ಟ್ರೇಲರ್‌ನಲ್ಲಿ “ಗಿಮಿಕ್‌’ ಝಲಕ್‌

Team Udayavani, May 22, 2019, 2:05 PM IST

ಇತ್ತೀಚೆಗಷ್ಟೇ “99′ ಚಿತ್ರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದ ನಟ ಗೋಲ್ಡನ್‌ ಸ್ಟಾrರ್‌ ಗಣೇಶ್‌ ಈಗ ಮತ್ತೆ ಥಿಯೇಟರ್‌ನಲ್ಲಿ ‘ಗಿಮಿಕ್‌’ ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ. ಹೌದು, ಗಣೇಶ್‌ ಅಭಿನಯದ ಮುಂಬರುವ ಚಿತ್ರ “ಗಿಮಿಕ್‌’ ತೆರೆಗೆ ಬರಲು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಚಿತ್ರದ ಪ್ರಮೋಶನ್‌ನ ಭಾಗವಾಗಿ ಚಿತ್ರತಂಡ ಸೋಮವಾರ “ಗಿಮಿಕ್‌’ನ ಮೊದಲ ಟ್ರೇಲರ್‌ ಬಿಡುಗಡೆ ಮಾಡಿದೆ.

ಇಲ್ಲಿಯವರೆಗೆ ರೊಮ್ಯಾಂಟಿಕ್‌, ಕಾಮಿಡಿ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಾಯಕ ನಟ ಗಣೇಶ್‌ ಈ ಬಾರಿ ಹಾರರ್‌ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ಸುಳಿವನ್ನು ನೀಡಿದ್ದಾರೆ. ಒಂದು ಮನೆಯ ಸುತ್ತ ನಡೆಯುವ ನಿಗೂಢ ಕಥಾಹಂದರ ಹೊಂದಿರುವ ಈ ಚಿತ್ರ ಹಾರರ್‌ – ಕಾಮಿಡಿ ಶೈಲಿಯಲ್ಲಿ ತೆರೆಗೆ ಬರುತ್ತಿದೆ.

ಚಿತ್ರದಲ್ಲಿ ಗಣೇಶ್‌ ಗೆ ಜೋಡಿಯಾಗಿ ರೋನಿಕಾ ಸಿಂಗ್‌ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿ. ಗುರುದತ್‌, ಸಾಧುಕೋಕಿಲ, ರವಿಶಂಕರ್‌ ಗೌಡ, ಮಂಡ್ಯ ರಮೇಶ್‌, ಶೋಭರಾಜ್‌ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತವಿದ್ದು, ನಾಗಣ್ಣ ಅವರ ನಿರ್ದೇಶನವಿದೆ. ಇನ್ನು ‘ಗಿಮಿಕ್‌’ ಟ್ರೇಲರ್‌ ಸಿನಿಪ್ರಿಯರನ್ನು ಬೆಚ್ಚಿ ಬೀಳಿಸಲು ಯಶಸ್ವಿಯಾಗಿದ್ದು, ಸದ್ಯ ಟ್ರೇಲರ್‌ಗೆ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಟ್ರೇಲರ್‌ ರಿಲೀಸ್‌ ಆದ 24 ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಯೂ-ಟ್ಯೂಬ್‌ ನಲ್ಲಿ ನಂಬರ್‌ ಒನ್‌ ಟ್ರೆಂಡಿಂಗ್‌ನಲ್ಲಿದೆ.

ಟ್ರೇಲರ್‌ಗೆ ಸಿಗುತ್ತಿರುವ ರೆಸ್ಪಾನ್ಸ್‌ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟ ಗಣೇಶ್‌, ಸಾಮಾಜಿಕ ಜಾಲತಾಣದಲ್ಲಿ ನೋಡುಗರಿಗೆ ಧನ್ಯವಾದ ತಿಳಿಸಿ¨ªಾರೆ. ಒಟ್ಟಾರೆ ಸದ್ಯ ಟ್ರೇಲರ್‌ ಬಿಡುಗಡೆಯ ಮೂಲಕ ಚಿತ್ರದ ಪ್ರಮೋಶನ್‌ಗೆ ಚಾಲನೆ ನೀಡಿರುವ “ಗಿಮಿಕ್‌’ ಜುಲೈ ಅಂತ್ಯದೊಳಗೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸದ್ಯ ಎಲ್ಲೆ ನೋಡಿದ್ರು ವರ್ಲ್ಡ್ ಕಪ್‌ ಕ್ರಿಕೆಟ್‌ ಫೀವರ್‌. ಅದರಲ್ಲೂ ಕ್ರಿಕೆಟ್‌ ತವರು ಇಂಗ್ಲೆಂಡ್‌ನ‌ಲ್ಲಿ ವರ್ಲ್ಡ್ ಕಪ್‌ ಅಬ್ಬರ ಜೋರಾಗಿದೆ. ಇದರ ನಡುವೆಯೇ...

  • ನಿರ್ದೇಶಕ ಜನಾರ್ದನ್‌ "ಗುಳ್ಟು' ಚಿತ್ರದ ನಂತರ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿತ್ತು. ಸ್ವತಃ ಜನಾರ್ದನ್‌ ಅವರಿಗೇ ಮುಂದೆ ಯಾವ...

  • ಚಿರಂಜೀವಿ ಸರ್ಜಾ ನಾಯಕರಾಗಿರುವ "ಸಿಂಗ' ಚಿತ್ರದ ಟ್ರೇಲರ್‌ ನಿನ್ನೆ (ಜೂ.14) ಬಿಡುಗಡೆಯಾಗಿದ್ದು, ಮಾಸ್‌ ಅಂಶಗಳಿಂದ ಗಮನ ಸೆಳೆದಿದೆ. ಇದರ ಜೊತೆಗೆ ಚಿತ್ರ ಬಿಡುಗಡೆ...

  • ಕಳೆದ ಎರಡು-ಮೂರು ತಿಂಗಳಿನಿಂದ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿರುವ ಪ್ರಿಯಾಂಕಾ ಉಪೇಂದ್ರ ನಟನೆಯ "ದೇವಕಿ' ಬಿಡುಗಡೆಗೆ ಅಂತೂ ದಿನಾಂಕ ನಿಗದಿಯಾಗಿದೆ. ಚಿತ್ರ...

  • ದರ್ಶನ್‌ ನಾಯಕರಾಗಿರುವ "ರಾಬರ್ಟ್‌' ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ನಟಿಸುತ್ತಿರುವ ವಿಚಾರವನ್ನು ನೀವು ಇದೇ ಬಾಲ್ಕನಿಯಲ್ಲಿ ಓದಿದ್ದೀರಿ. ಈಗ "ರಾಬರ್ಟ್‌'...

ಹೊಸ ಸೇರ್ಪಡೆ