ಹೊಸಬರ ಕೈಯಲ್ಲಿ ಗಡಿಯಾರ


Team Udayavani, Dec 18, 2018, 11:27 AM IST

gadiyaara.jpg

ನಿರ್ದೇಶಕ ನಾಗಶೇಖರ್‌ ಈ ಹಿಂದೆ “ಗಡಿಯಾರ’ ಎಂಬ ಚಿತ್ರ ಮಾಡುವ ಬಗ್ಗೆ ಹೇಳಿಕೊಂಡಿದ್ದರು. ಇದೇ “ಬಾಲ್ಕನಿ’ಯಲ್ಲಿ ಅದು ಸುದ್ದಿಯೂ ಆಗಿತ್ತು. ಆಮೇಲೆ “ಗಡಿಯಾರ’ ಸದ್ದು ಮಾಡಲಿಲ್ಲ. ಈಗ ಮತ್ತೆ “ಗಡಿಯಾರ’ ಸದ್ದು ಮಾಡುತ್ತಿದೆ. ಹಾಗಂತ, ನಾಗಶೇಖರ್‌ ಗಡಿಯಾರವಲ್ಲ. ಇದು ಸಂಪೂರ್ಣ ಹೊಸಬರೇ ಸೇರಿ ಮಾಡುತ್ತಿರುವ ಹೊಸ “ಗಡಿಯಾರ’. ಹೌದು, ಈಗಾಗಲೇ ಸದ್ದಿಲ್ಲದೆಯೇ “ಗಡಿಯಾರ’ ಶೇ.50 ರಷ್ಟು ಮುಗಿದಿದೆ.

ಈ ಹಿಂದೆ “ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು’ ಎಂಬ ಚಿತ್ರಕ್ಕೆ ನಿರ್ಮಾಣದಲ್ಲಿ ಸಾಥ್‌ ಕೊಟ್ಟಿದ್ದ ಪ್ರಬೀಕ್‌ ಮೊಗವೀರ್‌ ಈಗ “ಗಡಿಯಾರ’ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ವಸ್ತ್ರವಿನ್ಯಾಸ ಸೇರಿದಂತೆ ನಿರ್ಮಾಪಕರೂ ಅವರೇ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಭೋಜಪುರಿ ಭಾಷೆಯಲ್ಲೂ “ಗಡಿಯಾರ’ ತಯಾರಾಗುತ್ತಿದೆ ಎಂಬುದು ನಿರ್ದೇಶಕರ ಮಾತು.

ಸಮಯ ಎಲ್ಲರಿಗೂ ಮುಖ್ಯ. ಕಳೆದು ಹೋದ ಸಮಯ ಮತ್ತೆಂದೂ ಸಿಗುವುದಿಲ್ಲ. ಎಷ್ಟೋ ಸಲ ಸಮಯ ಹತ್ತಿರ ಬಂದಾಗ, ತಳಮಳ, ಒದ್ದಾಟ, ಖುಷಿ, ದುಃಖ ಎಲ್ಲವೂ ಆಗುವುದುಂಟು. ಹಾಗಾದರೆ, ಇಲ್ಲಿರುವ “ಗಡಿಯಾರ’ದಲ್ಲಿ ಇವೆಲ್ಲವೂ ಇದೆಯಾ? ಅದೆಷ್ಟರ ಮಟ್ಟಿಗೆ ಇವೆಲ್ಲ ಅಂಶಗಳಿವೆಯೋ ಗೊತ್ತಿಲ್ಲ. ಆದರೆ, ಇಲ್ಲಿ ಲವ್‌ ಇದೆ, ಕಾಮಿಡಿ ಇದೆ ಎಲ್ಲದ್ದಕ್ಕೂ ಜೊತೆಯಾಗಿ ಇತಿಹಾಸದ ಕಥೆಯೂ ಇದೆ.

ಒಂದಷ್ಟು ಸೈಕಲಾಜಿಕಲ್‌ ವಿಷಯ ಮತ್ತು ಹಾರರ್‌ ಫೀಲ್‌ ಕೊಡುವ ಅಂಶಗಳೂ ಇಲ್ಲಿವೆ. ಇಲ್ಲಿ ಹೆಚ್ಚು ಹಾಸ್ಯಕ್ಕೆ ಒತ್ತು ಕೊಡಲಾಗಿದೆ. ಇನ್ನು, “ಗಡಿಯಾರ’ದಲ್ಲಿ ಇತಿಹಾಸ ವಿಷಯವೂ ಅಡಕವಾಗಿದೆ. ಕದಂಬರು, ಹೊಯ್ಸಳರು, ರಜಪೂತರು, ಚಾಲುಕ್ಯರ ಇತಿಹಾಸದ ಕೆಲ ಘಟನೆಗಳು ಇಲ್ಲಿ ಬರಲಿವೆ. ಆ ರಾಜಮನೆತನದ ಅಂಶಗಳು ಯಾಕೆ ಎಂಬುದಕ್ಕೆ ಚಿತ್ರ ನೋಡಬೇಕು ರಾಜಮನೆತನದ ತಲೆಮಾರಿನವರಿಗೂ ಗೊತ್ತಾಗದ ಕೆಲ ಸೂಕ್ಷ್ಮ ವಿಷಯಗಳನ್ನು ಇಲ್ಲಿ ಹೇಳಹೊರಟಿದ್ದಾರಂತೆ ನಿರ್ದೇಶಕರು.

ಚಿತ್ರದಲ್ಲಿ ಎಸ್‌.ಪಿ.ಸಾಂಗ್ಲಿಯಾನ, ವಿಶೇಷ ಪಾತ್ರ ಮಾಡುತ್ತಿದ್ದು, ಮಲಯಾಳಂ ಹಾಗು ತಮಿಳು ನಟ ರಿಹಾಜ್‌, ಮರಾಠಿ ಮತ್ತು ಹಿಂದಿ ನಟ ಗೌರಿಶಂಕರ್‌ ನಾಯಕರಾದರೆ, ಚಿತ್ರದಲ್ಲಿ ಪ್ರದೀಪ್‌ ಪೂಜಾರಿ, ಮನ್‌ದೀಪ್‌ ರಾಯ್‌, ಡಿಸಿಬಿ ಛಬ್ಬಿ, ಅವಿನಾಶ್‌, ಶೀತಲ್‌ಶೆಟ್ಟಿ, ಪ್ರಕಾಶ್‌ ಬೆಳವಾಡಿ, ರಾಧಮ್ಮ, ರಾಜ್‌ ದೀಪಕ್‌ ಶೆಟ್ಟಿ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ರಾಘವ್‌ ಸುಭಾಷ್‌ ಸಂಗೀತವಿದೆ. ಶ್ಯಾಮ್‌ ಸಿಂಧನೂರು ಛಾಯಾಗ್ರಹಣವಿದೆ. ಜಾಗ್ವಾರ್‌ ಸಣ್ಣಪ್ಪ ಮತ್ತು ಅಲ್ಟಿಮೇಟ್‌ ಶಿವು ಅವರ ಸಾಹಸವಿದೆ. ಚಿತ್ರದಲ್ಲಿ ಮೂರು ಹಾಡುಗಳು ಮತ್ತು ನಾಲ್ಕು ಫೈಟ್‌ಗಳಿವೆ. ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಯಲಿದೆ.

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.