ಸರಕಾರಿ ಶಾಲೆಯ ಬಲೂನ್‌ ಸಾಂಗ್‌

Team Udayavani, Jul 26, 2018, 11:16 AM IST

ರಿಷಭ್‌ ಶೆಟ್ಟಿ ನಿರ್ಮಾಣ, ನಿರ್ದೇಶನದ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮುಂದಿನ ತಿಂಗಳು ತೆರೆಕಾಣಲಿದೆ. ಚಿತ್ರದ ಹಾಡುಗಳು ಹಿಟ್‌ ಆಗುವ ಮೂಲಕ ಸಿನಿಮಾದ ಬಗೆಗಿನ ಕುತೂಹಲ ಕೂಡ ಹೆಚ್ಚಾಗಿದೆ. ಈಗಾಗಲೇ ರಿಷಭ್‌ ತಮ್ಮ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದು, ಎರಡು ಹಾಡುಗಳು ಹಿಟ್‌ ಆಗಿವೆ.

ಅದರಲ್ಲೂ ಚಿತ್ರದ “ದಡ್ಡ’ ಹಾಡು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಅದರ ಬೆನ್ನಲ್ಲೇ “ಹೇ ಶಾರದೇ’ ಹಾಡನ್ನು ಬಿಡುಗಡೆ ಮಾಡಿದ್ದರು. ಈ  ಹಾಡು ಕೂಡಾ ಮೆಚ್ಚುಗೆ ಪಡೆದಿತ್ತು. ಈ ಹಾಡನ್ನು ಆಶಾ ಹಾಗೂ ಸುನಿಧಿ ಎಂಬ ಮಕ್ಕಳಿಬ್ಬರು ಹಾಡಿದ್ದರು. ಈಗ ಮತ್ತೂಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ ರಿಷಭ್‌.


ಅದು “ಬಲೂನ್‌’. ಚಿತ್ರದ “ಬಲೂನ್‌’ ಹಾಡು ಬಿಡುಗಡೆಯಾಗಿದ್ದು, ಹೊಸ ಬಗೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡನ್ನು ಸರಿಗಮಪ ಖ್ಯಾತಿಯ ಜ್ಞಾನೇಶ್ವರ್‌ ಹಾಡಿದ್ದಾರೆ. ಬಲೂನ್‌ ಹಾಡಿನಲ್ಲಿ ಪೋಷಕರ ಹಾಗೂ ಮಕ್ಕಳ ಭಾವನೆಗಳನ್ನು ಹಾಸ್ಯಮಿಶ್ರಿತ ರೀತಿಯಲ್ಲಿ ಹೇಳಲಾಗಿದೆ. ತನ್ನ ತಂದೆ ಬಿಸಿಲಿನಲ್ಲಿ ಬಲೂನ್‌ ಮಾರಲು ನಿಲ್ಲಿಸಿದಾಗ ಬಾಲಕನ ಮನಸ್ಸಿನಲ್ಲಾಗುವ ಭಾವನೆಗಳ ಸುತ್ತ ಈ ಹಾಡು ಸಾಗುತ್ತದೆ.

ವಿಭಿನ್ನ ಶೈಲಿಯಲ್ಲಿ ಈ ಹಾಡು ಇರುವುದರಿಂದ ಇದು ಕೂಡಾ “ದಡ್ಡ’ ಹಾಡಿನಂತೆ ಸೌಂಡ್‌ ಮಾಡುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು. ಚಿತ್ರದಲ್ಲಿ ಅನಂತ್‌ನಾಗ್‌ ಪ್ರಮುಖ ಪಾತ್ರ ಮಾಡಿದ್ದಾರೆ. ಉಳಿದಂತೆ ಬಹುತೇಕ ಹೊಸಬರೇ ಈ ಚಿತ್ರದಲ್ಲಿ ನಟಿಸಿದ್ದು, ಚಿತ್ರದ ಹಾಡುಗಳು ಮಾತ್ರ ಸ್ಟಾರ್‌ಗಳ ಚಿತ್ರದಂತೆ ಹಿಟ್‌ ಆಗಿದೆ ಎಂಬ ಖುಷಿ ಚಿತ್ರತಂಡದ್ದು.


ರಿಷಭ್‌ ಇಲ್ಲಿ ಒಂದು ಸೂಕ್ಷ್ಮ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬ ಅಂಶವನ್ನು ಇಲ್ಲಿ ಹೇಳಲು ಹೊರಟಿದ್ದಾರಂತೆ. ಇದು ರೆಗ್ಯುಲರ್‌ ಶೈಲಿಯ ಸಿನಿಮಾವಲ್ಲ. ಕನ್ನಡದ ಬಗೆಗಿನ ಹೋರಾಟ, ಅಲ್ಲಿನ ಶಾಲೆಗಳ ಪರಿಸ್ಥಿತಿಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ.

ಹಾಗಂತ ಇಲ್ಲಿ ಬೋಧನೆ ಇಲ್ಲ. ವಿಷಯವನ್ನು ಮಜಾವಾಗಿ ಹೇಳಲು ಪ್ರಯತ್ನಿದ್ದೇನೆ. ಇದೊಂದು ಯುನಿವರ್ಸಲ್‌ ಸಬೆjಕ್ಟ್. ನಾನು ಕಾಸರಗೋಡನ್ನು ಮೂಲವಾಗಿಟ್ಟುಕೊಂಡು ಮಾಡಿದ್ದೇನೆ. ಇದನ್ನು ಯಾವ ಊರಿಗೆ ಬೇಕಾದರೂ ಕನೆಕ್ಟ್ ಮಾಡಿಕೊಂಡು ಮಾಡಬಹುದು ಎನ್ನುವುದು ರಿಷಭ್‌ ಮಾತು. 


ಈ ವಿಭಾಗದಿಂದ ಇನ್ನಷ್ಟು

 • "ಡಾಟರ್‌ ಆಫ್ ಪಾರ್ವತಮ್ಮ', ಕಳೆದ ಎರಡು-ಮೂರು ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸತತವಾಗಿ ಸೌಂಡ್‌ ಮಾಡುತ್ತಿರುವ ಹೆಸರು. ಕನ್ನಡ ಚಿತ್ರರಂಗಕ್ಕೂ ಪಾರ್ವತಮ್ಮ...

 • ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾರೆಯರು, ಅದರಲ್ಲೂ ನಾಯಕ ನಟಿಯರು ಯಾವಾಗಲೂ ಫಿಟ್‌ ಆ್ಯಂಡ್‌ ಫೈನ್‌ ಆಗಿ ಕಾಣಲು ಬಯಸುತ್ತಾರೆ. ಅದಕ್ಕಾಗಿ ಪ್ರತಿದಿನ ಯೋಗ, ಜಿಮ್‌,...

 • ಇತ್ತೀಚೆಗಷ್ಟೇ "99' ಚಿತ್ರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದ ನಟ ಗೋಲ್ಡನ್‌ ಸ್ಟಾrರ್‌ ಗಣೇಶ್‌ ಈಗ ಮತ್ತೆ ಥಿಯೇಟರ್‌ನಲ್ಲಿ 'ಗಿಮಿಕ್‌' ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ....

 • ಪ್ರಿಯಾಂಕ ಅಭಿನಯದ "ದೇವಕಿ' ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. "ದೇವಕಿ' ಬಹುತೇಕ ಕೊಲ್ಕತ್ತಾದಲ್ಲೇ ಚಿತ್ರೀಕರಣಗೊಂಡಿದೆ....

 • "ಆಗಸ್ಟ್‌ 9'... ಕನ್ನಡ ಚಿತ್ರರಂಗದ ಮಟ್ಟಿಗೆ ಹಬ್ಬ. ಅದರಲ್ಲೂ ಅಭಿಮಾನಿಗಳ ಪಾಲಿಗಂತೂ ಎಲ್ಲಿಲ್ಲದ ಸಡಗರ, ಸಂಭ್ರಮ. ಹಾಗಂತ, ಆಗಸ್ಟ್‌ 9 ರಂದು ಯಾವುದೇ ಚಿತ್ರೋತ್ಸವ ನಡೆಯುತ್ತಿಲ್ಲ....

ಹೊಸ ಸೇರ್ಪಡೆ

 • ಮನುಷ್ಯನಿಗೆ ವಯಸ್ಸು ಸರಿದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ತಲೆನೋವು ಬರುವುದು ಮೊದಲಾದ ಸಮಸ್ಯೆಗಳ ಉಂಟಾಗುತ್ತದೆ....

 • ಮಾರುತಿ ಸುಝುಕಿ 800 ಜಮಾನಾ ಮುಗಿದು 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಆಲ್ಟೋ 800 ಮಾರುಕಟ್ಟೆಗೆ ಬಂದಿದ್ದಾಗ ದೊಡ್ಡ ಸುದ್ದಿಯಾಗಿತ್ತು. ಬಳಿಕ 2012ರಲ್ಲಿ ಹೊಸ ಆಲ್ಟೋ...

 • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

 • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

 • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

 • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...