ಗಾಂಧಿಗಿರಿಗೆ ಜೆ.ಡಿ.ಚಕ್ರವರ್ತಿ ಎಂಟ್ರಿ

Team Udayavani, Apr 15, 2019, 3:00 AM IST

ಪ್ರೇಮ್‌ ಅಭಿನಯದ “ಗಾಂಧಿಗಿರಿ’ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿರುವುದು ಗೊತ್ತೇ ಇದೆ. ಆ ಚಿತ್ರತಂಡದಿಂದ ಈಗ ಮತ್ತೂಂದು ಸುದ್ದಿ ಹೊರಬಿದ್ದಿದೆ. ತೆಲುಗು ನಟ ಜೆ.ಡಿ.ಚಕ್ರವರ್ತಿ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದೇ ಆ ಹೊಸ ಸುದ್ದಿ.

ಜೆ.ಡಿ.ಚಕ್ರವರ್ತಿ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ಅರ್ಜುನ್‌ ಸರ್ಜಾ ಅವರು ನಟಿಸುತ್ತಿರುವ “ಕಾಂಟ್ರ್ಯಾಕ್ಟ್’… ಚಿತ್ರದಲ್ಲೂ ಜೆ.ಡಿ.ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ಅವರು ಪೂಜಾಗಾಂಧಿ ನಿರ್ಮಾಣದ “ಉತಾಯಿ’ ಮತ್ತು “ಭೂ’ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ ಎಂಬುದಾಗಿ ಹೇಳಲಾಗಿತ್ತು.

ಅಷ್ಟೇ ಅಲ್ಲ, ಆ ಎರಡೂ ಚಿತ್ರಗಳಿಗೂ ಸ್ವತಃ ಜೆ.ಡಿ.ಚಕ್ರವರ್ತಿ ಅವರೇ ನಿರ್ದೇಶಕರು ಎಂಬುದಾಗಿಯೂ ಪೂಜಾಗಾಂಧಿ ಘೋಷಿಸಿದ್ದರು. ಆದರೆ, ಆ ಎರಡೂ ಚಿತ್ರಗಳು ದಡ ಸೇರಲೇ ಇಲ್ಲ. ಈಗ ತುಂಬಾ ಗ್ಯಾಪ್‌ ಬಳಿಕ ಜೆ.ಡಿ.ಚಕ್ರವರ್ತಿ ಪುನಃ ಕನ್ನಡದಲ್ಲಿ ಸುದ್ದಿಯಾಗುತ್ತಿದ್ದಾರೆ.

ಅಂದಹಾಗೆ, “ಗಾಂಧಿಗಿರಿ’ ಚಿತ್ರದಲ್ಲಿ ಜೆ.ಡಿ.ಚಕ್ರವರ್ತಿ ಅವರದ್ದೇನು ಪಾತ್ರ? ಇದಕ್ಕೆ ಉತ್ತರ ಅವರಿಲ್ಲಿ ಎರಡು ಶೇಡ್‌ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರೇಮ್‌ ಅವರ ಎದುರಾಳಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ರಾಗಿಣಿ ನಾಯಕಿ. ಚಿತ್ರವನ್ನು ರಘುಹಾಸನ್‌ ನಿರ್ದೇಶಿಸುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಅದೆಷ್ಟೋ ಮಂದಿ ನವ ಯುವಕ-ಯುವತಿಯರಿಗೆ ಮೊದಲ ಮತದಾನದ ಚುನಾವಣೆಯಿದು. ಮೊದಲ ಮತದಾನದ ಬಗ್ಗೆ ಅವರಿಗೂ...

  • ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಉಪೆಂದ್ರ ಅಭಿನಯದ "ಐ ಲವ್‌ ಯು' ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿರುವುದರಿಂದ,...

  • ಕಿರುತೆರೆಯ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಪಾರು' ಧಾರಾವಾಹಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗ "ಪಾರು'ಗೆ ಮದುವೆ ಸಂಭ್ರಮ....

  • ಕಾರು, ಬೈಕ್‌ ಹೆಸರಿಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಈಗ ಆ ಸಾಲಿಗೆ ಮತ್ತೂಂದು ಸಿನಿಮಾ ಸೇರುತ್ತಿದೆ. ಅದು "ಪ್ರೀಮಿಯರ್‌ ಪದ್ಮಿನಿ'. ಜಗ್ಗೇಶ್‌...

  • ನಟ ಸುದೀಪ್‌ ಕನ್ನಡದ "ಕೋಟಿಗೊಬ್ಬ-3' ಹಾಗೂ ಹಿಂದಿ ಚಿತ್ರ "ದಭಾಂಗ್‌-3'ನಲ್ಲಿ ಬಿಝಿ. ಇತ್ತ ಕಡೆ ನಿರ್ದೇಶಕ ಸೂರಿ "ಪಾಪ್‌ಕಾರ್ನ್ ಮಂಕಿ ಟೈಗರ್‌' ಚಿತ್ರೀಕರಣದಲ್ಲಿದ್ದಾರೆ....

ಹೊಸ ಸೇರ್ಪಡೆ