ಹೊಸಬರ ಫ್ಲಾಟ್‌ನಲ್ಲಿ ಮರ್ಡರ್ ಸ್ಟೋರಿ!
ಡಿ.02- ರಿಲೀಸ್
Team Udayavani, Nov 27, 2022, 2:09 PM IST
ಫ್ಲಾಟ್ 9 ಎಂಬ ಚಿತ್ರವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿ.2ರಂದು ತೆರೆಕಾಣುತ್ತಿದೆ. ಕಿಶೋರ್ ಈ ಚಿತ್ರದ ನಿರ್ದೇಶಕ. ಮರ್ಡರ್ ಮಿಸ್ಟ್ರರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸ್ಕಂದ ಅಶೋಕ್, ಚಂದು ಗೌಡ, ತೇಜಸ್ವಿನಿ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಚಿತ್ರದ ಬಗ್ಗೆ ಮಾತನಾಡುವ ಚಂದು ಗೌಡ, “ಚಿತ್ರದಲ್ಲಿ ಸೈಕಿಯಾಟ್ರಿಸ್ಟ್ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಪಾತ್ರ ತುಂಬಾ ಡಿಫರೆಂಟ್ ಅನಿಸಿತು. ಜೊತೆಗೆ ಸ್ಕಂದ ಅಶೋಕ್ ನನ್ನ ಅದ್ಭುತ ಗೆಳೆಯ. ಆತನಿಗಾಗಿ ಒಪ್ಪಿಕೊಂಡೆ ಎಂದೇ ಹೇಳಬಹುದು. ಸಿನಿಮಾ ಚಿತ್ರೀಕರಣ ಒಂದೊಳ್ಳೆ ಅನುಭವವನ್ನು ನೀಡಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ’ ಎಂದರು.
ನಿರ್ದೇಶಕ ಕಿಶೋರ್, “ನನ್ನ ಮೊದಲ ಸಿನಿಮಾವಿದು. ಕ್ರೈಂ ಆಧಾರಿತ ಸಿನಿಮಾ ಕಥೆಯಿದ್ದು, ಹೊಸಬನಾದರೂ ನಾನು ಮಾಡಿಕೊಂಡ ಕಥೆ ಕೇಳಿ ನಂಬಿಕೆಯಿಟ್ಟು ನನ್ನ ಜೊತೆ ಸಿನಿಮಾ ಮಾಡಲು ಸ್ಕಂದ ಅಶೋಕ್ ಹಾಗೂ ಚಂದು ಗೌಡ ಹಾಗೂ ತೇಜಸ್ವಿನಿ ಶರ್ಮಾ ಒಪ್ಪಿಕೊಂಡರು. ಇಡೀ ಚಿತ್ರತಂಡ ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ’ ಎಂದರು.
ಸ್ಕಂದ ಅಶೋಕ್ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರಂತೆ.
ನಾಯಕಿ ತೇಜಸ್ವಿನಿ ಶರ್ಮಾ ಮಾತನಾಡಿ, “ಇದು ನಾನು ಸೈನ್ ಮಾಡಿದ ಮೊದಲ ಸಿನಿಮಾ. ಇಂಜಿನಿಯರಿಂಗ್ ಮುಗಿಸಿ ರಿಸರ್ಚ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೆ. ವಲ್ಡ್ ಸೂಪರ್ ಮಾಡೆಲ್ ಸೌತ್ ಏಷ್ಯಾ ಟೈಟಲ್ ವಿನ್ನರ್ ಕೂಡ ಆಗಿದ್ದೇನೆ. ಸಿನಿಮಾದಲ್ಲಿ ಒಂದೊಳ್ಳೆ ಕಟೆಂಟ್ ಇದೆ. ನನ್ನ ಪಾತ್ರದ ಸುತ್ತ ಇಡೀ ಕಥೆ ಸುತ್ತುತ್ತದೆ’ ಎಂದರು.
“ಕಿಶೋರ್ ಕ್ರಿಯೇಶನ್ಸ್’ ಬ್ಯಾನರ್‌ನಡಿ ಕಿಶೋರ್, ಸಂತೋಷ್ ಕುಮಾರ್, ಸಂತೋಷ್ ಜಿ.ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದಿನೇಶ್ ಕುಮಾರ್ ಸಂಗೀತ ನಿರ್ದೇಶನ, ರಾಕೇಶ್ ಸಿ ತಿಲಕ್ ಛಾಯಾ ಗ್ರಹಣ, ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಗಣೇಶ್ ಮಲ್ಲಯ್ಯ ಸಂಕಲನ ಚಿತ್ರಕ್ಕಿದೆ. ಉಗ್ರಂ ಶರತ್, ಗಣೇಶ್ ರಾವ್ ಒಳಗೊಂಡ ತಾರಾಗಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ
ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್ ಜೋಷಿ ಸಂವಾ
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಹೊಸ ಸೇರ್ಪಡೆ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
ಚೀನಾದ ಗೂಢಚಾರಿಕೆ ಬಲೂನ್ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ
“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು
ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್!
ರಾಶಿ ಫಲ: ಧೀರ್ಘ ಪ್ರಯಾಣಕ್ಕೆ ಅವಕಾಶ, ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ