ಚಮಕ್ ಹುಡುಗಿಯ “ಗೀತ ಗೋವಿಂದಂ’ ಚಿತ್ರದ ಫಸ್ಟ್ ಲುಕ್‌ ರಿಲೀಸ್

Team Udayavani, Jun 24, 2018, 2:04 PM IST

ಚಮಕ್ ಹುಡುಗಿ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಅರ್ಜುನ್‌ ರೆಡ್ಡಿ ಸಿನಿಮಾ ಖ್ಯಾತಿಯ ನಟ ವಿಜಯ್‌ ದೇವರಕೊಂಡ ಅಭಿನಯದ “ಗೀತ ಗೋವಿಂದಂ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಅಲ್ಲದೇ ಚಿತ್ರವನ್ನು ಪರಶುರಾಮ್‌ ನಿರ್ದೇಶಿಸುತ್ತಾರೆಂದು ಇತ್ತೀಚೆಗಷ್ಟೇ ಅನೌನ್ಸ್‌ ಆಗಿ “ಗೀತ ಗೋವಿಂದಂ’ ಚಿತ್ರದ ಫ್ರೀ ಲುಕ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿತ್ತು. 

ಇದೀಗ ಚಿತ್ರದ ಫಸ್ಟ್ ಲುಕ್‌ ಬಿಡುಗಡೆಯಾಗಿದ್ದು, ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ತಮ್ಮ ಟ್ವಿಟರ್‌ ಖಾತೆಯಲ್ಲಿ ಚಿತ್ರದ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ.

ಗೀತ ಗೋವಿಂದಂ ಚಿತ್ರದ ಈ ಲುಕ್ ತುಂಬ ಬ್ಯೂಟಿಫುಲ್ ಆಗಿ ಮೂಡಿ ಬಂದಿದೆ. ಅಲ್ಲದೇ ಈ ಹಿಂದೆ ರಶ್ಮಿಕಾ ಮಂದಣ್ಣ ತೆಲುಗಿನ “ಚಲೋ’ ಚಿತ್ರದಲ್ಲಿ ನಾಗಾಶೌರ್ಯ ಅವರಿಗೆ ನಾಯಕಿಯಾಗಿ ನಟಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ