Udayavni Special

ಗಾಂಧಿನಗರಕ್ಕೆ ಕಾಲಿಡಲಿದ್ದಾರೆ “ದರೋಡೆಕೋರರು’!


Team Udayavani, Feb 13, 2019, 5:35 AM IST

kal-bettada.jpg

ಕೆಲ ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಅನುಷ್‌ ಎ. ಶೆಟ್ಟಿ ಅವರ “ಕಳ್ಬೆಟ್ಟದ ದರೋಡೆಕೋರರು’ ಕಾದಂಬರಿ ಈಗ ಸಿನಿಮಾ ರೂಪದಲ್ಲಿ ತೆರೆಮೇಲೆ ಬರಲು ಸಜ್ಜಾಗಿದೆ.  ನಿರ್ದೇಶಕ ದೀಪಕ್‌ ಮಧುವನಳ್ಳಿ “ಕಳ್ಬೆಟ್ಟದ ದರೋಡೆಕೋರರು’ ಕಾದಂಬರಿಯನ್ನು ಸಿನಿಮಾವಾಗಿಸಿ ತೆರೆಗೆ ತರುತ್ತಿದ್ದಾರೆ. ಸದ್ಯ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಫೆಬ್ರವರಿ ಅಂತ್ಯದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

“ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ದೀಪಕ್‌ ಮಧುವನಹಳ್ಳಿ, “ಈ ಕಾದಂಬರಿಯನ್ನು ಓದುತ್ತಿದ್ದಂತೆ, ಅದನ್ನು ಸಿನಿಮಾ ಮಾಡುವ ಆಸಕ್ತಿ ಬಂತು. ಮುಂದೆ ಅದರ ಲೇಖಕರ ಅನುಮತಿ ಪಡೆದು ಚಿತ್ರ ಮಾಡಿ ಮುಗಿಸಿದ್ದೇವೆ. ಹಳ್ಳಿಯೊಂದರಲ್ಲಿ ಇರುವ ಆನೆ ಸಾಲು ಮತ್ತು ಕೋಟೆ ಬೀದಿಯಲ್ಲಿರುವ ಎರಡು ಓಣಿಯ ಹುಡುಗರು ಯಾವಾಗಲೂ ದ್ವೇಷ  ಸಾಧಿಸುತ್ತಿತ್ತಾರೆ.

ಅದೇ ಊರಿನಲ್ಲೊಂದು ಬೆಟ್ಟವಿದ್ದು, ರಾತ್ರಿಯಾದರೆ ಅಲ್ಲಿ ದರೋಡೆ ಆಗುತ್ತಿರುತ್ತದೆ. ಇದರಿಂದಾಗಿ ರಾತ್ರಿ ವೇಳೆ ಯಾರೂ ಮನೆಯಿಂದ ಹೊರ ಬರುವುದಿಲ್ಲ. ಆ ವೇಳೆಯಲ್ಲಿ ಜನರು ಆಚೆ ಬರುವುದಿಲ್ಲ. ಮುಂದೆ ಅಲ್ಲಿ ಒಬ್ಬೊಬ್ಬರೇ ಕಾಣೆಯಾಗುತ್ತಾರೆ. ಅದು ಹೇಗೆ ಎನ್ನುವುದೇ ಚಿತ್ರದ ಕಥಾಹಂದರ. ಇದರ ನಡುವೆ ನವಿರಾದ ಪ್ರೇಮಕಥೆ ಕೂಡ ಬರುತ್ತದೆ. ಅದು ಏನಂತ ತಿಳಿಯಬೇಕಾದರೆ, ಚಿತ್ರ ನೋಡಬೇಕು ಎನ್ನುತ್ತಾರೆ ನಿರ್ದೇಶಕರು. 

“ಕಳ್ಬೆಟ್ಟದ ದರೋಡೆಕೋರರು’ ಚಿತ್ರದಲ್ಲಿ “ರಾಮ ರಾಮರೇ’ ಚಿತ್ರದ ಖ್ಯಾತಿಯ ನಟರಾಜ್‌ ನಾಯಕನಾಗಿ ಮತ್ತು ಕಿರುತೆರೆಯ ಶ್ವೇತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹೇಮಂತ್‌ ಸುಶೀಲ್‌, ದಾನಪ್ಪ, ಸಿದ್ದರಾಜ್‌ ಕಲ್ಯಾಣ್‌ಕರ್‌, ಸಂಜು, ಗೌತಮ್‌, ಕುಮುದವಲ್ಲಿ, ಗಣೇಶ್‌ ರಾವ್‌ ಕೇಸರ್ಕರ್‌ ಸೇರಿದಂತೆ ಸುಮಾರು 35 ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅನೂಪ್‌ ಸೀಳಿನ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಬ್ರಿಡ್ಜ್ ಫಿಲಂಸ್‌ ಬ್ಯಾನರ್‌ನಲ್ಲಿ ಕಿರಣ್‌ ಕುಮಾರ್‌, ವಿನಯ್‌, ಶ್ರೀವತ್ಸ  ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಈಗಾಗಲೇ ಚಿತ್ರದ ಟೈಟಲ್‌, ಪೋಸ್ಟರ್‌ ಮತ್ತು ಬಿಡುಗಡೆಯಾಗಿದ್ದು, ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಖುಷಿಯಲ್ಲಿರುವ ಚಿತ್ರತಂಡ ಫೆಬ್ರವರಿ ಅಂತ್ಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. ಸದ್ಯ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಪ್ರಚಾರದ ಭಾಗವಾಗಿ ಇತ್ತೀಚೆಗೆ ಚಿತ್ರದ “ಓಯ್‌ ಕಮಲಿ…’ ಎಂಬ ಮೊದಲ ವೀಡಿಯೋ ಹಾಡನ್ನು ಬಿಡುಗಡೆ ಮಾಡಿದೆ.

ಟಾಪ್ ನ್ಯೂಸ್

1-haara

ಆರ್ಯನ್ ಗೆ ಜಾಮೀನಿಲ್ಲ :’ಅತಿರೇಕ,ಹೃದಯ ವಿದ್ರಾವಕ’ಎಂದ ಬಾಲಿವುಡ್ ಮಂದಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

ಹುಣಸೂರು: ಟಿಬೇಟಿಯನ್ನರ ಕ್ಯಾಂಪಿಗೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ.!

eshwarappa

ದಿಟ್ಟ ನಿಲುವಿಗೆ ಇಂದಿರಾ ಗಾಂಧಿಯವರನ್ನೂ ಹೊಗಳಿದ್ದೆವು : ಸಚಿವ ಕೆ.ಎಸ್. ಈಶ್ವರಪ್ಪ

aaryan

ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿಲ್ಲ: ಆರ್ಯನ್ ಖಾನ್ ಗೆ ಜೈಲೇ ಗತಿ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

ತಾಲಿಬಾನ್ ಉಗ್ರರ ರಣಕೇಕೆ; ವಾಲಿಬಾಲ್ ತಂಡದ ಸ್ಟಾರ್ ಆಟಗಾರ್ತಿಯ ಶಿರಚ್ಛೇದನ

1-bc

ಕರ್ನಾಟಕದ 12 ದ್ವೀಪಗಳಿಗಾಗಿ ಗೋವಾ ಸರಕಾರದಿಂದ ಕೇಂದ್ರಕ್ಕೆ ಮನವಿ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kadala teerada barghavaru

ಕಡಲ ತೀರದಲ್ಲಿ ಹೊಸಬರ ಕನಸು

ಸೋನು ಗೌಡ ಕೈಯಲ್ಲಿ ವೆಡ್ಡಿಂಗ್‌ ಗಿಫ್ಟ್

ಸೋನು ಗೌಡ ಕೈಯಲ್ಲಿ ವೆಡ್ಡಿಂಗ್‌ ಗಿಫ್ಟ್

ರಾಘವೇಂದ್ರ ರಾಜ್‌ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ರಾಘವೇಂದ್ರ ರಾಜ್‌ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

gjkjhgfd

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಭಾಷಣ!

ಹೊರಬಂತು ‘ಕ್ರಿಮಿನಲ್‌’ ಫ‌ಸ್ಟ್‌ ಲುಕ್‌

ಹೊರಬಂತು ‘ಕ್ರಿಮಿನಲ್‌’ ಫ‌ಸ್ಟ್‌ ಲುಕ್‌

MUST WATCH

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

udayavani youtube

ಮಲೆನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ

udayavani youtube

ನಮ್ಮ ಸೇನೆಗೊಂದು ಸಲಾಂ

ಹೊಸ ಸೇರ್ಪಡೆ

ಭತ್ತದ ಗದ್ದೆ ಇದ್ದರೂ ಅಡಿಕೆಗೆ ಸಿಗಬೇಕಾದ ಸೌಲಭ್ಯಕ್ಕೆ ಖೋತಾ 

ಭತ್ತದ ಗದ್ದೆ ಇದ್ದರೂ ಅಡಿಕೆಗೆ ಸಿಗಬೇಕಾದ ಸೌಲಭ್ಯಕ್ಕೆ ಖೋತಾ 

1-haara

ಆರ್ಯನ್ ಗೆ ಜಾಮೀನಿಲ್ಲ :’ಅತಿರೇಕ,ಹೃದಯ ವಿದ್ರಾವಕ’ಎಂದ ಬಾಲಿವುಡ್ ಮಂದಿ

ನಂದಳಿಕೆ ಗೋಳಿಕಟ್ಟೆಯಲ್ಲಿ ಶಾಸನ ಪತ್ತೆ

ನಂದಳಿಕೆ ಗೋಳಿಕಟ್ಟೆಯಲ್ಲಿ ಶಾಸನ ಪತ್ತೆ

Untitled-1

ಸ್ವಚ್ಛ ಶಿರ್ವ-ನಮ್ಮ ಶಿರ್ವ ಅಭಿಯಾನ: ಕಸ ತ್ಯಾಜ್ಯ ನಿರ್ಮೂಲನೆಗೆ ಪಣತೊಟ್ಟ ಗ್ರಾ.ಪಂ.ಅಧ್ಯಕ್ಷ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.