್ಚನ ಕೈಯಲ್ಲಿ ಗಾಳಿಪಟ-2 ಹಾಡು

ಕಿಚ್ಚನ ಕೈಯಲ್ಲಿ ಗಾಳಿಪಟ-2 ಹಾಡು

love-360

ಮುದ್ದು ಪ್ರೇಮಿಗಳ ಥ್ರಿಲ್ಲರ್‌ ಜರ್ನಿ: ಲವ್‌ 360ಯಲ್ಲಿ ಶಶಾಂಕ್‌ ಕನಸು

ಪುನೀತ್‌ ಸ್ಮರಣಾರ್ಥ ಆ್ಯಂಬುಲೆನ್ಸ್‌ ಕೊಡುಗೆ

ಪುನೀತ್‌ ಸ್ಮರಣಾರ್ಥ ಆ್ಯಂಬುಲೆನ್ಸ್‌ ಕೊಡುಗೆ

monsoon raaga

ಮಳೆ, ಡಾಲಿ ಮತ್ತು ಹೃದಯ ರಾಗ…: ‘ಮಾನ್ಸೂನ್‌ ರಾಗ’ ಟ್ರೇಲರ್‌ ರಿಲೀಸ್‌

MUST WATCH

udayavani youtube

NEWS BULLETIN 08-08-2022

udayavani youtube

ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ ಗೆ ಉಡುಪಿ ಜಿಲ್ಲಾಡಳಿತದಿಂದ ಸನ್ಮಾನ

udayavani youtube

ಮೈಸೂರು ದಸರಾ : ಮಳೆಯ ನಡುವೆಯೇ ಗಜ ಪಯಣಕ್ಕೆ ಸಂಭ್ರಮದ ಚಾಲನೆ…

udayavani youtube

ಮಳೆಗಾಲದಲ್ಲಿ ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ..

udayavani youtube

ಒಂದು ಮೂಟೆಯ ಗೊಬ್ಬರದ ದುಡ್ಡಿನಲ್ಲಿ ೧ವರ್ಷದ ಜೀವಾಮೃತ ತಯಾರು ಮಾಡಬಹುದು!

ಹೊಸ ಸೇರ್ಪಡೆ

1-asd-da-dsa

ಇಸ್ರೇಲ್‌ ಕಾರ್ಯಾಚರಣೆ: ಕ್ಷಿಪಣಿ ಹಾರಿಸಿ ಉಗ್ರ ಕಮಾಂಡರ್‌ ಹತ್ಯೆ

1-sdsadsa

ಕಂಚು ಗೆದ್ದರೂ ಕ್ಷಮೆಯಾಚಿಸಿದ ಪೂಜಾಗೆ ಪ್ರಧಾನಿ ಮೋದಿ ಸಾಂತ್ವನ

750

ಶಾಸಕ ಜಮೀರ್‌ ಅಹಮದ್‌ ವಿದೇಶಿ ಹೂಡಿಕೆ ಕೆದಕುತ್ತಿರುವ ಎಸಿಬಿ

1-adsdsa

ಪ್ಯಾರಾ ಟಿಟಿ: ಭವಿನಾ ಪಟೇಲ್‌ಗೆ ಚಿನ್ನ; ಸೋನಾಲ್‌ ಬೆನ್‌ಗೆ ಕಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

ಟಿಟಿ ಪುರುಷರ ಡಬಲ್ಸ್‌ ಫೈನಲ್‌: ಶರತ್‌-ಸಥಿಯನ್‌ಗೆ ಬೆಳ್ಳಿ ಮಿಂಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.