ಗಣೇಶ್ ಸಿನ್ಮಾದ ಹೆಸರು “ಸಖತ್’
ಚಮಕ್ ನಂತರ ಸುನಿ ಜೊತೆ ಆಟ
Team Udayavani, Feb 25, 2020, 7:05 AM IST
ಗಣೇಶ್ ಸದ್ಯ ಯೋಗರಾಜ್ಭಟ್ ಅವರ “ಗಾಳಿಪಟ 2′ ಸಿನಿಮಾದ ಜಪ ಮಾಡುತ್ತಿದ್ದಾರೆ. ಆ ಚಿತ್ರದ ಜೊತೆ ಜೊತೆಯಲ್ಲೇ ಇನ್ನೊಂದು ಸಿನಿಮಾ ಕಡೆಯೂ ಗಮನಹರಿಸಿದ್ದಾರೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಗಣೇಶ್ ಹಾಗು “ಸಿಂಪಲ್’ ಸುನಿ ಕಾಂಬಿನೇಷನ್ನಲ್ಲಿ ಸಿನಿಮಾವೊಂದು ಶುರುವಾಗಲಿದೆ ಎಂಬ ಸುದ್ದಿ ಇತ್ತು. ಆದರೆ, ಆ ಚಿತ್ರಕ್ಕೆ ಶೀರ್ಷಿಕೆ ಏನು ಎಂಬುದು ಪಕ್ಕಾ ಆಗಿರಲಿಲ್ಲ. ಈಗ ಶೀರ್ಷಿಕೆ ಪಕ್ಕಾ ಆಗಿದೆ.
ಆ ಚಿತ್ರಕ್ಕೆ “ಸಖತ್’ ಎಂದು ನಾಮಕರಣ ಮಾಡಲಾಗಿದೆ. “ಚಮಕ್’ ಚಿತ್ರದ ಬಳಿಕ ಗಣೇಶ್ ಹಾಗು ಸುನಿ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ. “ಸಖತ್’ ಎಂಬ ಶೀರ್ಷಿಕೆ ಕೇಳಿದಾಕ್ಷಣ, ಅದೊಂದು ಪಕ್ಕಾ ಮನರಂಜನೆಯ ಸಿನಿಮಾ ಅನ್ನೋದು ಪಕ್ಕಾ ಆಗುತ್ತೆ. ಸದಕ್ಕೆ ಚಿತ್ರದ ಪೂಜೆ ನೆರವೇರಿದೆ. ಚಿತ್ರದ ನಾಯಕಿಯಾಗಿ ಸುರಭಿ ಕೂಡ ಆಯ್ಕೆಯಾಗಿದ್ದಾರೆ. ಸುರಭಿಗೆ “ಸಖತ್’ ಕನ್ನಡದ ಮೊದಲ ಚಿತ್ರ.
ಅವರು ಈಗಾಗಲೇ ತಮಿಳು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು, ಈ ಹಿಂದೆ ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರವನ್ನು ನಿರ್ಮಿಸಿದ್ದ ಸುಪ್ರೀತ್ ಅವರು, “ಸಖತ್’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುನಿ ಜೊತೆ ಸುಪ್ರೀತ್ಗೆ ಮೊದಲ ಸಿನಿಮಾ. “ಚಮಕ್’ ಮೂಲಕ ಎಲ್ಲರನ್ನೂ ರಂಜಿಸಿದ್ದ ಗಣೇಶ್ ಹಾಗು ಸುನಿ ಕಾಂಬಿನೇಷನ್, ಈಗ “ಸಖತ್’ ಚಿತ್ರದ ಮೂಲಕವೂ ಹೊಸತನ್ನು ನೀಡುವ ಉತ್ಸಾಹದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ