ಗಣೇಶ್-ಸುದೀಪ್ ಸಂಬಂಧಿಕರಂತೆ!
Team Udayavani, Sep 16, 2018, 11:18 AM IST
ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಮಂದಿ ಕಲಾವಿದರು ಸಂಬಂಧಿಗಳಿದ್ದಾರೆ. ಆದರೆ, ಗಣೇಶ್ ಮತ್ತು ಸುದೀಪ್ ಸಂಬಂಧಿಕರೆಂದು ಹೆಚ್ಚಿನವರಿಗೆ ಗೊತ್ತಿದ್ದಂತಿಲ್ಲ. ಆದರೆ, ಈಗ ಆ ವಿಷಯವನ್ನು ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ.
“ನಾನು, ಗಣೇಶ್ ಸಂಬಂಧಿಗಳು’ ಎನ್ನುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ಕಾರಣರಾಗಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಸುದೀಪ್, “ತುಂಬಾ ಹೊತ್ತು ಮಾತನಾಡುತ್ತಾ ಕುಳಿತಿರುವಾಗ ನಾವಿಬ್ಬರು ಸಂಬಂಧಿಗಳು ಎಂಬ ವಿಚಾರ ತಿಳಿಯಿತು. ಈಗ ನನ್ನ ಮನೆಯಲ್ಲಿ “ಗೋಲ್ಡ್’ ಇದೆ.
ನಾನು ಶ್ರೀಮಂತ ಅಲ್ವಾ?’ ಎಂದು ಗಣೇಶ್ ಜೊತೆಗಿನ ಸೆಲ್ಫಿಯೊಂದಿಗೆ ಟ್ವೀಟ್ ಮಾಡಿದ್ದಾರೆ ಸುದೀಪ್. ಇಷ್ಟು ದಿನ ಗೆಳೆಯರಾಗಿದ್ದ ಇವರು ಈಗ ಸಂಬಂಧಿಗಳು ಎಂಬ ವಿಚಾರ ತಿಳಿದು ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದಾರೆ. ಇತ್ತೀಚೆಗೆ ನಡೆದ ಕೆಸಿಸಿ ಟೂರ್ನಿಯಲ್ಲಿ ಗಣೇಶ್ ತಂಡ ಗೆದ್ದಿತ್ತು.