“ತ್ರಿಬಲ್‌ ರೈಡಿಂಗ್‌’ ಮಾಡೋಕೆ ಗಣೇಶ್‌ ರೆಡಿ!

Team Udayavani, Dec 11, 2019, 7:04 AM IST

ಸದ್ಯ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ “ಗಾಳಿಪಟ-2′ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಗಣೇಶ್‌ ಅಭಿನಯಿಸಲಿರುವ ಮುಂಬರುವ ಚಿತ್ರದ ಕುರಿತಾದ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಗಣೇಶ್‌ “ಗಾಳಿಪಟ-2′ ಚಿತ್ರದ ನಂತರ, “ತ್ರಿಬಲ್‌ ರೈಡಿಂಗ್‌’ ಎನ್ನುವ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ವಿನೋದ್‌ ಪ್ರಭಾಕರ್‌ ಅಭಿನಯದ “ರಗಡ್‌’ ಚಿತ್ರವನ್ನು ನಿರ್ದೇಶಿಸಿದ್ದ ಮಹೇಶ್‌ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

“ತ್ರಿಬಲ್‌ ರೈಡಿಂಗ್‌’ನಲ್ಲಿ ಗಣೇಶ್‌ ಅವರಿಗೆ ಮೂವರು ನಾಯಕಿಯರು ಜೋಡಿಯಾಗಿ ನಟಿಸಲಿದ್ದಾರಂತೆ. ಈ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಮಹೇಶ್‌ ಗೌಡ, “ಸದ್ಯ ಗಣೇಶ್‌ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಸ್ಕ್ರಿಪ್ಟ್ ಮತ್ತಿತರ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಶುರುವಾಗಿದೆ. ಇದೊಂದು ಲವ್‌ ಕಂ ಕಾಮಿಡಿ ಜಾನರ್‌ನಲ್ಲಿ ಮೂಡಿಬರುತ್ತಿರುವ ಚಿತ್ರವಾಗಿದೆ. ಇಡೀ ಚಿತ್ರ ಸಂಪೂರ್ಣ ಹಾಸ್ಯಮಯ ವಾಗಿ ಮೂಡಿಬರಲಿದೆ.

ಗಣೇಶ್‌ ಅವರಿಗೆ ಚಿತ್ರದಲ್ಲಿ ಮೂವರು ಹೀರೋಯಿನ್ಸ್‌ ಇರುತ್ತಾರೆ. ಸದ್ಯ ಈ ಮೂವರು ಹೀರೋಯಿನ್ಸ್‌ಗಾಗಿ ಹುಡುಕಾಟ ಕೂಡ ನಡೆಯುತ್ತಿದೆ. ಉಳಿದಂತೆ ಸಾಧು ಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್‌, ತಬಲ ನಾಣಿ, ಶರತ್‌ ಲೋಹಿತಾಶ್ವ, ಡಿಂಗ್ರಿ ನಾಗರಾಜ್‌, ಉಮೇಶ್‌, ಅರವಿಂದ್‌ ಬೋಳಾರ್‌ ಹೀಗೆ ಕಾಮಿಡಿ ಕಲಾವಿದರ ದೊಡ್ಡ ದಂಡೆ ಚಿತ್ರದಲ್ಲಿರಲಿದೆ. ಮುಂದಿನ ಜನವರಿ ಅಂತ್ಯಕ್ಕೆ ಅಥವಾ ಫೆಬ್ರವರಿ ವೇಳೆಗೆ ಚಿತ್ರದ ಶೂಟಿಂಗ್‌ ಪ್ರಾರಂಭಿಸುವ ಯೋಜನೆ ಇದೆ.

ಚಿತ್ರದ ಟೈಟಲ್‌, ಉಳಿದಂತೆ ಇತರೆ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಇನ್ನಷ್ಟೇ ಅಂತಿಮವಾಗಬೇಕಿದೆ’ ಎಂದು ಮಾಹಿತಿ ನೀಡಿದ್ದಾರೆ. ಇನ್ನು “ಕೃಪಾಳು ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಲ್ಲಿ ರಾಮ್‌ ಗೋಪಾಲ್‌, ಅರುಣ್‌ ಕುಮಾರ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಟ್ಟಾರೆ ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಗಣೇಶ್‌ ಜೊತೆ “ತ್ರಿಬಲ್‌ ರೈಡಿಂಗ್‌’ ಹೋಗೋರು ಯಾರು? ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ