ಗೋಲ್ಡ್‌ ಹಿಡಿದ ಸಂಗೀತಾ

ದಿಗಂತ್‌ಗೆ ಚಾರ್ಲಿ ಬೆಡಗಿ ನಾಯಕಿ

Team Udayavani, Feb 26, 2020, 7:02 AM IST

ಡಿಂಪಲ್‌ ಹುಡುಗ ದಿಗಂತ್‌ “ಮಾರಿಗೋಲ್ಡ್‌’ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಆ ಚಿತ್ರಕ್ಕೆ ನಾಯಕಿಯ ಆಯ್ಕೆ ಗೌಪ್ಯವಾಗಿತ್ತು. ಈಗ ದಿಗಂತ್‌ಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ರಕ್ಷಿತ್‌ಶೆಟ್ಟಿ ಅಭಿನಯದ “ಚಾರ್ಲಿ 777′ ಚಿತ್ರದ ನಾಯಕಿಯಾಗಿರುವ ಸಂಗೀತಾ ಶೃಂಗೇರಿ ಈಗ “ಮಾರಿಗೋಲ್ಡ್‌’ ಹಿಂದೆ ಹೊರಟಿದ್ದಾರೆ.

ತಮ್ಮ “ಮಾರಿಗೋಲ್ಡ್‌’ ಚಿತ್ರದ ಆಯ್ಕೆ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಸಂಗೀತಾ ಶೃಂಗೇರಿ, “ನಾನು “ಚಾರ್ಲಿ 777′ ಸಿನಿಮಾ ಮಾಡುವಾಗಲೇ ಸಾಕಷ್ಟು ಕಥೆಗಳು ಬಂದಿದ್ದವು. ಆದರೆ, ಯಾವ ಕಥೆಯೂ ನನಗೆ ಅಷ್ಟೊಂದು ಪ್ರಭಾವ ಬೀರಿರಲಿಲ್ಲ. ಆದರೆ, ಒಂದುವರೆ ವರ್ಷದಿಂದಲೂ ಯಾವ ಕಥೆಯನ್ನೂ ಆಯ್ಕೆ ಮಾಡದ ನನಗೆ, “ಮಾರಿಗೋಲ್ಡ್‌’ ಕಥೆ ಮತ್ತು ಪಾತ್ರ ಇಷ್ಟವಾಯಿತು.

ಹಾಗಾಗಿ ಈ ಚಿತ್ರ ಒಪ್ಪಿದೆ. ಒಪ್ಪೋಕೆ ಇನ್ನೊಂದು ಕಾರಣ, ನನಗೆ ಸರಿ ಎನಿಸುವ ಪಾತ್ರ ಒಂದಾದರೆ, ಕಥೆಯಲ್ಲಿ ಹೊಸತನ ಇದೆ ಎಂಬುದು ಇನ್ನೊಂದು ವಿಷಯ. ಅದರಲ್ಲೂ ನಾನು ಒಳ್ಳೆಯ ತಂಡವನ್ನು ಎದುರು ನೋಡುತ್ತಿದ್ದೆ. ಅದು “ಮಾರಿಗೋಲ್ಡ್‌’ನಲ್ಲಿ ಸಿಕ್ಕಿದೆ. ಟೀಮ್‌ ಎಫ‌ರ್ಟ್‌ ನೋಡಿ, ಕಥೆಯ ಗಟ್ಟಿತನ ನೋಡಿ ಒಪ್ಪಿಕೊಂಡೆ. ಸದ್ಯಕ್ಕೆ “ಚಾರ್ಲಿ 777′ ಚಿತ್ರೀಕರಣ ನಡೆಯುತ್ತಿದೆ. “ಮಾರಿಗೋಲ್ಡ್‌’ ಮಾರ್ಚ್‌ 5 ರಿಂದ ಶುರುವಾಗುತ್ತಿದೆ.

ಕಥೆ ಬಗ್ಗೆ ಹೇಳುವುದಾದರೆ, ಅದೊಂದು ಕಾಮಿಡಿ ಥ್ರಿಲ್ಲರ್‌ ಜಾನರ್‌ ಸ್ಟೋರಿ. ಕಥೆ ಮತ್ತು ಪಾತ್ರ ಕೇಳುವಾಗಲೇ ಮಜ ಎನಿಸಿತು. ಇದು ನನ್ನ ನಾಲ್ಕನೇ ಚಿತ್ರ. ಆಯ್ಕೆಯಲ್ಲಿ ನಾನು ತುಂಬಾ ಚ್ಯೂಸಿ. ಸೋ, ಬಂದ ಯಾವ ಕಥೆಯೂ ಇಷ್ಟ ಆಗಿರಲಿಲ್ಲ. “ಮಾರಿಗೋಲ್ಡ್‌’ನಲ್ಲಿ ವಿಶೇಷತೆ ಇದೆ ಎನಿಸಿದ್ದರಿಂದ, “ಚಾರ್ಲಿ 777′ ಬಳಿಕ ಈ ಸಿನಿಮಾಗೆ ಸಹಿ ಮಾಡಿದ್ದೇನೆ. ನನಗೆ ಮುಖ್ಯವಾಗಿ ಕಥೆ, ಪಾತ್ರ, ಚಿತ್ರತಂಡ, ನಿರ್ಮಾಣ ಸಂಸ್ಥೆ ಇಷ್ಟವಾಯಿತು’ ಎನ್ನುತ್ತಾರೆ ಸಂಗೀತಾ ಶೃಂಗೇರಿ.

ಅಂದಹಾಗೆ, ದಿಗಂತ್‌ ಅಭಿನಯದ ಚಿತ್ರಕ್ಕೆ ಕುಂದಾಪುರ ಮೂಲದ ರಾಘವೇಂದ್ರ ಎಂ.ನಾಯಕ್‌ ನಿರ್ದೇಶಕರು. ಇವರಿಗೆ ಇದು ಮೊದಲ ಚಿತ್ರ. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಆರ್‌.ವಿ. ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ರಘುವರ್ಧನ್‌ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕರಾಗಿದ್ದ ರಘುವರ್ಧನ್‌, ರಾಘವೇಂದ್ರ ನಾಯಕ್‌ ಹೆಣೆದ ಕಥೆ ಕೇಳಿಯೇ, ನಿರ್ಮಾಣ ಮಾಡುತ್ತಿದ್ದಾರಂತೆ.

ಚಿತ್ರದಲ್ಲಿ “ಕಾಕ್ರೋಚ್‌’ ಖ್ಯಾತಿಯ ಸುಧಿ, ಯಶ್‌ ಶೆಟ್ಟಿ, ಸಂಪತ್‌ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಹೀರೋ ಜೊತೆಯಲ್ಲಿ ಮೂರು ಪ್ರಮುಖ ಪಾತ್ರಗಳು ಚಿತ್ರದ ಹೈಲೈಟ್‌ ಆಗಿದ್ದು, ಥ್ರಿಲ್ಲಿಂಗ್‌ ಅಂಶಗಳ ಜೊತೆಯಲ್ಲಿ ಹಾಸ್ಯದೊಂದಿಗೆ ಗಂಭೀರ ವಿಷಯ ಕೂಡ ಹೇಳುವ ಪ್ರಯತ್ನ ಮಾಡಲಾಗಿದೆಯಂತೆ. ಚಿತ್ರಕ್ಕೆ ವೀರ್‌ಸಮರ್ಥ್ ಸಂಗೀತವಿದೆ. ಕೆ.ಎಸ್‌.ಚಂದ್ರಶೇಖರ್‌ ಆವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್‌ ಸಂಕಲನ ಮಾಡುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ