ಸೆನ್ಸಾರ್‌ ಪಾಸಾದ “ಗೀತಾ’

Team Udayavani, Sep 10, 2019, 3:01 AM IST

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ “ಗೀತಾ’ ಚಿತ್ರ ಸೆನ್ಸಾರ್‌ ಆಗಿದ್ದು, “ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಈ ಮೂಲಕ ಚಿತ್ರದ ಬಿಡುಗಡೆ ಈಗ ಅಧಿಕೃತವಾಗಿದೆ. ಚಿತ್ರ ಸೆ.27 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಚಿತ್ರತಂಡ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ಮುಂದಾಗಿದೆ.

ಈ ಚಿತ್ರವನ್ನು ಶಿಲ್ಪಾ ಗಣೇಶ್‌ ಹಾಗೂ ಸಯ್ಯದ್‌ ಸಲಾಂ ಜಂಟಿಯಾಗಿ ನಿರ್ಮಿಸಿದ್ದು, ವಿಜಯ್‌ ನಾಗೇಂದ್ರ ನಿರ್ದೇಶನವಿದೆ. ಚಿತ್ರದಲ್ಲಿ ಲವ್‌ಸ್ಟೋರಿ ಜೊತೆಗೆ ಕನ್ನಡ ಹೋರಾಟದ ಕುರಿತಾದ ಗಂಭೀರ ವಿಷಯವನ್ನು ಹೇಳಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು. ಚಿತ್ರಕ್ಕೆ ಅನೂಪ್‌ ರುಬೆನ್ಸ್‌ ಸಂಗೀತ, ಶ್ರೀಶ ಛಾಯಾಗ್ರಹಣವಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ